31.7 C
Mumbai
June 9, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ: ವೈವಾಹಿಕ ಬೆಳ್ಳಿ ಹಬ್ಬ ಆಚರಿಸುತ್ತಿರುವ ದಂಪತಿಗಳು ಹಾಗೂ ನವದಂಪತಿಯನ್ನು ಗೌರವಿಸುವ ವಿಶಿಷ್ಟ ಕಾರ್ಯಕ್ರಮ






​ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳೊಂದಿಗೆ ಇದೊಂದು ವಿಶೇಷ ಕಾರ್ಯಕ್ರಮ: ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು


​ಮುಂಬಯಿ: ದಾಂಪತ್ಯ ಜೀವನದ 25 ಸಂವತ್ಸರವನ್ನು ಪೂರ್ತಿಗೊಳಿಸುವುದೆಂದರೆ ಇದೊಂದು ಅರ್ಥಪೂರ್ಣ ಸಾಧನೆಯಾಗಿದೆ. ಇಂದಿನ ಕಾರ್ಯಕ್ರಮವು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮವಾದರೂ ಇದು ಒಂದು ಕುಟುಂಬದ ಕಾರ್ಯಕ್ರಮ. ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಎಲ್ಲಾ ಸದಸ್ಯರು ಒಂದೇ ಕುಟುಂಬದವರು. ಸಮಿತಿಯಿಂದ ಪ್ರತೀ ವರ್ಷ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗಿಂತ ಇದೊಂದು ಭಿನ್ನವಾದ ಕಾರ್ಯಕ್ರಮ. ಬಹುಶಃ ಇಂತಹ ಕಾರ್ಯಕ್ರಮ ಮುಂಬಯಿಯ ಸಂಘಟನೆಯೊಂದರಿಂದ ನಡೆಯುತ್ತಿರುವುದು ಪ್ರಥಮ ಬಾರಿ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ನುಡಿದರು.
​ಜೂನ್ 7ರಂದು ಸಂಜೆ ಮಲಾಡ್ ಪೂರ್ವದ ಉತ್ಕರ್ಷ ವಿದ್ಯಾ ಮಂದಿರ ಸಭಾಗೃಹದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸ್ಥಾಪಕರಲ್ಲಿ ಪ್ರಮುಖರಾದ ದಿನೇಶ್ ಕುಲಾಲ್ ಮತ್ತು ರತ್ನ ಡಿ. ಕುಲಾಲ್ ದಂಪತಿ, ಸಮಿತಿಯ ಕ್ರಿಯಾಶೀಲ ಕಾರ್ಯಕರ್ತರಾದ ಲಕ್ಷ್ಮಣ್ ರಾವ್ ಗಾಣಿಗ ಮತ್ತು ಶೋಭಾ ಎಲ್. ರಾವ್ ದಂಪತಿ ಹಾಗೂ ಗೋಪಾಲಕೃಷ್ಣ ನಾಯಕ್ ಮತ್ತು ಸಂಗೀತ ನಾಯಕ್ ದಂಪತಿಗಳ ವೈವಾಹಿಕ ಬೆಳ್ಳಿ ಹಬ್ಬದ ಅಂಗವಾಗಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸಕ್ರಿಯ ಸದಸ್ಯರಾದ ಸುಂದರ್ ಪೂಜಾರಿ ಮತ್ತು ಪುಷ್ಪ ಪೂಜಾರಿ ದಂಪತಿಯ ಪುತ್ರಿ, ಸಮಿತಿಯ ಯುವ ವಿಭಾಗದ ಪ್ರಥಮ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಮತ್ತು ಅನ್ವಿತ್ ಅಮೀನ್ ನೂತನ ದಂಪತಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯ ಕೋರಲಾಯಿತು. ಸಂಗೀತ, ನೃತ್ಯ, ಸಂಭ್ರಮ ಹಾಗೂ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಎಲ್ಲಾ ದಂಪತಿಗಳನ್ನು ಅದ್ದೂರಿಯಾಗಿ ವೇದಿಕೆಗೆ ಕರೆತರಲಾಯಿತು.


