September 6, 2026
Mumbai News Kannada
ಮುಂಬಯಿ

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್,30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,






ವರ್ಲಿಯ ಮಧುಸೂದನ್ ಮಿಲ್ ಕೌಂಪೌಂಡಿನ ಆವರಣದಲ್ಲಿ “ಅಪ್ಪಾಜಿಬೀಡು” ಎಂದೇ ಪ್ರಸಿದ್ದಿಯಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪಡುಬಿದ್ರೆ ಬೆಂಗ್ರೆ ರಮೇಶ್ ಗುರುಸ್ವಾಮಿ ಸ್ಥಾಪಿಸಿರುವ ಶ್ರೀ ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ (ರಿ) ಇದರ 30ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಡಿ.22 ರವಿವಾರದಂದು ದಿನವಿಡೀ ನಡೆಯಿತು.

ಅಂದು ಬೆಳಿಗ್ಗೆ ಶರಣು ಘೋಷ, ಗಣಹೋಮ, ಮಧ್ಯಾಹ್ನ ಭಕ್ತಿ ಭಜನಾ ಲಹರಿ ಕಾರ್ಯಕ್ರಮ – ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜಪಾಡ ಡೊಂಬಿವಲಿ ಪೂರ್ವ ಇವರಿಂದ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಬಳಿಕ ಭಕ್ತಿ ಸಂಗೀತ ಕಾರ್ಯಕ್ರಮ ವಿಜಯ ಶೆಟ್ಟಿ ಮೂಡಬೆಳ್ಳೆ ಮತ್ತು ಬಳಗದವರಿಂದ, ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು

, ಸಂಜೆ ಅಯ್ಯಪ್ಪ ಸ್ವಾಮಿ ದೀಪೋತ್ಸವ, 1118 ತುಪ್ಪದ ದೀಪಗಳಿಂದ ಭವ್ಯ ಮಂಟಪದ ಅಲಂಕಾರ, ಸಂಜೆ ಭಕ್ತಿ ಗಾನಸುಧಾ, ಶಿಬರೂರು ಸುರೇಶ್ ಎಲ್ ಶೆಟ್ಟಿ ಮತ್ತು ಅಪ್ಪಾಜಿಬೀಡು ಮಹಿಳಾ ವಿಭಾಗದ ಸದಸ್ಯರಿಂದ ನಡೆಯಿತು.
ರಾತ್ರಿ 9 ಕ್ಕೆ ಅಪ್ಪಾಜಿ ಬೀಡು ವರ್ಲಿಯಲ್ಲಿ ಮಾಲಾ ಧಾರಣೆ ಮಾಡುತ್ತಿರುವ ಸತೀಶ್ ಗುರುಸ್ವಾಮಿ ನಿಟ್ಟೆ, ಪ್ರಕಾಶ್ ಗುರುಸ್ವಾಮಿ ಮತ್ತು ಅಯ್ಯಪ್ಪ ಭಕ್ತವೃಂದ ರೇ ರೋಡ್ ಶಿಬಿರದ ಸುರೇಶ್ ಗುರುಸ್ವಾಮಿ ಶಿಬರೂರು ಇವರಿಗೆ ರಮೇಶ್ ಗುರುಸ್ವಾಮಿ ಅಪ್ಪಾಜಿ ಬೀಡು ವರ್ಲಿ, ಅಯ್ಯಪ್ಪ ಭಕ್ತವೃಂದ ರೇ ರೋಡ್ ಶಿಬಿರದ ಸತೀಶ್ ಗುರುಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಭಕ್ತವೃಂದ ಸಮಿತಿ ಅಂದೇರಿ ಯ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಫೌಂಡೇಶನ್ ನ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಗುರು ವಂದನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಮಂಗಳಾರತಿ, ಹರಿವರರಾಸನಂ. ಅಪಾರ ಸಂಖ್ಯೆಯ ಭಕ್ತರ ಕೂಡುವಿಕೆಯಲ್ಲಿ ನೆರವೇರಿತು.

ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ
ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್ ನ ಸಂಸ್ಥಾಪಕರಾದ ರಮೇಶ ಗುರುಸ್ವಾಮಿ, ಮತ್ತು ಆಡಳಿತ ಟ್ರಸ್ಟಿ ಶಾಂಭವಿ ಆರ್ ಶೆಟ್ಟಿ, ಗೌರವಾಧ್ಯಕ್ಷ ಹಾಗೂ ಟ್ರಸ್ಟಿ ಸುರೇಶ್ ಶೆಟ್ಟಿ ಕೆದಗೆ, ಟ್ರಸ್ಟಿಗಳಾದ ರತ್ನಾಕರ್ ಜಿ ಶೆಟ್ಟಿ, ಬಿ., ಪುಷ್ಪರಾಜ್ ಎಸ್ ಶೆಟ್ಟಿ , ರತ್ನಾಕರ್ ಆರ್ ಶೆಟ್ಟಿ, ಮೋಹನ್ ಟಿ ಚೌಟ, ರಘುನಾಥ್ ಎನ್ ಶೆಟ್ಟಿ, ದಿನೇಶ್ ಕುಲಾಲ್ ಮತ್ತು ವಸಂತ ಪೂಜಾರಿ, ಕಾರ್ಯಕಾರಿ ಸಮಿತಿಯ ಪರವಾಗಿ ಅಧ್ಯಕ್ಷ ಹಾಗೂ ಟ್ರಸ್ಟಿ ಪದ್ಮನಾಭ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಸಂತೋಷ್ ವಿ ಶೆಟ್ಟಿ ಮತ್ತು ಉದಯ ಶೆಟ್ಟಿ, ಗೌರವಕೋಶಧಿಕಾರಿ ಪ್ರಸಾದ್ ಶೆಟ್ಟಿ ಅರುವ,ಜೊತೆ ಕಾರ್ಯದರ್ಶಿ ವಿಜಯ ಬಿ ಶೆಟ್ಟಿ, ಜೊತೆ ಕೋಶ ಅಧಿಕಾರಿ ಸತ್ಯನಾರಾಯಣ ಕುಚ್ಚನ್,
ಸಲಹೆಗಾರರಾದ ಅರುಣ್ ಆಳ್ವ ಕಾಂತಡಿಗುತ್ತು, ಭೋಜ ಎಸ್ ಶೆಟ್ಟಿ ಕೇದಗೆ, ಅರುಣ್ ಗುರುಸ್ವಾಮಿ ಭಾಯಂಧರ್, ಸನತ್ ಕುಮಾರ್ ಶೆಟ್ಟಿ, ಪಡಿಪೂಜ ಸಮಿತಿಯ ಕಾರ್ಯಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಶೇಖರ್ ಶೆಟ್ಟಿ ವರ್ಲಿ, ಭರತ್ ಶೆಟ್ಟಿ ಅತ್ತೂರ್, ಸದಸ್ಯರಾದ ರಾಜೇಶ್ ಶೆಟ್ಟಿ ತಿರುಪತಿ, ಬಾಲಚಂದ್ರ ಡಿ ಶೆಟ್ಟಿ, ಗಣೇಶ್ ಸಾಲ್ಯಾನ್, ಗಣೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸಂತೋಷ್ ಸಾಲ್ಯಾನ್, ಪ್ರಾರ್ಥಸಾರಥಿ ಆರ್ ಶೆಟ್ಟಿ, ಅರವಿಂದ ಶೆಟ್ಟಿ , ಪ್ರಕಾಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಚಂದ್ರಕಾಂತ ಭಂಡಾರಿ, ಹರೀಶ್ ಶೆಟ್ಟಿ, ಜಯಕರ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಕಾಶ್ ಜಾದವ್, ಲೋಕೇಶ್ ತೋಳಾರ್, ದಿಲೀಪ್ ಮೊಗವೀರ, ಸತೀಶ್ ಪೂಜಾರಿ ,ಸಚಿನ್ ಶೆಟ್ಟಿ, ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಸಂತೋಷ್ ನಾಯಕ್ ಮತ್ತು ಅಜಯ್ ಶೆಟ್ಟಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಕಾರ್ಯಧ್ಯಕ್ಷೆ ಕವಿತಾ ಜಿ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ದಿವ್ಯ ಪಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೋಹಿಣಿ ಎಸ್ ಪೂಜಾರಿ, ಜೊತೆ ಕಾರ್ಯದರ್ಶಿ ಸುಜಾತ ಎನ್ ಪುತ್ರನ್, ಕೋಶಾಧಿಕಾರಿ ಶೋಭಾ ಶೆಟ್ಟಿ, ಜೊತೆ ಕೋಶಾಧಿಕಾರಿ ನಿರ್ಮಲಾ ಕೆ ಶೆಟ್ಟಿ, ಸಮಿತಿಯ ಸದಸ್ಯರಾದ ಶಾರದಾ ಜೆ ಶೆಟ್ಟಿ, ರಾಗಿಣಿ ಆರ್ ಶೆಟ್ಟಿ, ಶರ್ಮಿಳಾ ಶೆಟ್ಟಿ , ವಿಜಯಶ್ರೀ ಎಸ್ ಶೆಟ್ಟಿ, ನೀಮ ಆರ್ ಶೆಟ್ಟಿ, ವೀಣಾ ಎಂ ಹೆಗ್ಡೆ , ಪ್ರಜ್ಞ ಎಸ್ ಶೆಟ್ಟಿ, ಸುಮಿತ್ರ ಪಿ ಶೆಟ್ಟಿ , ಶೈಲ ಎಲ್ ಶೆಟ್ಟಿ, ರಮ್ಯಾ ಎಸ್ ಶೆಟ್ಟಿ, ಸಂಗೀತ ಪಿ ಶೆಟ್ಟಿ, ಯಶಸ್ವಿ ಆರ್ ಶೆಟ್ಟಿ, ರಾಣಿ ಎ ಶೆಟ್ಟಿ, ಸರೋಜಿನಿ ಕೆ ಕರ್ಕೇರ, ಸುಪ್ರಿತ ಎ. ಶೆಟ್ಟಿ, ಮಹಿಳಾ ವಿಭಾಗದ ಸಲಹೆಗಾರರಾದ ಉಷಾ ಬಿ ಶೆಟ್ಟಿ, ಪ್ರಮೀಳಾ ಜೆ ಶೆಟ್ಟಿ , ವಿನೋದ ಜೆ ಶೆಟ್ಟಿ. ಯಶೋದ ಎಸ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಉಪಸಮಿತಿಯ ಎಲ್ಲಾ ಸದಸ್ಯರುಗಳು ಸಹಕರಿಸಿದರು,
ಬೆಳಿಗ್ಗೆನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಯ್ಯಪ್ಪ ಸ್ವಾಮಿಯ ಗಂಧ – ಪ್ರಸಾದ ದೊಂದಿಗೆ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು.

