29 C
Mumbai
August 20, 2026
Mumbai News Kannada
ಮುಂಬಯಿ

ಕರ್ನಾಟಕ ಸಂಘ, ಕಲ್ಯಾಣ: ವಿ. ಪ್ರತಿಮಾ ಕೋಡೂರುರವರಿಂದ ಹರಿಕಥಾ ಕಾರ್ಯಕ್ರಮ






5 ಜೂನ್ 26,ಕಲ್ಯಾಣ(ಪ):”ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಸಾಮಾಜಿಕ ಜ್ಞಾನದೊಂದಿಗೆ ಭಗವಂತನ ಜ್ಞಾನವೂ ಅಷ್ಟೇ ಮುಖ್ಯ. ಸಮಸ್ತ ಜಗದ ನಿರ್ಮಾತ ಭಗವಂತನ ಹೊರತು ತನ್ನದೇನೂ ಇಲ್ಲ. ಭಗವಧ್ಗೀತೆಯಲ್ಲಿ ಉದ್ಘೋಷಿಸಿದ ಕರ್ಮಯೋಗ, ಜ್ಞಾನ ಯೋಗ ಹಾಗೂ ಭಕ್ತಿ ಯೋಗ ಮನುಷ್ಯನ ಆತ್ಮೋನ್ನತಿಯ ಸರಳ ಮಾರ್ಗಗಳು” ಎಂದು ತಿಳಿಸುವ ‘ಭಕ್ತ ಸುದಾಮ’ ನ ಹರಿಕಥಾ ಕಾರ್ಯಕ್ರಮವನ್ನು 27 ಜೂನ್ 26 ರಂದು ಸಂಜೆ ಕಲ್ಯಾಣ(ಪ)ದ ಬ್ರಾಹ್ಮಣ ಸೊಸೈಟಿ ಸಭಾಗೃಹದಲ್ಲಿ ವಿದುಷಿ ಪ್ರತಿಮಾ ಕೋಡೂರು ರವರು ವಿದ್ವತ್ಪೂರ್ಣ ವಾಗಿ ಸಭಿಕರ ಮನಮುಟ್ಟುವಂತೆ ನಡೆಸಿಕೊಟ್ಟರು.

ಸಂಘದ ಪೂರ್ವ ಅಧ್ಯಕ್ಷ ದಿ. ಶ್ರೀ ಟಿ. ಎಸ್. ಉಪಾಧ್ಯಾಯರ ಸ್ಮರಣಾರ್ಥ ಅವರ ಧರ್ಮ ಪತ್ನಿ ಪುಷ್ಪ ಉಪಾಧ್ಯಾಯರು ಪ್ರಾಯೋಜಿಸಿದ ಈ ಕಾರ್ಯಕ್ರಮ ಸಂಘದ ಗಣ್ಯರಿಂದ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು.

ಸಂಘದ ಪೂರ್ವ ಅಧ್ಯಕ್ಷೆ ದರ್ಶನಾ ಸೋನ್ಕರ್ ಕೀರ್ತನಕಾರರನ್ನು ಪರಿಚಯಿಸಿ, ಗಣ್ಯರು ಅವರನ್ನು ಶಾಲು ಸ್ಮರಣಿಕೆಯೊಂದಿಗೆ ಸತ್ಕರಿಸಿದರು. ಸುಮಾರು ಎರಡು ತಾಸುಗಳ ಕಾಲ ನಡೆದ ಈ ಹರಿಕಥಾ ಕಾರ್ಯಕ್ರಮ ಸಭಿಕರನ್ನು ಭಗವಂತನ ಸ್ಮರಣೆಯಲ್ಲಿ ತಲ್ಲೀನಗೊಳಿಸಿತು. ಸಂಗೀತಮಯ, ಭಕ್ತಿಮಯವಾದ ಈ ಕಾರ್ಯಕ್ರಮದಲ್ಲಿ ಶ್ರೀ ಮಾನಸ ಬಂಗೇರರವರು ಸಮರ್ಪಕವಾಗಿ ತಬಲಾದೊಂದಿಗೆ ಸಹಕರಿಸಿದರು. ಸಂಘದ ಮಹಿಳಾಧ್ಯಕ್ಷೆ ಶ್ರೀಮತಿ ವೀಣಾ ಕಾಮತ್ ರವರ ವಂದನಾರ್ಪಣೆ ಹಾಗೂ ರುಚಿಕರ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.



Related posts

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ

Mumbai News Desk

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಪ್ರವೇಶ ದ್ವಾರದಲ್ಲಿ ವಾಲ್ ಅಫ್ ಹೇಪಿನೆಸ್ ಉದ್ಘಾಟನೆ.

Mumbai News Desk

ಮುಂಬೈ : ವಿಕ್ರೋಲಿಯ ಪಾರ್ಕ್ ಸೈಟ್‌ನ ವರ್ಷಾ ನಗರದ ಜನಕಲ್ಯಾಣ್ ಸೊಸೈಟಿಯಲ್ಲಿ ಭೂಕುಸಿತ, ಇಬ್ಬರು ಸಾವು

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬೈ ಬೊರಿವಲಿ- ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನ ಕುಂಕುಮ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024ದಿವ್ಯಾ ವಿಶ್ವನಾಥ್ ಪೂಜಾರಿ ಉತ್ತೀರ್ಣ

Mumbai News Desk

ಮುಂಬೈ: ಭಾಯಂದರ್ ಪೂರ್ವದಲ್ಲಿ ಕಟ್ಟಡಕ್ಕೆ ನುಗ್ಗಿದ ದೊಡ್ಡ ಬೆಕ್ಕು(ಚಿರತೆ), 3 ಜನರಿಗೆ ಗಾಯ

Mumbai News Desk