29 C
Mumbai
August 20, 2026
Mumbai News Kannada
ತುಳುನಾಡು

ಹೆಜಮಾಡಿ ಕೋಡಿ: ವಿದ್ಯಾ ಪ್ರಸಾರ ವಿದ್ಯಾಮಂದಿರದಲ್ಲಿ ಪರಿಸರ ಸ್ನೇಹಿ ಆನ್‌ಲೈನ್ ಚುನಾವಣೆ, ವಿದ್ಯಾರ್ಥಿ ಸಂಸತ್ ಪದಗ್ರಹಣ





ವಿದ್ಯಾ ಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ, ಹೆಜಮಾಡಿ ಕೋಡಿಯಲ್ಲಿ ಡಿಜಿಟಲ್ ಮತದಾನದ ಮೂಲಕ ನೂತನ ಶಾಲಾ ಮಂತ್ರಿ ಮಂಡಲ ರಚನೆ ನಮ್ಮ ವಿದ್ಯಾ ಪ್ರಸಾರ ವಿದ್ಯಾಮಂದಿರ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಬಣ್ಣದ ಸದನಗಳ ನಾಯಕರ ಮಂತ್ರಿ ಮಂಡಲದ ಪದಗ್ರಹಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಶಾಲೆಯ ಕಂಪ್ಯೂಟರ್ ಲ್ಯಾಬ್ ನಲ್ಲಿ ವಿಶೇಷ ಸಾಫ್ಟ್ವೇರ್ ಬಳಸಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಡಿಜಿಟಲ್ ಮತದಾನ ಮಾಡಿದರು ಅತ್ಯಂತ ಪಾರದರ್ಶಕವಾಗಿ ನಡೆದ ಈ ಆನ್ಲೈನ್ ಚುನಾವಣೆಯಲ್ಲಿ

ಶಾಲಾ ಮುಖ್ಯನಾಯಕನಾಗಿ ಶಿವಾಂಕ್ ಎಸ್ ಮಲ್ಲಿ 10ನೇ ತರಗತಿ, ಉಪನಾಯಕನಾಗಿ ಹರ್ಷಲ್ ಎಂ ಕೋಟ್ಯಾನ್ 9ನೇ ತರಗತಿ ಇವರು ಬಹುಮತದಿಂದ ಆಯ್ಕೆಯಾದರು ನೂತನ ಮಂತ್ರಿ ಮಂಡಲ ಮತ್ತು ಖಾತೆಗಳ ವಿವರ:
ಶಿಸ್ತು ಮಂತ್ರಿ ರಿಜ್ಮಾ ಖತಿಜಾ ಮತ್ತು ಚಿರಾಗ್ ದೇವಾಡಿಗ,
ಸಾಂಸ್ಕೃತಿಕ ಮಂತ್ರಿ ಪಾವನಿ ಸಾಲಿಯನ್ ಮತ್ತು ಮಿನಲ್ ಆಯಿಷಾ,
ಕ್ರೀಡಾ ಮಂತ್ರಿ: ಜನ್ಮನಿ. ಜಿ ಬಂಗೇರಾ ಮತ್ತು ಮಹಾಮದ್ ಸಿನಾನ್ ಹಾಗೂ ಬಣ್ಣದ ಸದನಗಳ ನಾಯಕರನ್ನು ಆಯ್ಕೆ ಮಾಡಲಾಯಿತು


1.ಸುಭಾಷ್ ಚಂದ್ರ ಬೋಸ್ (ಕೆಂಪು): ನಾಯಕಿ ದಿಯಾ ಜಿ ಕೋಟ್ಯಾನ್ ಮತ್ತು ಉಪನಾಯಕ ಅಬೂಬಕರ್ ಶಾದಿನ್,

  1. ವಲ್ಲಬ್ಬಾಬಾಯಿ ಪಟೇಲ್ (ನೀಲಿ) : ನಾಯಕ ಪಾರ್ಥ್ ಕಿರಣ್ ಪುತ್ರನ್ ಹಾಗೂ ಉಪನಾಯಕಿ ಸಾನ್ವಿ ಸನಿಲ್,
  2. ಝಾನ್ಸಿ ರಾಣಿ (ಹಳದಿ) : ನಾಯಕಿ ಪ್ರೀತಲ್ ವೈ ಅಮೀನ್ ಹಾಗೂ ಉಪನಾಯಕ ಗಗನ್ ಎಸ್ ಪೂಜಾರಿ ,
  3. ಅಬ್ಬಕ್ಕ ರಾಣಿ (ಹಸಿರು) : ನಾಯಕಿ ಮಾನ್ವಿ ಪಿ ಮತ್ತು ಉಪನಾಯಕ ಶ್ರೀನಿಕ್ ಎಸ್ ಸಾಲಿಯಾನ್ , ನೂತನವಾಗಿ ಆಯ್ಕೆಯಾದ ಮಂತ್ರಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ ಎಸ್ ಕರ್ಕೇರಾ ಹಾಗೂ ಶಾಲಾ ಗೌರವ ಅಧ್ಯಕ್ಷರಾದ ವಿನೋದ್ ಕೋಟ್ಯಾನ್ ಇವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಗದ ರಹಿತ ಹಾಗೂ ಪರಿಸರ ಸ್ನೇಹಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿತಿದ್ದಾರೆ. ಇದೆ ಜವಾಬ್ದಾರಿಯಿಂದ ನೂತನ ಮಂತ್ರಿ ಮಂಡಲವು ಶಾಲೆಯ ಶಿಸ್ತು ಮತ್ತು ಪ್ರಗತಿಗಾಗಿ ಕೆಲಸ ಮಾಡಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲೆಯ ತಾಂತ್ರಿಕ ವಿಭಾಗದ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು


Related posts

ಉಡುಪಿಯಲ್ಲಿ ನಡೆದ ಕುಣಿತ ಭಜನಾ ಸೇವೆಯಲ್ಲಿ ಎಲ್ಲರ ಗಮನ ಸೆಳೆದ ಲಕ್ಷ್ಮಿ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ತಂಡದ ಪುಟಾಣಿಗಳು

Mumbai News Desk

ಗುರು ಸಾಮರಸ್ಯ ಜಾಥಾ ಹಾಗೂ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಉಡುಪಿ : ಮನೆಯಲ್ಲಿ ಅಗ್ನಿ ಅವಘಡ, ಮನೆಯ ಯಜಮಾನ ಮೃತ್ಯು.

Mumbai News Desk

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.

Mumbai News Desk

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk

ಹೂಡೆ : ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮೊಳಗಿದ ಅಮರ ವೀರ ಗೀತೆ; ವಿಜೇತರಿಗೆ ಪ್ರಶಸ್ತಿ ಪ್ರದಾನ

Mumbai News Desk