28 C
Mumbai
October 6, 2026
Mumbai News Kannada
ಪ್ರಕಟಣೆ

ಜೋಗೇಶ್ವರಿ ಶ್ರೀ ಮಹಾಕಾಳಿ ಮಂದಿರ, ಜುಲೈ 8: ಬ್ರಹ್ಮಕಲಶೋತ್ಸವದ 10ನೇ ವಾರ್ಷಿಕೋತ್ಸವದ ನಿಮಿತ್ತ ಆದರ್ಶ ಪೂಜೆ



ಜೋಗೇಶ್ವರಿ ಪೂರ್ವದ ಪ್ರೇಮ್ ನಗರ ಕ್ವಾರ್ಟರ್ಸ್ ಕಾಲನಿಯಲ್ಲಿ, ತುಳುಕನ್ನಡಿಗರಿಂದ ಸ್ಥಾಪಿಸಲ್ಪಟ್ಟು, ಆರಾಧಿಸಲ್ಪಡುತ್ತಿರುವ ಶ್ರೀ ಮಹಾಕಾಳಿ ಮಂದಿರದ ಪುನ: ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ 10ನೇ ವಾರ್ಷಿಕೋತ್ಸವದ ನಿಮಿತ್ತ ಆದರ್ಶ ಪೂಜೆಯು ಇದೇ ಬುಧವಾರ ಜು. 8 ರಂದು ವಿವಿಧ ಧಾರ್ಮಿಕ ಸೇವೆಗಳು ಹಾಗೂ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.

ಅಂದು ಬೆಳಿಗ್ಗೆ 8-00 ರಿಂದ 9-00ರ ತನಕ ಪಂಚಾಮೃತ ಅಭಿಷೇಕ, ಸಂಜೆ 5-00 ರಿಂದ 9-30ರ ತನಕ ಭಜನೆ, ಶೃಂಗಾರ (ಹೂವಿನ) ಸೇವೆ, ಮಹಾ ಮಂಗಳಾರತಿ, ಆವೇಶ ಸೇವೆ, ತದನಂತರ ಮಹಾ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿರುವುದು.

ಸರ್ವ ಭಗವತ್ಭಕ್ತರು ಅಂದಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ಸಹಭಾಗಿಗಳಾಗಿದ್ದು, ಸಹಕರಿಸಿ, ಶ್ರೀ ಮಹಾಕಾಳಿ ಅಮ್ಮನ ತೀರ್ಥಪ್ರಸಾದ ಸ್ವೀಕರಿಸಿ, ಪುನೀತರಾಗಬೇಕಾಗಿ ಮಂದಿರದ ಆಡಳಿತ ಮತ್ತು ಕಾರ್ಯಕಾರಿ ಸಮಿತಿಯವರು ಹಾಗೂ ಸರ್ವ ಸದಸ್ಯರು ವಿನಂತಿಸಿಕೊಳ್ಳುತ್ತಿರುವರು.



Related posts

ಕಲಾಜಗತ್ತಿನ ಆಯೋಜನೆಯಲ್ಲಿ ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿಬಂದು ಜನರನ್ನು ರಂಜಿಸಲಿರುವ “ಬೊಂಬಾಯಿಡ್ ತುಳುನಾಡ್ ” ತುಳು ಉತ್ಸವ

Mumbai News Desk

ಮಾ. 08 ರಂದು ಥಾಣೆಯಲ್ಲಿ ಸಾಫಲ್ಯ ಸೇವಾ ಸಂಘದ ಮುಖವಾಣಿ’ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬ ಹಾಗೂ ಮಹಿಳಾ ದಿನಾಚರಣೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜು. 6 ರಂದು  ಮಲಾಡ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ.

Mumbai News Desk

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಮಾ. 31 : ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಾಪುವಿನವರೆಗೆ ಭಜನಾ ಸಂಕೀರ್ತನಾ ಪಾದಯಾತ್ರೆ

Mumbai News Desk