30.9 C
Mumbai
June 19, 2026
Mumbai News Kannada
ಸುದ್ದಿ

*ಬಂಟರ ಯಾನೆ ನಾಡವರ ಮಾತೃ ಸಂಘ: ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ*





 

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘದ 2026 -29ರ ಸಾಲಿಗೆ ಮಾಲಾಡಿ ಅಜಿತ್‌ ಕುಮಾರ್ ರೈ ಕೊಡಿಯಾಲ್ ಗುತ್ತು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. 

   ಮುಂದಿನ ದಿನಗಳಲ್ಲಿ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಬಾಂಧವರನ್ನು ಒಂದೇ ಸೂರಿನಡಿ ತರ ಬಯಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವುದು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕೆ ಅಜಿತ್ ಕುಮಾರ್ ರೈ ಹೇಳಿದರು.

ಮುಖ್ಯ ಚುನಾವಣಾಧಿಕಾರಿಯಾಗಿ  ಕರ್ತವ್ಯ ನಿರ್ವಹಿಸಿದ  ವಕೀಲರಾದ ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿ, ವಕೀಲರಾದ ನವೀನ್ ಶೆಟ್ಟಿ ಹಾಗೂ ಚುನಾವಣಾಧಿಕಾರಿ ಸದಾಶಿವ ಶೆಟ್ಟಿಯವರು ಉಪಸ್ಥಿತರಿದ್ದರು.




Related posts

ವಿಶ್ವನಾಥ ಶೆಟ್ಟಿ ಇನ್ನಂಜೆ ವಿಧಿವಶ

Mumbai News Desk

ಉದ್ಯಮಿ ಕಾಂತಿ ಶೆಟ್ಟಿಯವರಿಗೆ ‘ಉದ್ಯೋಗ ಯೋಗದಾನ ಪುರಸ್ಕಾರ’

Mumbai News Desk

ಸತತ 12 ಗಂಟೆ ಚರ್ಚೆ, ವಾಗ್ವಾದ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Mumbai News Desk

ಜೀವನ್ ಸೇವಾ ಬ್ರಿಗೇಡ್‌ ಪಡುಬಿದ್ರಿ: ವೈದ್ಯಕೀಯ ಆರ್ಥಿಕ ನೆರವು ವಿತರಣೆ

Mumbai News Desk

ತಿರುಮಲದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ ಸಂಪನ್ನ: ಮುಂಬೈನ ತಂಡದಿಂದ ಭಕ್ತಿ ಸಮರ್ಪಣೆ

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk