October 23, 2026
Mumbai News Kannada
ಸುದ್ದಿ

“ಭಕ್ತಿ, ಶ್ರದ್ಧೆ, ಸಂಸ್ಕೃತಿ ಮತ್ತು ಸಾಮರಸ್ಯದ ಪ್ರತೀಕ ದಸರಾ ಉತ್ಸವ: ಶ್ರೀನಿವಾಸ್ ಕೋಟ್ಯಾನ್” ಬೊಯಿಸರ್ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶರನ್ನವರಾತ್ರಿ – ದಸರಾ ಮಹೋತ್ಸವ ಸಂಪನ್ನ



ಬೊಯಿಸರ್: ಬೊಯಿಸರ್‌ನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ಆವರಣದಲ್ಲಿ ಜರಗಿದ ಶರನ್ನವರಾತ್ರಿ ಮತ್ತು ದಸರಾ ಉತ್ಸವವು ತಾ. 20ರ ವಿಜಯದಶಮಿಯಂದು ಸಂಪನ್ನಗೊಂಡಿತು.

ನವರಾತ್ರಿಯ ಆರಂಭದ ಪ್ರತಿಷ್ಠಾಪನೆ ಹಾಗೂ ಕಲಶ ಪೂಜೆಯನ್ನು ಮಂದಿರದ ವಿಶ್ವಸ್ತರಾದ ಶ್ರೀಮತಿ ಪದ್ಮಾವತಿ ಹಾಗೂ ಸತ್ಯಾ ಕೋಟ್ಯಾನ್ ನೆರವೇರಿಸಿದರು. ಪ್ರತಿಷ್ಠಾಪಿತ ಶ್ರೀ ಚಾಮುಂಡೇಶ್ವರಿ ದೇವಿಯ ಕಲಶದ ಸನ್ನಿಧಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದ್ದು, ಭಕ್ತಾದಿಗಳ ಉಪಸ್ಥಿತಿಯಲ್ಲಿ ದೇವಿಯ ವಿವಿಧ ರೂಪಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ದುರ್ಗೆಯ ಹೂವಿನ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು.

ಶರನ್ನವರಾತ್ರಿ ಹಾಗೂ ವಿಜಯದಶಮಿಯಂದು ಜರಗಿದ ಧಾರ್ಮಿಕ ವಿಧಿ-ವಿಧಾನಗಳನ್ನು ಪುರೋಹಿತ ರಾಜೇಶ್ ಶಾಂತಿ ನೆರವೇರಿಸಿದರು. ಅಕ್ಟೋಬರ್ 20ರ ಮಂಗಳವಾರದಂದು ಜರಗಿದ ದಸರಾ ಉತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ದೇವಿಯ ಹೋಮ ಹಾಗೂ ಪೂರ್ಣಾಹುತಿ ಪೂಜೆಯಲ್ಲಿ ಪರಿಸರದ ಹೋಟೆಲ್ ಉದ್ಯಮಿಗಳು ಮತ್ತು ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಮಂದಿರದ ವಿಶ್ವಸ್ತರಾದ ಶ್ರೀನಿವಾಸ್ ಕೋಟ್ಯಾನ್, “ವಿವಿಧ ಸ್ಥಳಗಳಿಂದ ಬಂದ ನಾವೆಲ್ಲರೂ ಯಾವುದೇ ಜಾತಿ, ಭಾಷೆಯ ಭೇದವಿಲ್ಲದೆ ಕಳೆದ ಒಂಬತ್ತು ದಿನಗಳಿಂದ ಇಲ್ಲಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇವೆ. ದಸರಾ ಉತ್ಸವ ಎಂಬುದು ಭಕ್ತಿ, ಶ್ರದ್ಧೆ, ಸಂಸ್ಕೃತಿ ಮತ್ತು ಸಾಮರಸ್ಯದ ಪ್ರತೀಕವಾಗಿದೆ. ನಾವು ನಮ್ಮೊಳಗಿನ ಅಸುರೀ ಶಕ್ತಿಗಳಾದ ಆಲಸ್ಯ, ಸಂಶಯ, ಕೋಪ, ಭಯ ಇತ್ಯಾದಿಗಳನ್ನು ನಿವಾರಿಸಿಕೊಂಡು ಚಾಮುಂಡೇಶ್ವರಿಯ ಕೃಪಾಪಾತ್ರರಾಗಿ ಎಲ್ಲರ ಉತ್ತಮ ಜೀವನಕ್ಕಾಗಿ ಪ್ರಾರ್ಥಿಸೋಣ” ಎಂದು ನುಡಿದರು.

ಮಂಗಳಾರತಿಯ ಬಳಿಕ ಪ್ರತಿಷ್ಠಾಪಿತ ಶ್ರೀ ದೇವಿಯ ಕಲಶ ವಿಸರ್ಜನಾ ವಿಧಿ ಜರಗಿತು. ನಂತರ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನೆರವೇರಿತು.

ಚಿತ್ರ ಮತ್ತು ವರದಿ: ಪಿ. ಆರ್. ರವಿಶಂಕರ್ (೮೪೮೩೯೮೦೦೩೫ / 8483980035)



Related posts

ಮಂಗಳೂರಿನ ರೈಲು ಬಳಕೆದಾರರ ದೀರ್ಘ ಕಾಲದ ಬೇಡಿಕೆಗಳ ಈಡೇರಿಕೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಪ್ರಯಾಣಿಕರ ಸಮಿತಿ ಒತ್ತಾಯ.

Mumbai News Desk

ಐ ಸಿ ಎಸ್ ಸಿ 10ನೇ ತರಗತಿ ಪರೀಕ್ಷೆ – 2024 : ಕುಶಿ ಉದಯ ಶೆಟ್ಟಿಗೆ ಶೇ 92 ಅಂಕ

Mumbai News Desk

ಐಫೋನ್ ವ್ಯಾಮೋಹಕ್ಕೆ ಬಲಿಯಾಯ್ತು ಸುಂದರ ಪರಿವಾರ : ಇಂದಿನ ಯುವಜನತೆಗೆ ಕಣ್ಣೀರಿನ ಎಚ್ಚರಿಕೆ

Mumbai News Desk

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ

Mumbai News Desk

ಗೋವಾದ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ದುರಂತ: 23 ಮಂದಿ ಸಾವು

Mumbai News Desk

ದ್ವಾರಕಾಮಯಿ ಮಠ ಶ್ರೀ ಕ್ಷೇತ್ರ ಶಂಕರಪುರದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ನುಡಿ -ನಮನ

Mumbai News Desk