​ಸಮಾಜ ಸೇವಕರೂ, ಸಾಫಲ್ಯ ಸೇವಾ ಸಂಘ ಮುಂಬಯಿಯ ಅಧ್ಯಕ್ಷರೂ ಆದ ಶ್ರೀನಿವಾಸ ಪಿ. ಸಾಫಲ್ಯ ಅವರು ಎಲ್ಲಾ ದಂಪತಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಮದುವೆಯಾದ ದಂಪತಿಯನ್ನು ನಮ್ಮ ಧರ್ಮದಲ್ಲಿ ‘ಲಕ್ಷ್ಮೀ–ನಾರಾಯಣರು’ ಎಂದು ಕರೆಯುವುದು ಸಂಪ್ರದಾಯವಾಗಿದೆ ಎಂದು ತಿಳಿಸಿದ ಅವರು, ದಾಂಪತ್ಯ ಸಂಬಂಧದ ಮಹತ್ವವನ್ನು ಅರ್ಥಪೂರ್ಣ ಕವನದ ಮೂಲಕ ವರ್ಣಿಸಿದರು.
​ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಮೂಲ್ಯ ಪಾದೆಬೆಟ್ಟು ಮಾತನಾಡಿ, ಇಂತಹ ವಿಭಿನ್ನ ಸಮಾರಂಭವನ್ನು ನೋಡುವ ಅವಕಾಶವನ್ನು ಕಲ್ಪಿಸಿದ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ಅಭಿನಂದನೆ ಸಲ್ಲಿಸಿ, ಕುಲಾಲ ಸಂಘದ ಪರವಾಗಿ ಎಲ್ಲಾ ದಂಪತಿಗಳಿಗೆ ಶುಭ ಹಾರೈಸಿದರು.


​ಅಭ್ಯುದಯ ಬ್ಯಾಂಕಿನ ನಿವೃತ್ತ ಎಂ.ಡಿ. ಪ್ರೇಮನಾಥ ಸಾಲ್ಯಾನ್ ಅವರು ಎಲ್ಲಾ ದಂಪತಿಗಳಿಗೆ ಶುಭ ಕೋರುತ್ತಾ, ಇಂತಹ ಕಾರ್ಯಕ್ರಮಗಳು ಪ್ರತೀ ವರ್ಷ ನಮ್ಮ ಸಮಿತಿಯಿಂದ ನಡೆಯುವಂತಾಗಲಿ ಎಂದರು.
​ದಂಪತಿಗಳ ಪರವಾಗಿ ಶೋಭಾ ಎಲ್. ರಾವ್, ಸಂಗೀತ ನಾಯಕ್, ರಶ್ಮಿ ಪೂಜಾರಿ ಮತ್ತು ದಿನೇಶ್ ಕುಲಾಲ್ ಮಾತನಾಡಿ, ಸಮಿತಿಯ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಮರ್ಪಿಸಿದರು.
​ಸಮಿತಿಯ ಉಪಾಧ್ಯಕ್ಷರಾದ ಕುಮಾರೇಶ್ ಆಚಾರ್ಯ, ಸಂತೋಷ್ ಕೆ. ಪೂಜಾರಿ, ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ, ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಜಗನ್ನಾಥ್ ಮೆಂಡನ್ ಹಾಗೂ ರಘುರಾಮ್ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತಿ ಎಸ್. ಆಚಾರ್ಯ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಡಿ. ಪೂಜಾರಿ, ವೀಣಾ ಸುಧೀರ್ ಆಚಾರ್ಯ ಹಾಗೂ ಪ್ರಣೀತಾ ವಿ. ಶೆಟ್ಟಿ ನಿರ್ವಹಿಸಿದರು. ಸುರೇಂದ್ರ ಆಚಾರ್ಯ ಧನ್ಯವಾದ ಸಮರ್ಪಿಸಿದರು.


