31 C
Mumbai
September 18, 2026
Mumbai News Kannada
ತುಳುನಾಡು

ಸಾಲಿಯಾನ್ ಆದಿ ಮೂಲಸ್ಥಾನ ಪಲಿಮಾರು : ವಾರ್ಷಿಕ ನಾಗದರ್ಶನ ಹಾಗೂ ದೈವದ ತಂಬಿಲ ಸೇವೆ ಸಂಪನ್ನ





ಪಲಿಮಾರು ಸಾಲಿಯಾನ್ ಆದಿ ಮೂಲಸ್ಥಾನದಲ್ಲಿ ಇತ್ತೀಚೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡವು.

ಏಪ್ರಿಲ್ 26ರ ಭಾನುವಾರ ಬೆಳಿಗ್ಗೆ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ನಾಗತಂಬಿಲ ಹಾಗೂ ನಾಗದರ್ಶನ ಸೇವೆಗಳು ವಿಜೃಂಭಣೆಯಿಂದ ನಡೆದವು. ಮಧ್ಯಾಹ್ನ ಕುಟುಂಬದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಪ್ರಸಾದ ಸ್ವೀಕರಿಸಿ ಧನ್ಯತೆ ಅನುಭವಿಸಿದರು. ಬಳಿಕ ಏಪ್ರಿಲ್ 28ರ ಮಂಗಳವಾರದಂದು ಬೆಳಿಗ್ಗೆ ವಾರ್ಷಿಕ ಚೌತಿ ಪೂಜೆ ಸಾಂಗವಾಗಿ ನೆರವೇರಿತು. ಅಂದು ರಾತ್ರಿ ಗಂಟೆ 7:00 ರಿಂದ ದೈವದ ತಂಬಿಲ ಹಾಗೂ ಪಂಜುರ್ಲಿ ದರ್ಶನ ಸೇವೆಗಳು ನಡೆದವು. ದೈವದ ಅಭಯ ನುಡಿಗಳೊಂದಿಗೆ ಸಮಾಜದ ಹಾಗೂ ಕುಟುಂಬದ ಸಕಲರಿಗೂ ಒಳಿತಾಗಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಮಕ್ತಾಯವಾಯಿತು.

ಅನ್ನದಾನ ಸೇವೆ ಹಾಗೂ ಇತರ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸದಾಶಿವ ಪಡುಬಿದ್ರಿ, ಗೌರವಾಧ್ಯಕ್ಷರಾದ ಪಿ. ಆರ್. ಸಾಲಿಯಾನ್, ಪ್ರಭಾಕರ ಸಾಲ್ಯಾನ್, ಮುಂಬಯಿ ಶಾಖೆಯ ಅಧ್ಯಕ್ಷರಾದ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಮತ್ತು ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಎಸ್. ಪುತ್ರನ್ ಸೇರಿದಂತೆ ಊರ ಪರವೂರ ನೂರಾರು ಕುಟುಂಬಿಕರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.



Related posts

ಬಂಟರ ಸಂಘ ಸುರತ್ಕಲ್ ನಿಂದ ಅಭಿನಂದನೆ, ಸಹಾಯ ಹಸ್ತ, ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಮುಲ್ಕಿ ಅರಸು ಕಂಬಳದಲ್ಲಿ ಗುತ್ತಿನಾರ್ ರವೀಂದ್ರ ಶೆಟ್ಟಿಯವರಿಗೆ ಸನ್ಮಾನ :

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಾಲನೆ

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk

ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ಜುಲೈ. 28ಕ್ಕೆ ಆಟಿದ ಮದಿಪು

Mumbai News Desk

ಕನ್ನಡ ಕಿರುತೆರೆ ನಟಿ, ‘ಬಿಗ್ ಬಾಸ್’ ಖ್ಯಾತಿಯ ಕಾವ್ಯ ಶಾಸ್ತ್ರೀ ಅವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಿಗೆ ವಿಶೇಷ ಪೂಜೆ: ನವದುರ್ಗಾ ಲೇಖನ ಸಮರ್ಪಣೆ

Mumbai News Desk