July 23, 2026
Mumbai News Kannada
Uncategorized

ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸರಕಾರಕ್ಕೆ ಒತ್ತಾಯ








ಮಂಗಳೂರು ಮಾ.14 : ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸರಕಾರವನ್ನು ಒತ್ತಾಯಿಸಿದೆ.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಇರುವ ಬಂಟರ ಸಮುದಾಯವು ಒಟ್ಟು ಜನಸಂಖ್ಯೆ ಶೇಕಡಾ 60 ಮಂದಿ ಬಡತನ ರೇಖೆಯಲ್ಲಿದ್ದು 30 ಶೇಕಡಾ ಮಧ್ಯಮ ವರ್ಗದಲ್ಲಿದ್ದು ಕೇವಲ 10 ಶೇಕಡಾ ಜನರು ಸಿರಿವಂತರಾಗಿದ್ದಾರೆ. ಈ ಬಂಟ ಸಮುದಾಯ ಕಡಿಮೆ ಜನರು ಇರುವ ಒಂದು ವಿಶಿಷ್ಟ ಜಾತಿಯಾಗಿದ್ದು ತೀರ ಕೆಳಸ್ತರದ ಮಂದಿಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶ ನಮ್ಮದಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರಲು ಸರಕಾರದ ಸಂಪೂರ್ಣ ಸಹಾಯ ಇದ್ದಲ್ಲಿ ಮಾತ್ರ ಸಾಧ್ಯ. ಅದಕ್ಕಾಗಿ ಕರ್ನಾಟಕ ಘನ ಸರಕಾರ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಿ ಮುಂದಿನ ದಿನಗಳಲ್ಲಿ ಬಡ ಬಂಟರ ಉನ್ನತೀಕರಣ ಮಾಡಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಹಕ್ಕೊತ್ತಾಯ ಮಾಡುತ್ತಿದೆ ಎಂದು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟ ( ರಿ ) ಮಂಗಳೂರು ತಿಳಿಸಿದೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಹಕ್ಕೊತ್ತಾಯಕೆ ಸ್ಪಂದಿಸಿ ಶಾಸಕರಾದ ಸುನಿಲ್ ಕುಮಾರ್ ಅವರು ವಿಧಾನ ಸಭೆಯಲ್ಲಿ ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರು



Related posts

In Mozambique, a Living Laboratory for Nature’s Renewal Are On The Way

admin

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

ವಿಜಯ್ ಮಲ್ಯಗೆ ಭಾರತಕ್ಕೆ ಮರಳಲು ‘ಕೊನೆಯ ಅವಕಾಶ’ ನೀಡಿದ ಬಾಂಬೆ ಹೈಕೋರ್ಟ್

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಮೇ. 15ರಿಂದ ಮುಂಬೈನಲ್ಲಿ ಶೇಕಡಾ 10 ರಷ್ಟು ನೀರು ಕಡಿತ: ಸಾರ್ವಜನಿಕರು ಮಿತಬಳಕೆ ಮಾಡಲು ಬಿಎಂಸಿ ಸೂಚನೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧಿ ಸುಂದರ್ ಪೂಜಾರಿಗೆ ಶೇ 93.00 ಅಂಕ.

Mumbai News Desk