ವರ್ಲಿ ಪರಿಸರದಲ್ಲಿ ನಡೆಯುತ್ತಿರುವ ಅಯ್ಯಪ್ಪ ಮಹಾಪೂಜೆಗೆ ಬಂಟ ಸಂಘದ ಪದಾಧಿಕಾರಿಗಳು ವಿವಿಧ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಬಿಲ್ಲವರ ಅಸೋಸಿಯೇಷನ್ ಮತ್ತಿತರ ಜಾತಿಯ ಸಂಘಟನೆಯ ಪದಾಧಿಕಾರಿಗಳು ರಾಜಕೀಯ ಮುಖಂಡರು , ಮಹಾನಗರ ಹಾಗೂ ವಿವಿಧ ಉಪನಗರಗಳಿಂದ ಅಯ್ಯಪ್ಪ ಶಿಬಿರದ ಗುರುಸ್ವಾಮಿಗಳು, ಭಕ್ತರ ಜನಸಾಗರವೇ ಹರಿದು ಬಂದಿತ್ತು, ಆಗಮಿಸಿದ ಎಲ್ಲಾ ಗಣ್ಯರಿಗೆ ಗುರುಸ್ವಾಮಿಗಳು ರಮೇಶ್ ಗುರುಸ್ವಾಮಿ, ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಗೌರವಿಸಿದರು.



Related posts

ಕರ್ನಾಟಕ ಸಂಘ ಡೊಂಬಿವಲಿಯ ಮಂಜುನಾಥ ಮಹಾವಿದ್ಯಾಲಯದಲ್ಲಿ ಜ್ಞಾನದ ಹೊಸ ಪರ್ವ ಆರಂಭ: ಕಲಾ ಮತ್ತು ವಿಜ್ಞಾನ ಪದವಿಪೂರ್ವ ವಿಭಾಗಗಳಿಗೆ ವಿಧ್ಯುಕ್ತ ಚಾಲನೆ

Mumbai News Desk

ವಸಯಿ ಕರ್ನಾಟಕ ಸಂಘದ ವಿಹಾರ ಕೂಟ

Mumbai News Desk

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ

Mumbai News Desk

ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮನೆ-ಮನೆಯಲ್ಲಿ ಭಜನಾ ಕಾರ್ಯಕ್ರಮ

Mumbai News Desk

ಮುಂಬೈನ ದಹಿ ಹಂಡಿಗೆ ರೋಮಾಂಚನ ಮೂಡಿಸಿದ ದಾಖಲೆಯ 10 ಹಂತದ ಮಾನವ ಪಿರಮಿಡ್‌ಗಳು

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಭಜನಾ ಮಂಡಳಿಯ ವರ್ಷಾಚರಣೆ

Mumbai News Desk