July 23, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಛೇರಿ : ಹಳದಿ ಕುಂಕುಮ ಕಾರ್ಯಕ್ರಮ







ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮವು ದಿನಾಂಕ
02.02.2025 ರಂದು ಆದಿತ್ಯವಾರ ಸಂಜೆ 3.00 ಗಂಟೆಗೆ ಸರಿಯಾಗಿ ಜರಗಿತು.
ಪ್ರಾರಂಭದಲ್ಲಿ ಅರ್ಚಕರಾದ ಐತಪ್ಪ ಸುವರ್ನರಿಂದ ಗುರು ಪೂಜೆ ಜರಗಿತು, ತದ ನಂತರ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರು ದ್ವೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪುರುಷೋತ್ತಮ್ ಎಸ್ ಕೋಟ್ಯನ್ , ಗೌ. ಪ್ರ. ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮತ್ತು ಸ್ಥಳೀಯ ಕಛೇರಿಯ ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ಮತ್ತು ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಎಸ್ ಪಾಲನ್, ಗೌ.ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿಯವರು ಉಪಸ್ಥಿತರಿದ್ದು ಸಹಕರಿಸಿದರು.
ನಂತರ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ಜರಗಿತು.
ಬಳಿಕ ಜರಗಿದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ವಹಿಸಿದರು, ಮುಖ್ಯ ಅತಿಥಿಯಾಗಿ ಪ್ರವಿಣಿ ದಯಾನಂದ ಸಾಲ್ಯಾನ್ ಮತ್ತು ಮಮತ ನವೀನ್ ಅಂಚನ್ ಉಪಸ್ಥಿತರಿದ್ದರು . ಮಾತ್ರವಲ್ಲದೆ ಕೇಂದ್ರ ಕಛೇರಿಯ ಪ್ರತಿನಿಧಿಯಾಗಿ ಪೂಜಾ ಪುರುಷೋತ್ತಮ್ ಕೋಟ್ಯಾನ್ ಉಪಸ್ತಿತರಿದ್ದರು.

ಮಹಿಳಾ ವಿಭಾಗದವರಿಂದ ಪ್ರಾರ್ಥನೆ ಆದ ನಂತರ ದೇವಿಕಾ ಕೆ ಸಾಲ್ಯಾನ್ ರವರು ಸ್ವಾಗತಿಸಿದರು. ವಿನೋದ ಪೂಜಾರಿ ಮತ್ತು ಗುಣವತಿ ಪೂಜಾರಿ

ಅತಿಥಿಗಳನ್ನು ಪರಿಚಯಿಸಿದರು. ಅತಿಥಿ ಯಾಗಿ ಬಂದ ಪ್ರವೀನಿ ದಯಾನಂದ ಸಾಲ್ಯಾನ್ ಹಳದಿ ಕುಂಕುಮದ ಬಗ್ಗೆ ಮನವರಿಕೆ ಮಾಡಿ ತನ್ನ ಅಧ್ಯಾಪಕ ವೃತ್ತಿಯನ್ನು ತಾನು ಪಟ್ಟ ಪರಿಶ್ರಮವನ್ನು ವಿವರಿಸಿದರು, ಈ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸಿದ ಮಹಿಳೆಯರನ್ನು ಹೂ ಗುಚ್ಚ ನೀಡಿ ಗೌರವಿಸಲಾಯಿತು.


ಅಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ರವರು ಮಹಿಳೆಯರು ಆಯೋಜಿಸಿದ ಹಳದಿ ಕುಂಕುಮ ಕಾರ್ಯಕ್ರಮವನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಗೌ. ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಪಾಲನ್, ಗೌ. ಕೋಶಾಧಿಕಾರಿ ಆನಂದ್ ಪೂಜಾರಿಯವರು ಉಪಸ್ತಿತರಿದ್ದರು.
ಕೊನೆಗೆ ಶ್ರೀಮತಿ ವಸಂತಿ ಪೂಜಾರಿಯವರು ವಂದಿಸಿದರು.
ಗೌ. ಕಾರ್ಯದರ್ಶಿ ಜೆ ಜೆ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.



Related posts

ರೇ ರೋಡ್ ಶ್ರೀ ಅಯ್ಯಪ್ಪ  ಭಕ್ತ ವೃಂದದ ಮಂದಿರದ ವರ್ಧಂತ್ಯೋತ್ಸವ.

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ: ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಮಹಿಳೆಯರಿಗೆ ಫರ್‌ಘಂಟಿ ವಿತರಣೆ

Mumbai News Desk

ಶಹಾಡ್: ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ.

Mumbai News Desk

ಅಂಧೇರಿ: ಶ್ರೀ ಮದ್ಭಾರತ ಮಂಡಳಿಯ 149ನೇ ವರ್ಷದ ಧಾರ್ಮಿಕ ಪಾರಾಯಣಕ್ಕೆ ಚಾಲನೆ — ‘ಜೈಮಿನಿ ಭಾರತ’ ಗ್ರಂಥ ವಾಚನ ಪ್ರಾರಂಭ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಹಿಂದೂ ಧರ್ಮ ಜಾಗೃತಿ ಬೇಸಿಗೆ ಶಿಬಿರ

Mumbai News Desk

ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ,

Mumbai News Desk