September 6, 2026
Mumbai News Kannada
ತುಳುನಾಡು

ಹೂಡೆ : ಶ್ರೀ ಗಜಾನನ ಬಿಲ್ಲವರ ಸೇವಾ ಸಂಘದ 101ನೇ ಭಜನಾ ಮಂಗಳೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ವೈಭವ





.

ಹೂಡೆಯ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ಇದರ 101ನೇ ವರ್ಷದ ಭಜನಾ ಮಂಗಳೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿಯಿಂದ ಯಶಸ್ವಿಯಾಗಿ ನೆರವೇರಿತು.

ಈ ಸಂಭ್ರಮದ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಅಧಿಕ ಅಂಕಗಳನ್ನು ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸತತ ಹಲವಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುತ್ತಾ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುತ್ತಿರುವ ಶ್ರೀಮತಿ ಇಂದಿರಾ ಪಾಂಡುರಂಗ ಅಂಚನ್ ಅವರಿಗೆ ಸಂಘವು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸುಧೆ ಹರಿಸಿದ ವಿವಿಧ ಭಜನಾ ಮಂಡಳಿಗಳ ಸೇವೆ ಅಪಾರವಾದುದು.ಈ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಸಂಘದ ಎಲ್ಲಾ ಸಮಿತಿ ಸದಸ್ಯರು, ಶ್ರೀ ದೇವಿ ಬಿಲ್ಲವ ಮಹಿಳಾ ಘಟಕ ಹಾಗೂ ಯುವ ಸಂಘಟನೆಯ ಸರ್ವ ಸದಸ್ಯರಿಗೆ , ಅರ್ಚಕ ವೃಂದಕ್ಕೆ ಅಧ್ಯಕ್ಷರಾದ ರತನ್ ಡಿ. ಸುವರ್ಣ ಮತ್ತು ಕಾರ್ಯದರ್ಶಿ ಸತೀಶ್ ಬಿ. ಅಂಚನ್, ಕೋಶಾಧಿಕಾರಿ ನವೀನ್ ಗುಳಿಬೆಟ್ಟು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದು, ಮುಂದೆಯೂ ಸಮಾಜ ಬಾಂಧವರ ಸಹಕಾರವನ್ನು ಕೋರಿದ್ದಾರೆ.



Related posts

ಮುಲ್ಕಿ : ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ‘ವನ ಮಹೋತ್ಸವ’ ದಿನಾಚರಣೆ, ಹಸಿರು ಕ್ರಾಂತಿಗೆ ಕರೆ

Mumbai News Desk

ಮಧೂರು ಶ್ರೀ ಮದನಂತೇಶ್ವರ ದೇಗುಲ; ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ

Mumbai News Desk

ಮೂಲ್ಕಿ : ಕೊಳಚಿ ಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲನ್ಯಾಸ

Mumbai News Desk

ಮೂಲ್ಕಿ ಲಯನ್ಸ್ ಕ್ಲಬ್ ಹಾಗೂ ಸಿ.ಎಸ್.ಐ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪಿಯುಸಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಭವ್ಯ ಸನ್ಮಾನ

Mumbai News Desk

ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ,ದೈವ ಪಾತ್ರಿ ಮುರಳಿ ಪೂಜಾರಿಗೆ ಸನ್ಮಾನ

Mumbai News Desk

ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ವತಿಯಿಂದ ಕನ್ನಡ ಶಾಲೆಗೆ ಧ್ವನಿವರ್ದಕ ಕೊಡುಗೆ

Mumbai News Desk