32 C
Mumbai
April 24, 2026
Mumbai News Kannada
ಸುದ್ದಿ

ಬೈಂದೂರು: ಕೊಡೇರಿ ಕಡಲ್ಕೊರೆತ ಪ್ರದೇಶಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ತಂಡ ಭೇಟಿ: ಸ್ಥಳೀಯರೊಂದಿಗೆ ಸಮಾಲೋಚನೆ





ಚಿತ್ರ, ವರದಿ : ದಿನೇಶ್ ಕುಲಾಲ್ 

ಉಡುಪಿ: ಜೂನ್ 10: ಅವಿಭಜಿತ ದಕ ಜಿಲ್ಲೆಯ ಪರಿಸರ,ಉದ್ಯಮ ಮತ್ತು ಸಾಂಸ್ಕ್ರತಿಕ ಪ್ರಗತಿಗೆ ಪಣತೊಟ್ಟು ದುಡಿಯುತ್ತಿರುವ ಪ್ರತಿಷ್ಠಿತ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ) ತನ್ನ ವಾರ್ಷಿಕ  ಅಧ್ಯಯನ ಭೇಟಿ ಸಂದರ್ಭದಲ್ಲಿ ಈ ಬಾರಿ ಉಡುಪಿ ಜಿಲ್ಲೆಯ ತ್ರಾಸಿ .ಮರವಂತೆ ಬೀಚ್ ನ ಕಡಲ್ಕೊರೆತ ಪ್ರದೇಶಗಳಿಗೆ ಜೂನ್ 9 ರಂದು ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ನಡೆಸಿತು.

ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರು ಪ್ರದೇಶದಲ್ಲಿ  ಸಮುದ್ರ ಮತ್ತು ನದಿ ದಂಡೆಗೆ ಸಮಿತಿ ಭೇಟಿ ನೀಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ ಕಡಲು ಮತ್ತು ನದಿ ಕೊರೆತ ಸಮಸ್ಯೆಗಳ ಬಗ್ಗೆ ಅವರ ಅಹವಾಲುಗಳನ್ನು ಆಲಿಸಿತು.

ಕೊಡೇರಿ ಪ್ರದೇಶ ಎಡಮಾವಿನ ಹೊಳೆ ಮತ್ತು ಸಮುದ್ರ ಕೂಡು ಪ್ರದೇಶವಾಗಿದ್ದು ಸ್ಥಳೀಯ ಜನತೆ ಬಳಸುವ ಪುಟ್ಟ ಬಂದರೂ ಇದ್ದು ಕಡಲ್ಕೊರೆತ ಸಮಸ್ಯೆಯಿಂದ ಬಾಧಿತವಾಗಿದೆ. ಇಂದು ಪರಿಸರದ ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಅಳಲನ್ನು ತೋಡಿಕೊಂಡಿದ್ದರು.

ಒಂದೊಮ್ಮೆ ದಡದಿಂದ 5೦೦ ಮೀಟರ್ ಗೂ ಹೆಚ್ಚು ದೂರವಿದ್ದ ಸಮುದ್ರ ಪ್ರಸ್ತುತ 2೦0 ಮೀಟರ್ ಗೂ ಕಡಿಮೆ ಅಂತರವನ್ನು ಹೊಂದಿದೆ. ವರ್ಷಾವರ್ಷ ಕಡಲು ತಟವನ್ನು ನುಂಗುತ್ತಲೆ ನಡೆದಿದ್ದು ದಂಡೆಯ ಬಹಳಷ್ಟು ಭಾಗಕ್ಕೆ ತಡೆಗೋಡೆ ನಿರ್ಮಾಣ ಬಾಕಿ ಇದೆ. ಹಲವು ಬಾರಿ ಕಾಂಟ್ರಾಕ್ಟ್ ನೀಡಲಾಗಿದ್ದರೂ ಸೀಮಿತ ಪ್ರದೇಶದಲ್ಲಷ್ಟೆ ಬಂಡೆಹಾಸಿನ ತಡೆ ನಿರ್ಮಾಣ ವಾಗಿರುತ್ತದೆ ಎಂದು ಸ್ಥಳೀಯ ಮತ್ಸ್ಯೋದ್ಯಮಿ‌ ರಮೇಶ್ ಖಾರ್ವಿ ಸಮಿತಿ ಗೆ ವಿವರಿಸಿದರು.
ಇದೇ ರೀತಿ ಸಮುದ್ರ ಕ್ಕೆ ಸಮಾನಾಂತರ ವಾಗಿ ಬಹಳ ದೂರ ಸಾಗುವ ಎಡಮಾವಿನ ಹೊಳೆಯ ದಂಡೆಗಳು ನದಿಕೊರೆತಕ್ಕೊಳಗಾಗಿವೆ ಎಂದು ಅವರು ವಿವರಿಸಿದರು.
ಮಧ್ಯಾಹ್ನದಿಂದ ಸಂಜೆವರೆಗೆ ಪೂರ್ತಿ ಪರಿಸರವನ್ನು ಪರಿಶೀಲನೆ ನಡೆಸಿ ಸರಕಾರ ಈ ಬಗ್ಗೆ ಜಾಗೃತರಂತೆ ನಾವು ಒತ್ತಾಯಿಸುತ್ತೇವೆ ಎಂದು ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ಜಯಕೃಷ್ಣ ಶೆಟ್ಟಿ ಪರಿಸರದ ಜನರಿಗೆ ಭರವಸೆಯನ್ನು ನೀಡಿದರು. 

ಜಯಶ್ರೀಕೃಷ್ಣ ಪರಿಸರ ಪ್ರೇಮಿ  ಸಮಿತಿಯ ತಂಡದಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ , ಕೋಶಾಧಿಕಾರಿ ಸದಾನಂದ ಆಚಾರ್ಯ, ಸಮಿತಿಯ ವಕ್ತಾರ ದಯಾಸಾಗರ್ ಚೌಟ, ಉಪಾಧ್ಯಕ್ಷರು ಕೇಂದ್ರ ಮತ್ತು ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ.ಸಮಿತಿಯ ಸಮಿತಿಯ ರಾಜ್ಯ ಸಂಯೋಜಕರಾದ ಕೆ. ಪಿ. ಜಗದೀಶ್ ಅಧಿಕಾರಿ .

ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಮಾಜಿ ಅಧ್ಯಕ್ಷರಾದ ಧರ್ಮಪಾಲ್  ದೇವಾಡಿಗ .

, ನ್ಯಾ. ಆರ್. ಎಂ. ಭಂಡಾರಿ, , ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್,   ದೇವದಾಸ್ ಕುಲಾಲ್,  ಸಿಎಸ್ ಗಣೇಶ್ ಶೆಟ್ಟಿ, ರಾಕೇಶ್ ಭಂಡಾರಿ ಮತ್ತು ಮಹೇಶ್ ಕಾರ್ಕಳ,    ,   ಸಮಿತಿಯ ಸದಸ್ಯರುಗಳಾದ ಪೆಲಿಕ್ಸ್ ಡಿ’ಸೋಜಾ ದಂಪತಿ., , ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, , ಚಿತ್ರಾಪು ಕೆ.ಎಂ. ಕೋಟ್ಯಾನ್, , ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, , ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ ಮಣಿ ಗುತ್ತು  , ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಾಕರ್ ಶೆಟ್ಟಿ 

ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ,   ಹಾಗೂ ಸಮಿತಿಯ ಇತರ ಪದಾಧಿಕಾರಿಗಳು   ಉಪಸ್ಥರಿದ್ದರು.

B. Dinesh Kulal

Mob.: 9821868674



Related posts

ನ್ಯೂ ಪನ್ವೇಲ್  ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದ19ನೇ ಶ್ರೀ ಅಯ್ಯಪ್ಪ ಮಹಾಪೂಜೆ

Mumbai News Desk

ಹ್ಯೂಮನ್ ರೈಟ್ಸ್ ಇಂಟರ್ನ್ಯಾಷನಲ್ ಫೆಡರೇಶನ್ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿ ಪತ್ರಕರ್ತ ಯೋಗೇಶ್ ಪುತ್ರನ್ ನೇಮಕ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ   ಮುಖ್ಯಮಂತ್ರಿ  ದೇವೇಂದ್ರ ಫಡ್ನವಿಸ್  ಗೆ ಆಹ್ವಾನ

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳದ ದಳಪತಿಯಗಿ ಪ್ರದೀಪ್ ಅತ್ತಾವರ ಆಯ್ಕೆ

Mumbai News Desk

ಮುಂಬೈ : ಗೇಟ್ ವೇ ಆಫ್ ಇಂಡಿಯಾ ಬಳಿ ದೋಣಿ ಮಗುಚಿ ಒಂದು ಸಾವು, 20 ಜನರ ರಕ್ಷಣೆ

Chandrahas

ಮಂಗಳೂರು : ಮೂಲತ್ವ ಫೌಂಡೇಶನ್ ಮತ್ತು ವಿವಿಧ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ

Mumbai News Desk