30.9 C
Mumbai
June 8, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ ಸಯನ್ – ಫೆ.10ರಂದು ಹಳದಿ ಕುಂಕುಮ ಕಾರ್ಯಕ್ರಮ






ಸಯನ್ ಪರಿಸರದ ತುಳು-ಕನ್ನಡಿಗರ ಸಂಘಟನೆ ಕರ್ನಾಟಕ ಸಂಘ ಸಯನ್ ಇದರ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಫೆಬ್ರವರಿ 10 ರಂದು, ಶನಿವಾರ ಸಂಜೆ 4 ಗಂಟೆಗೆ ಸಯನ್ ಪೂರ್ವದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆಯಲಿದೆ.
ಅಂದು ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, 5 ಗಂಟೆಗೆ ಭಜನೆ, ನಂತರ ಹಳದಿ ಕುಂಕುಮ, ಕಿರು ಸಭಾ ಕಾರ್ಯಕ್ರಮ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರ ಧರ್ಮಪತ್ನಿ ಗೀತಾ ಎಸ್ ಶೆಟ್ಟಿ, ಸಮಾಜ ಸೇವಕಿ, ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಜನಿ ಪೈ, ಡಾ. ಶ್ರುತಿ ದಿನೇಶ್ ಶೆಟ್ಟಿ (O. B. G. Y, IVF(SS) ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಸಂಘದ ಗೌರವ ಅಧ್ಯಕ್ಷ ಜಯರಾಮ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ,ಡಾ. ಪ್ರವೀಣ್ ಭಟ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಸಂಘದ ಪದಾಧಿಕಾರಿಗಳು, ಸದಸ್ಯರು, ಪರಿಸರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಡಾ. ಜಿ. ಪಿ. ಕುಸುಮ(ಗೌರವ ಕಾರ್ಯದರ್ಶಿ )ಅವರನ್ನು 8779660901 ಶ್ರೀಮತಿ ತೇಜಾಕ್ಷಿ (ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ )ಅವರನ್ನು 9930285766 ಮೂಲಕ ಸಂಪರ್ಕಿಸಬಹುದು.



Related posts

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ಶ್ರೀ ದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ವಿರಾರ್ , ಜು 7:ಯಕ್ಷಗಾನ ತರಬೇತಿ ಶಿಬಿರದ ಮುಹೂರ್ತ.

Mumbai News Desk

ಮುಂಬೈ : ಡಿ. 13ಕ್ಕೆ, ಜೋಗೇಶ್ವರಿಯ ಶ್ರೀ ಮಹಾಕಾಳಿ ಮಂದಿರದಲ್ಲಿ ಶನಿ ಗ್ರಂಥ ಪಾರಾಯಣ

Mumbai News Desk

ಅ. 20 ರಂದು ಮದರ್ ಇಂಡಿಯಾ ಹಳೆ ವಿದ್ಯಾರ್ಥಿಗಳ ಪೌಂಡೇಶನಿನ ಮಹಾಸಭೆ, ಸ್ನೇಹ ಮಿಲನ

Mumbai News Desk

ಜೀವದಾನಿ ಯಕ್ಷ ಕಲಾ ವೇದಿಕೆ ವಸೈ ತಾಲೂಕಾ* ಡಿ 27. ರಂದು 7 ನೇ ವರ್ಷದ ವಾರ್ಷಿಕೋತ್ಸವ.

Mumbai News Desk