
ಲಯನ್ಸ್ ಕ್ಲಬ್ ಮೂಲ್ಕಿ ಮತ್ತು ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆ ಕಾರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವೊAದರಲ್ಲಿ ಮೂಲ್ಕಿಯ ಶ್ರಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯವರು ನಡೆಸಿದ ಪದವಿ ಪೂರ್ವ ಅಂತಿಮ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಅನ್ವಿತ ಆರ್ (99.50%)- 4ನೇ ರ‍್ಯಾಂಕ್, ದಿಯಾ (99%)- 7ನೇ ರ‍್ಯಾಂಕ್, ಪೂರ್ವಿ ಎಚ್. ಪೂಜಾರಿ (98.66%)-9ನೇ ರ‍್ಯಾಂಕ್, ಶ್ರಾವ್ಯ ಎಸ್.ಕೆ (98.33%)-10ನೇ ರ‍್ಯಾಂಕ್ ಮತ್ತು ಕಾರ್ನಾಡಿನ ಸಿ.ಎಸ್.ಐ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯ ಅತೀ ಹೆಚ್ಚು ಅಂಕ ಪಡೆದ ರೋಶ್ನಿ ಐಯೋನ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಸಿ.ಎಸ್.ಐ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ರೆ| ಫಾ| ವಿಲಿಯಮ್ ಕುಂದರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಲ್ಕಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ, ಸ್ಯಾಮ್ ಮಾಬೆನ್, ವಕೀಲೆ ಸಮೀಕ್ಷಾ ಭಾಸ್ಕರ ಹೆಗ್ಡೆ, ಸದಾಶಿವ ಹೊಸದುರ್ಗ, ಶಾಲಾ ಸಂಚಾಲಕ ರಂಜನ್ ಜತ್ತನ್ನ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂತಿ ಸುಹಾಸಿನಿ ಸ್ವಾಗತಿಸಿದರು. ಎಲಿಜಬೆತ್ ಪುಷ್ಪಲತಾ ಸನ್ಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ರೇಷ್ಮಾ ಮತ್ತು ಧನ್ಯ ಕಾರ್ಯಕ್ರಮ ನಿರ್ವಹಿಸಿದರು. ಆಶಾ ವಂದಿಸಿದರು.




