October 29, 2026
Mumbai News Kannada
ತುಳುನಾಡು

ನಟಿ ರೇಖಾ ವಿ. ಕುಮಾರ್ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುತ್ರಿಯೊಂದಿಗೆ ಭೇಟಿ: ವಿಶೇಷ ಪೂಜೆ ಸಲ್ಲಿಕೆ



ಕಾಪು/ಮುಂಬೈ: ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಕಿರುತೆರೆಯ ನಟಿ ರೇಖಾ ವಿ. ಕುಮಾರ್ ಅವರು ತಮ್ಮ ಪುತ್ರಿಯೊಂದಿಗೆ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಾಪು ಶ್ರೀ ಮಾರಿಯಮ್ಮನ ಸನ್ನಿಧಾನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ಪುನೀತರಾದರು.

ದೇವಸ್ಥಾನಕ್ಕೆ ಆಗಮಿಸಿದ ನಟಿಯನ್ನು ದೇವಳದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಅವರು ಗರ್ಭಗುಡಿಯಲ್ಲಿ ನೆಲೆಸಿರುವ ಶ್ರೀ ಮಾರಿಯಮ್ಮನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿ ರೇಖಾ ವಿ. ಕುಮಾರ್ ಮತ್ತು ಅವರ ಪುತ್ರಿಗೆ ಅನುಗ್ರಹ ಪ್ರಸಾದವನ್ನು ನೀಡಿ ಹರಸಿದರು.

ಇದೇ ವೇಳೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ವತಿಯಿಂದ ನಟಿ ರೇಖಾ ವಿ. ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಧಾರ್ಮಿಕ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಚಾರ ಸಮಿತಿಯ ಸಂಚಾಲಕರಾದ ರಾಕೇಶ್ ಕುಂಜೂರು, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



Related posts

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ

Mumbai News Desk

ಮಂಗಳೂರಿನಲ್ಲಿ ಬಿ. ಸಂಜೀವ ಕೆ.ಬಿ. ಅವರ “ತೀಯಾ ಕುಲತಿಲಕ , ಕುಲರತ್ನ, ಮಹಾದಾನಿ ರೋಹಿದಾಸ್ ಎಸ್. ಬಂಗೇರ’ ಹಾಗೂ ‘ಶ್ರೀ ಗುರು ಚರಣಾಮೃತ’ ಕೃತಿಗಳ ಬಿಡುಗಡೆ

Mumbai News Desk

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk

ಹೂಡೆ : ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದ 101ನೇ ಭಜನಾ ಮಂಗಳೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ವೈಭವ

Mumbai News Desk

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನೂತನ ಮೊಕ್ತೆಸರರುಗಳು

Mumbai News Desk

ಉಚ್ಛಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk