30.9 C
Mumbai
June 8, 2026
Mumbai News Kannada
ತುಳುನಾಡು

ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ






ಮೂಲ್ಕಿ ಸಮಾಜಮುಖಿ ಚಿಂತನೆಯೊಂದಿಗೆ ಉತ್ತಮ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಯುವವಾಹಿನಿಯು ಸಮಾಜದಲ್ಲಿ ಮುಂಚೂಣಿಯಲ್ಲಿದೆ. ಅಧ್ಯಕ್ಷ ಸ್ಥಾನವನ್ನು ಒಂದೇ ವರ್ಷಕ್ಕೆ ಮೀಸಲಿಟ್ಟು ಸಮಾಜದಲ್ಲಿ ನಾರಾಯಣಗುರುಗಳ ತತ್ವಾದರ್ಶವನ್ನು ಪಸರಿಸುತ್ತಿರುವ ಸಂಸ್ಥೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮಂಗಳೂರಿನ ಖಾಸಗಿ ಛಾನೆಲ್‌ನ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿಯ ನೂತನ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.


ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಿತೇಶ್ ಮೂಲ್ಕಿ ಅಧ್ಯಕ್ಷತೆಯನ್ನು ವಹಿಸಿ, ನೂತನ ಅಧ್ಯಕ್ಷ ವಿನಯಕುಮಾರ್ ಮಟ್ಟು ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.
ತುಳುಭಾಷಾ ಸಂಶೋಧಕ ಮಹಿ ಮೂಲ್ಕಿ ಮೂಲ್ಕಿ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಸಂಘಟನಾ ಕಾರ್ಯದರ್ಶಿ ಲೋಹಿತ್‌ ರೆಂಜಾಳ ಸುಳ್ಯ, ನೂತನ ಕಾರ್ಯದರ್ಶಿ ಪ್ರೇರಣಾ, ಕೋಶಾಧಿಕಾರಿ ಜ್ಯೋತಿ ರಾಮಚಂದ್ರ ಉಪಸ್ಥಿತರಿದ್ದರು.
ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಿತೇಶ್ ಮೂಲ್ಕಿ ಸ್ವಾಗತಿಸಿದರು. ಕಾರ್ಯದರ್ಶಿ ಲತೀಶ್ ಸಾಲ್ಯಾನ್ ಕಾರ್ನಾಡು ವರದಿ ವಾಚಿಸಿ, ವಂದಿಸಿದರು.
ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.



Related posts

ಯುವಕ ಸಂಘ ತೋಕೂರು,ಮಹಿಳಾ ಮಂಡಲ ತೋಕೂರು, ಹಾಗೂ ಪತಂಜಲಿ ಯೋಗ ಸಮಿತಿ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

Mumbai News Desk

ಕಾಪು : ಧರ್ಮಪಾಲ ಯು ದೇವಾಡಿಗ ಮತ್ತು ಪರಿವಾರದವರ ಹರಕೆ ಮಾರಿ ಪೂಜೆ ಯಶಸ್ವಿ ಸಂಪನ್ನ

Mumbai News Desk

ಸಾಲಿಯಾನ್ ಆದಿ ಮೂಲಸ್ಥಾನ ಪಲಿಮಾರು : ವಾರ್ಷಿಕ ನಾಗದರ್ಶನ ಹಾಗೂ ದೈವದ ತಂಬಿಲ ಸೇವೆ ಸಂಪನ್ನ

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಬಲಿ ಉತ್ಸವ ಸಂಪನ್ನ

Mumbai News Desk

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ‘ಮಾತೃ ವೈಭವ’ ಸಂಭ್ರಮ; ಭಕ್ತಿಪರವಶತೆಯ ಹೊರೆಕಾಣಿಕೆ ಸಮರ್ಪಣೆ

Mumbai News Desk