ಪಡುತೋನ್ಸೆ ಹೂಡೆಯ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ಇದರ ಆಶ್ರಯದಲ್ಲಿ ಅಕ್ಟೋಬರ್ 11ರ ರವಿವಾರದಿಂದ ಅಕ್ಟೋಬರ್ 19ರ ಸೋಮವಾರದವರೆಗೆ ಶ್ರೀ ನವರಾತ್ರಿ ಪೂಜಾ ಮಹೋತ್ಸವ ಹಾಗೂ ಅಕ್ಟೋಬರ್ 20ರ ಮಂಗಳವಾರ ವಿಜಯದಶಮಿ ಪೂಜೆಯು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಈ ಉತ್ಸವದ ದಿನಗಳಲ್ಲಿ ಪ್ರತಿದಿನ ಸಂಜೆ 6.00ಕ್ಕೆ ಕಳಸ ಪ್ರತಿಷ್ಠೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8.00ಕ್ಕೆ ಮಹಾಪೂಜೆ ನಡೆದು ನಂತರ ಅನ್ನಪ್ರಸಾದ ವಿತರಣೆ ನೆರವೇರಲಿದೆ. ಅಲ್ಲದೆ ರಾತ್ರಿ 9.00ರಿಂದ 9.30ರ ವರೆಗೆ ದಂಡಿಯಾ ನೃತ್ಯ ಕಾರ್ಯಕ್ರಮವು ಜರುಗಲಿದೆ. ಅಕ್ಟೋಬರ್ 20ರ ವಿಜಯದಶಮಿಯಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:00ರ ವರೆಗೆ ವಿಶೇಷ ವಿಜಯದಶಮಿ ಪೂಜೆ ನಡೆಯಲಿದ್ದು, ಪೂಜೆಯ ನಂತರ ದಂಡಿಯಾ ನೃತ್ಯ ಹಾಗೂ ಮಹಾಪೂಜೆಯ ನಂತರ ಅನ್ನಪ್ರಸಾದ ಸೇವೆ ನೆರವೇರಲಿದೆ. ವಿಜಯದಶಮಿಯ ದಿನದ ಅನ್ನಪ್ರಸಾದ ಸೇವೆಯನ್ನು ಶ್ರೀಮತಿ ಇಂದಿರಾ ಪಾಂಡುರಂಗ ಅಂಚನ್ “ಕಮಲ ಕಿರಣ್” ಹೂಡೆ ಇವರು ವಹಿಸಿಕೊಂಡಿದ್ದಾರೆ.
ಈ ಸನ್ನಿವೇಶದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ, ಶ್ರೀ ದೇವಿ ಬಿಲ್ಲವ ಮಹಿಳಾ ಘಟಕ ಹೂಡೆ ಹಾಗೂ ಯುವ ಘಟಕದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



