28 C
Mumbai
August 21, 2026
Mumbai News Kannada
ಸುದ್ದಿ

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಗೆ ” ಜಾನಪದ ರತ್ನ – 2026″ ಪ್ರಶಸ್ತಿ





ಮಂಗಳೂರು: ಗಡಿ ಭಾಗದ ಕನ್ನಡ ಸಂಸ್ಕೃತಿ, ಜಾನಪದ ಕಲೆ ಹಾಗೂ ಸಾಹಿತ್ಯ ಪರಂಪರೆಯನ್ನು ಒಗ್ಗೂಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಹಾಗೂ ಕೇರಳ ಗಡಿನಾಡ ಘಟಕ, ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕಳಿ ಟ್ರಸ್ಟ್ ಸಂಯೋಜನೆಯಲ್ಲಿ ನಡೆದ ‘ಸಮನ್ವಯ’ ಜಾನಪದ ಉತ್ಸವದ ಸಂದರ್ಭದಲ್ಲಿ ಘೋಷಿಸಲಾದ ‘ಜಾನಪದ ರತ್ನ – 2026’ ಪ್ರಶಸ್ತಿಯನ್ನು ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಮೇ 16ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಪ್ರದಾನ ಮಾಡಿದರು.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ , ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ‌ ಸಹಯೋಗದಲ್ಲಿ ಕಾಸರಗೋಡು ತಾಲೂಕಿನ ಕುಡಾಲ್ , ಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶನಿವಾರ ನಡೆದ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಜಾನಪದ ರತ್ನ ಪ್ರಶಸ್ತಿಯನ್ನು ಎಸ್.ಜಗದೀಶ್ಚಂದ್ರ
ಅಂಚನ್ ಸ್ವೀಕರಿಸಿದರು.

ಕ್ರೀಡಾ ಬರವಣಿಗೆ ಮೂಲಕವೇ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ಎಸ್. ಜಗದೀಶ್ಚಂದ್ರ ಅಂಚನ್
ರಾಜ್ಯ , ಅಂತರ್ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 32 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಕ್ರೀಡಾ ಅಂಕಣಕಾರರಾಗಿ ಹಾಗೂ ಕ್ರೀಡಾ ವಿಮರ್ಶಾತ್ಮಕ ಲೇಖನಗಳ ಮೂಲಕ ಗುರುತಿಸಿಕೊಂಡಿರುವ ಇವರು
ಇದುವರೆಗೆ ಸುಮಾರು 4500ಕ್ಕೂ ಹೆಚ್ಚು ಕ್ರೀಡಾ ಲೇಖನ/ಅಂಕಣ ಬರಹಗಳನ್ನು ಬರೆದಿದ್ದು , ಇದು ಜಿಲ್ಲೆ,ರಾಜ್ಯ , ಅಂತರ್ ರಾಜ್ಯ ಮಟ್ಟದ ವಿವಿಧ ದಿನ ಪತ್ರಿಕೆಗಳಲ್ಲಿ , ವಾರಪತ್ರಿಕೆಗಳಲ್ಲಿ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿ.

ಈ ಸಂದರ್ಭದಲ್ಲಿ ಕರ್ನಾಟಕ ಕನಿಷ್ಕ ವೇತನ ಸಲಹಾ ಮಂಡಳಿ ಕರ್ನಾಟಕ ಸರ್ಕಾರ ಇದರ ಅಧ್ಯಕ್ಷರಾದ ಟಿ.ಎಂ.ಶಹೀದ್ , ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿ ಹಾಗೂ ಕನ್ನಡ ಸಂಸ್ಕೃತಿ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಕರ್ನಾಟಕ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದರು



Related posts

​ತಿರುವನಂತಪುರದಲ್ಲಿ ಜ್ಞಾನದೀಪ ‘ಗುರುದರ್ಶನ’ ಕೃತಿ ಬಿಡುಗಡೆ: ಗಡಿನಾಡಲ್ಲಿ ಕನ್ನಡ ಸಾಹಿತ್ಯದ ಬೆಳಕು!

Mumbai News Desk

ಮುಂಬೈ ಕನ್ನಡತಿ ನ್ಯಾ. ಮೀನಾಕ್ಷಿ ಅಚಾರ್ಯರಿಗೆ ಗ್ಲೋಬಲ್ ಲೀಗಲ್ ಅವಾರ್ಡ್ಸ್ ನಿಂದ, “ವರ್ಷದ ವ್ಯವಸ್ಥಾಪಕಿ ಪಾಲುದಾರ ಮಹಿಳೆ” ಪ್ರಶಸ್ತಿ.

Mumbai News Desk

ಪಶ್ಚಿಮ ಬಂಗಾಳ ವಿಧಾನಸಭಾ ವಿಸರ್ಜನೆ: ಮಮತಾ ಬ್ಯಾನರ್ಜಿ ರಾಜೀನಾಮೆ ನಿರಾಕರಣೆ ಹಾಗೂ ರಾಜ್ಯಪಾಲರ ಕಠಿಣ ಕ್ರಮ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್; ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ, ಗೌರವಾರ್ಪಣೆ

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರೋಪ . ವಿಶೇಷ ಸಂಚಿಕೆ ಲೋಕಾರ್ಪಣೆ.

Mumbai News Desk

ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆ

Mumbai News Desk