29 C
Mumbai
August 21, 2026
Mumbai News Kannada
ಪ್ರಕಟಣೆ

ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮುಂದೂಡಿಕೆ: ಜುಲೈ 11 ರಂದು ಪ್ರದರ್ಶನ





ಮುಂಬಯಿ: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಹಾಗೂ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ನಡೆಯಬೇಕಿದ್ದ ಸರಣಿ ತಾಳಮದ್ದಲೆ “ಶ್ರೀ ರಾಮ ಕಥಾ ಹೃದಯಂ” ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜುಲೈ 5ರ ಭಾನುವಾರದಂದು ನಿಗದಿಯಾಗಿದ್ದ ಈ ಕಾರ್ಯಕ್ರಮವನ್ನು, ಮಹಾನಗರದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವ ಕಾರಣ ಮತ್ತು ಮುಂಬೈ ಪೊಲೀಸರು ‘ರೆಡ್ ಅಲರ್ಟ್’ ಘೋಷಿಸಿರುವುದರಿಂದ ಶ್ರೋತೃವರ್ಗದ ಸುರಕ್ಷತೆಯ ದೃಷ್ಟಿಯಿಂದ ಮುಂದೂಡಲು ನಿರ್ಧರಿಸಲಾಗಿದೆ.
ಈ ಪರಿಷ್ಕೃತ ಕಾರ್ಯಕ್ರಮವು ಜುಲೈ 11ರಂದು ಮಧ್ಯಾಹ್ನ 2:15 ಕ್ಕೆ ಸರಿಯಾಗಿ ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ. ಆದ್ದರಿಂದ ಗೌರವಾನ್ವಿತ ಕಲಾಭಿಮಾನಿ ಪ್ರೇಕ್ಷಕರು ದಿನಾಂಕ ಮತ್ತು ಸಮಯದ ಈ ಬದಲಾವಣೆಯನ್ನು ಗಮನಿಸಬೇಕಾಗಿ ಸಂಘಟಕರಾದ ವಾಸುದೇವ ಮಾರ್ನಾಡ್ ಹಾಗೂ ಸುರೇಶ್ ನಂದ್ರೊಳ್ಳಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ವಿದ್ಯಾವಿಹಾರ್: ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ದೇವಸ್ಥಾನ,ಫೆ. 1ರಂದು ಇಪ್ಪತ್ನಾಲ್ಕು ಕಂತುಗಳ ಶ್ರೀರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ

Mumbai News Desk

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಡೊಂಬಿವಲಿ ಸಮಿತಿಯಿಂದ ದಶಮಾನೋತ್ಸವ ಸಂಭ್ರಮ: ಡಿ. 14ರಂದು ಉದ್ಘಾಟನಾ ಸಮಾರಂಭ

Mumbai News Desk

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk

ಆ. 3 ರಿಂದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇಲ್ಲಿ ನವರಾತ್ರಿ ಉತ್ಸವ.

Mumbai News Desk