September 17, 2026
Mumbai News Kannada
ಪ್ರಕಟಣೆ

ಜೂ. 21 : ವಸಯಿ ಕರ್ನಾಟಕ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆ





ವಸಯಿ, – ವಸಯಿ ಕರ್ನಾಟಕ ಸಂಘದ   ವತಿಯಿಂದ ಜೂ.21 ರಂದು ಬೆಳಿಗ್ಗೆ ಗಂಟೆ 9.30 ರಿಂದ  ಶ್ರೀಸ್ವಾಮಿ ನಾರಾಯಣ ಸಭಾಂಗಣ, ಮೊದಲನೆಯ ಮಹಡಿ, ಸಾಯಿನಗರ, ವಸಯಿ ಪಶ್ಚಿಮ ಇಲ್ಲಿ ಸಂಘದ ಅಧ್ಯಕ್ಷರಾದ ಕರ್ನೂರು ಶಂಕರ್  ಆಳ್ವ ಅವರ ಅಧ್ಯಕ್ಷತೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ.

ಯೋಗ ಗುರು ಮಿಲನ್ ಠಕ್ಕ‌ರ್ ಮತ್ತು ಮಲ್ಲಿಕಾ ಎಸ್. ಶೆಟ್ಟಿ  ಮತ್ತು ಸಂಗಡಿಗರು  ಮಾರ್ಗದರ್ಶನ ಮಾಡಲಿದ್ದಾರೆ. ಇವರು ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಯೋಗಾಭ್ಯಾಸದಲ್ಲಿ ತಮ್ಮನ್ನು  ತಾವು ತೊಡಗಿಸಿಕೊಂಡಿದ್ದಾರೆ.

ಯೋಗವು ವಿಶ್ವಕ್ಕೆ ಭಾರತದ ದೊಡ್ಡ ಕೊಡುಗೆಯಾಗಿದೆ. ಜೂ.21 ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದ್ದು, 190ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ. ಆ ದಿನ ಅನೇಕ ಸ್ಥಳಗಳಲ್ಲಿ ಶಿಬಿರಗಳು ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಯೋಗವು ತುಂಬಾ ಲಾಭದಾಯಕವಾಗಿದೆ. ಆಧುನಿಕ ಜೀವನ ಶೈಲಿಯ ಒತ್ತಡದಿಂದ ಯುವ ಜನತೆಗೆ ಯೋಗವು ಶಾಂತಿ ಮತ್ತು ಏಕಾಗ್ರತೆಯನ್ನು ಒದಗಿಸುವ ಒಂದು ಶಕ್ತಿಶಾಲಿ ವಿಧಾನ ಎಂದು ಹೇಳಬಹುದು.

ಅಂದು ನಡೆಯುವ ಯೋಗ ದಿನಾಚರಣೆಯಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ  ಹಾಗೂ ಯುವ ವಿಭಾಗ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

——-



Related posts

ಮಾರ್ಚ್ 2 ಕ್ಕೆ ಭಯಂದರ್ ನಲ್ಲಿ ನಡೆಯುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಯಿ ಈಶ್ವರ್ ಗುರೂಜಿ ಭಾಗಿ.

Mumbai News Desk

ಜುಲೈ 19: ಜಯ ಸಿ. ಸುವರ್ಣ ಅಭಿಮಾನಿ ಬಳಗದಿಂದ ‘ಮರಿಯಾಲದ ಮಿನದನ’ ಆಟಿ ಕಾರ್ಯಕ್ರಮ

Mumbai News Desk

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk