31.6 C
Mumbai
June 7, 2026
Mumbai News Kannada
ಪ್ರಕಟಣೆ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಇದರ 48 ನೇ  ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ.





ಡೊಂಬಿವಲಿಯ ಮುಂಬ್ರಾ ಮಿತ್ರ ಭಜನಾ ಮಂದಿರದ ಸಂಚಾಲಕತ್ವದ ಡೊಂಬಿವಲಿ ಪಶ್ಚಿಮದ ಶ್ರೀ ಮಹಾವಿಷ್ಣು ಮಂದಿರದಲ್ಲಿ ಮಾರ್ಚ್ 22 ಶನಿವಾರ 48 ನೇ  ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ ಜರಗಲಿದೆ. 

ಬೆಳಿಗ್ಗೆ 6 ರಿಂದ 7 ರ ತನಕ ಗಣ ಹೋಮ 

9 ರಿಂದ 10.30 ರ ತನಕ  ಸತ್ಯನಾರಾಯಣ ಮಹಾಪೂಜೆ 

ಮಧ್ಯಾಹ್ನ 12.30 ಕ್ಕೆ ಕಳಸ ಪ್ರತಿಷ್ಠೆ ಹಾಗು ಶನಿಗ್ರಂಥ ಪಾರಾಯಣ.

12.30 ರಿಂದ 3.00 ರ ತನಕ ಅನ್ನ ಸಂತರ್ಪಣೆ.

6.30 ರಿಂದ 7 ರ ತನಕ ಭಜನೆ ,

7 ರಿಂದ 7.30 ರ ತನಕ ಧಾರ್ಮಿಕ ಸಭೆ 

7.30 ಕ್ಕೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಹಾಗು ಅನ್ನ ಸಂತರ್ಪಣೆ. 

ಶನಿ ಗ್ರಂಥ ಪಾರಾಯಣದ ದೀಪ ಪ್ರಜ್ವಲಣೆಯನ್ನು ಅತಿಥಿ ಗಣ್ಯರಿಂದ ಕೈಗೊಂಡು. ರಾತ್ರಿ 7.00 ಗಂಟೆಗೆ ಶ್ರೀ ಮಹಾವಿಷ್ಣು ಮಂದಿರದ ಅಧ್ಯಕ್ಷರಾದ ಶ್ರೀಯುತ ಇಂದುಶೇಖರ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದ್ದು ಅತಿಥಿ ಗಣ್ಯರ ಉಪಸ್ಥಿತಿಯೊಂದಿಗೆ  ನೆರವೇರಲಿದೆ. ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಹಿತೈಷಿಗಳು , ಭಕ್ತಾಭಿಮಾನಿಗಳು , ಕಾರ್ಯಕ್ರಮವನ್ನು ಯಶಸ್ವಿಗೊಳಿಸಲೆಂದು ಮಂದಿರದ ಗೌರವ ಅಧ್ಯಕ್ಷರಾದ ಶ್ರೀಯುತ ನಿತಿನ್ ಪ್ರಕಾಶ್ ಪುತ್ರನ್ , ಉಪಾಧ್ಯಕ್ಷರಾದ ಶ್ರೀಯುತ ಅರವಿಂದ್ ಪದ್ಮಶಾಲಿ, ಕಾರ್ಯದರ್ಶಿ  ಶ್ರೀಯುತ ಸಚಿನ್ ಪೂಜಾರಿ , ಕೋಶಾಧಿಕಾರಿ ಶ್ರೀಯುತ ಪ್ರವೀಣ್ ಶೆಟ್ಟಿ ಹಾಗು ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಹಾಗು ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು ,ಅರ್ಚಕ ವರ್ಗ , ಸದಸ್ಯರುಗಳು ಪ್ರಕಟಣೆಯ ಮೂಲಕ ವಿನಂತಿಸಿರುತ್ತಾರೆ.



Related posts

ಮಕರ ಜ್ಯೋತಿ ಫೌಂಡೇಶನ್ ಸಾಯನ್ ಕೋಲಿವಾಡ : ಅಗಸ್ಟ್ 23 ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ

Mumbai News Desk

ಫೆ. 08 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರ.

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜ1 ರಂದು, ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ.

Mumbai News Desk

ಬೊಯಿಸರ್ : ಜುಲೈ ತಾ.10 ರಂದು ಸ್ವಾಮಿ ನಿತ್ಯನಂದ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಫೆ. 15ರಂದು ಮಹಾಶಿವರಾತ್ರಿ ಮಹೋತ್ಸವ; ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೋತ್ಸವ

Mumbai News Desk

ನ. 26, 27 ಕಾಪುವಿನ ಮೂರೂ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜಾರ್ದೆ ಮಾರಿಪೂಜೆ

Mumbai News Desk