​ಸಮಿತಿಯ ಸಲಹೆಗಾರರಾದ ಸತೀಷ್ ಭಟ್ ಎಲ್ಲಾ ದಂಪತಿಗಳಿಗೆ ಆಶೀರ್ವಚನ ನೀಡಿದರು.
​ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ, ಉಪಾಧ್ಯಕ್ಷ ಹಾಗೂ ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಪೂಜಾರಿ, ಗೋಪಾಲ್ ಪೂಜಾರಿ, ಆನಂದ ಕೋಟ್ಯಾನ್, ಉದಯ ಸಾಲ್ಯಾನ್, ಸಮಾಜ ಸೇವಕ ಚಿತ್ರಾಪು ಕೆ. ಎಂ. ಕೋಟ್ಯಾನ್, ಅಮೂಲ್ಯ ಪತ್ರಿಕೆಯ ಸಂಪಾದಕ ಆನಂದ ಬಿ. ಮೂಲ್ಯ, ಪತ್ರಕರ್ತ ಈಶ್ವರ ಐಲ್ ಮೊದಲಾದವರು ಉಪಸ್ಥಿತರಿದ್ದರು.
​ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯ ಈಶ್ವರ ಕುಲಾಲ್, ನಿತ್ಯಾನಂದ ಕೋಟ್ಯಾನ್, ಗೋಪಾಲ ಪೂಜಾರಿ, ದಿನೇಶ್ ಕಾಮತ್, ಪ್ರತೀಕ್ ಜೆ. ಶೆಟ್ಟಿ, ಶ್ರೀಪತಿ ಪಾಟ್ಕರ್, ಹರೀಶ್ ಪೂಜಾರಿ ಕಾರ್ನಾಡ್, ನಿತ್ಯಾನಂದ ಪೂಜಾರಿ, ಶಶಿಧರ್ ಹೆಗ್ಡೆ, ಗೋಪಾಲ ಶೆಟ್ಟಿಗಾರ್, ರಘುರಾಮ್ ನಾಯಕ್, ಯೋಗೇಶ್ ಬಂಗೇರಾ, ಸೂರಪ್ಪ ಕುಂದರ್, ಯಕ್ಷಗುರು ನಾಗೇಶ್ ಪೊಳಲಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಗೀತಾ ಜೆ. ಮೆಂಡನ್, ಸಂಧ್ಯಾ ಎಸ್. ಪ್ರಭು, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕಾರ್ಕೇರ, ವಿದ್ಯಾ ಎಸ್. ನಾಯಕ್, ವಿದ್ಯಾ ಡಿ. ಆಚಾರ್ಯ, ಮೋಹಿನಿ ಜೆ. ಶೆಟ್ಟಿ ಹಾಗೂ ಮಹಿಳಾ ವಿಭಾಗದ ಶ್ರುತಿ ಪೂಜಾರಿ, ರತ್ನ ಪೂಜಾರಿ, ಪುಷ್ಪ ಆಚಾರ್ಯ, ಶಾರದಾ ಪೂಜಾರಿ, ಜಯಂತಿ ಸಾಲ್ಯಾನ್, ಪದ್ಮಾವತಿ ಆರ್. ಪೂಜಾರಿ, ಶ್ವೇತಾ ಪ್ರಭು, ಉಷಾ ಆಚಾರ್ಯ, ಸುಮಿತ್ರಾ ಡಿ. ಪೂಜಾರಿ, ಶ್ರೀದೇವಿ ಆಚಾರ್ಯ, ಶೋಭಾ ಸಾಲ್ಯಾನ್, ಸುನಂದಾ ಬಂಗೇರ, ತನುಜಾ ಪೂಜಾರಿ ಸಹಕರಿಸಿದರು.
​ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸೌಮ್ಯ ಡಿ. ಕಾಮತ್, ಪ್ರಣೀತಾ ವಿ. ಶೆಟ್ಟಿ, ನವೀನ್ ಯು. ಸಾಲ್ಯಾನ್, ನಿಧಿ ಜಿ. ನಾಯಕ್, ರಾಜೇಶ್ ಕೆ. ಮೂಲ್ಯ, ಶಿವಾನಿ ಎಸ್. ಪ್ರಭು, ಸಂಚಾಲಕ ಡಾ. ಶಶಿನ್ ಕೆ. ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಪ್ರಥಮ್ ಆರ್. ಪೂಜಾರಿ, ಶ್ವೇತಾ ಎಸ್. ಪೂಜಾರಿ, ದೀಕ್ಷಿತ್ ಎಂ. ಪೂಜಾರಿ, ವಿನೀತ್ ಜಿ. ಪೂಜಾರಿ, ದಿವ್ಯಾ ಎನ್. ಅಮೀನ್ ಮತ್ತು ಇತರ ಸದಸ್ಯರು ಸಹಕರಿಸಿದರು. ಕೊನೆಗೆ ಉಡುಪಿ ಕ್ಯಾಟರರ್ಸ್ ಮಾಲಕ ದಿನೇಶ್ ಕಾಮತ್ ತಯಾರಿಸಿದ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.



Related posts

ಸಾರಸ್ವತ ವೈದಿಕ ಸೇವಾ ಪ್ರತಿಷ್ಟಾನ: ದ್ವಿತೀಯ ವಾರ್ಷಿಕ ಕಾರ್ಯಕ್ರಮ ಸಂಪನ್ನ .

Mumbai News Desk

ಎನ್ ಕೆ ಇ ಎಸ್ ಪ್ರೌಢಶಾಲೆ ವಡಾಲ,” ಕಲಾತಪಸ್ವಿ ” ಶಿವಯೋಗಿ ಸಣ್ಣಮನಿ ಅವರಿಗೆ ಬೀಳ್ಕೊಡುಗೆ

Mumbai News Desk

​ಮುಂಬೈನಲ್ಲಿ ಭಕ್ತಿಪೂರ್ವಕವಾಗಿ ನಡೆದ ‘ಶುಭ ಶುಕ್ರವಾರ’: ಸಾಂತಾಕ್ರೂಜ್‌ನಲ್ಲಿ ಗಮನಸೆಳೆದ ‘ಶಿಲುಬೆಯ ನೇರ ಹಾದಿ’ ನಡಿಗೆ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನ ಕಾಮಗಾರಿ ಕುರಿತು ಸಭೆ

Mumbai News Desk

ದಾಸ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಅನನ್ಯ: ಮಧುಸೂದನ್‌ ಟಿ.ಆರ್‌.

Mumbai News Desk