August 25, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಸೆ. 1ರಂದು ‘ಸೋಣದ ಸೊಬಗು – ಅರಸಿನ ಕುಂಕುಮ’ ಹಾಗೂ ಯಕ್ಷಗಾನ ಸಂಭ್ರಮ





ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ‘ಸೋಣದ ಸೊಬಗು – ಅರಸಿನ ಕುಂಕುಮ’ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈಭವವು ದಿನಾಂಕ 1 ಸೆಪ್ಟೆಂಬರ್ 2026, ಮಂಗಳವಾರ ಮಧ್ಯಾಹ್ನ 2:00 ಗಂಟೆಗೆ ಕುರ್ಲಾ (ಪೂರ್ವ)ದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಂಗಣದ ಶ್ರೀಮತಿ ಅಪ್ಪಿ ಕೃಷ್ಣ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿ ಅವರು ವಹಿಸಲಿದ್ದಾರೆ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ರವಿರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಅವರು ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಹಿಳಾ ವಿಭಾಗದ ಮಾಜಿ ಜತೆ ಕೋಶಾಧಿಕಾರಿ ಶ್ರೀಮತಿ ರತ್ನಾ ಪ್ರಭಾಕರ್ ಶೆಟ್ಟಿ ಹಾಗೂ ಆಲ್ಟಾ ಹೊಟೇಲ್ಸ್ ಪ್ರೈ. ಲಿ. ಮತ್ತು ಸೆಂಟ್ರಲ್ ಕೇಟರರ್ಸ್ ಪ್ರೈ. ಲಿ. ನ ನಿರ್ದೇಶಕಿ ಶ್ರೀಮತಿ ಪ್ರೇಮಾ ಸುಧಾಕರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಸನ್ಮಾನ ಕಾರ್ಯಕ್ರಮ: ಸಮಾರಂಭದಲ್ಲಿ ಸಮಾಜದ ಗಣ್ಯರಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಉಮಾ ಕೃಷ್ಣ ಶೆಟ್ಟಿ, ಹಿರಿಯ ನಾಗರಿಕರ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೃಷ್ಣ ವಿ. ಶೆಟ್ಟಿ, ಪಿ.ಬಿ. ಶೆಟ್ಟಿ & ಕೋ. ಚಾರ್ಟರ್ಡ್ ಅಕೌಂಟೆಂಟ್ಸ್‌ನ ಸಿಎ ಪ್ರಭಾಕರ್ ಶೆಟ್ಟಿ ಹಾಗೂ ಖ್ಯಾತ ಯಕ್ಷಗುರು ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕಾರ್ಯಕ್ರಮದ ಅಂಗವಾಗಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ ನೆರವೇರಲಿದೆ. ನಂತರ ಮಹಿಳಾ ಸದಸ್ಯೆಯರಿಂದ ಯಕ್ಷಗುರು ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ‘ಸಪ್ತದುರ್ಗಾ ಮಹಾತ್ಮೆ’ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಮುಂದುವರಿಯಲಿದೆ,

ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಶ್ರೀ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶ್ರೀ ಶಶಿಧರ್ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಸವಿನ್ ಜೆ. ಶೆಟ್ಟಿ, ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಕವಿತಾ ಐ. ಆರ್. ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀಮತಿ ಆಶಾ ಸುಧೀರ್ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಸುಚಿತಾ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ವನಿತಾ ವೈ. ನೋಂದ, ಜೊತೆ ಕೋಶಾಧಿಕಾರಿ ಶ್ರೀಮತಿ ಸರೋಜಾ ಬಿ. ಶೆಟ್ಟಿ ಸೇರಿದಂತೆ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿರಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಕಲ್ಯಾಣ್‌ನಲ್ಲಿ ಇಂದು ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ

Mumbai News Desk

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ. ಡಿ 7ರಂದು ಮುಂಬೈಯಲ್ಲಿ  ವಿಶ್ವಬಂಟರ ಸಮಾಗಮ  ಬಂಟರ  ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ: ಐಕಳ ಹರೀಶ್ ಶೆಟ್ಟಿ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು ಹೊಸಾಗ್ಮೆನಾಳೆ (ಮೇ. 1) 91ನೇ ವಾರ್ಷಿಕ ಮಂಗಲೋತ್ಸವ, ಶ್ರೀ ದೇವರ ಮೂರ್ತಿ ಪ್ರತಿಷ್ಠಾ ದಿನಾಚರಣೆ, ಏಕಹಾ ಭಜನಾ ಕಾರ್ಯಕ್ರಮ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ಸೆ. 20 ರಂದು ಡೊಂಬಿವಲಿ ಶ್ರೀ ಜಗದಂಬ ಮಂದಿರದಲ್ಲಿ ಯಕ್ಷಗಾನ ಕಲೆಯ ಆರಾಧನೆ – “ಭಂಡಾರ ಜಾವಡಿ”

Mumbai News Desk