25 C
Mumbai
March 7, 2026
Mumbai News Kannada
ಸುದ್ದಿ

ಕಾಪು ಮೊಗವೀರ ಮಹಾಸಭಾ, ಮುಂಬಯಿ ಇದರ 84 ನೇ ವಾರ್ಷಿಕ ಮಹಾಸಭೆ





ಕಾಪು ಮೊಗವೀರ ಮಹಾಸಭಾ, ಮುಂಬಯಿ ಇದರ 84 ನೇ ವಾರ್ಷಿಕ ಮಹಾಸಭೆಯು ರವಿವಾರ ಮೇ 25 ರಂದು ಬೆಳಗ್ಗೆ ಗಂಟೆ 10.00 ಕ್ಕೆ

ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಸಭಾದ ಅಧ್ಯಕರಾದ ಸತೀಶ್‌ಕುಮಾರ್‌ ಎನ್‌.ಕರ್ಕೇರರ ಅಧ್ಯಕ್ಷತೆಯಲ್ಲಿ ಜರಗಿತು.  

ಆರಂಭದಲ್ಲಿ ಕಾರ್ಯದರ್ಶಿ ರೂಪೇಶ್‌ ಡಿ.ಸುವರ್ಣರು ಉಪಸ್ಥಿತರಿದ್ದ ಎಲ್ಲಾ ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಆ ಬಳಿಕ ಕಾರ್ಯಸೂಚಿಯಂತೆ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರಗಳನ್ನು ಕ್ರಮವಾಗಿ ಕಾರ್ಯದರ್ಶಿ ರೂಪೇಶ್‌ ಡಿ. ಸುವರ್ಣ ಮತ್ತು ಕೋಶಾಧಿಕಾರಿ ಉಮೇಶ್‌ .ಕಕೇರರು ಸಭೆಯ ಮುಂದೆ ಮಂಡಿಸಿದರು.  ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಬಳಿಕ ಇವೆರಡನ್ನೂ ಸರ್ವಾನುಮತದಿಂದ ಮಂಜೂರು ಮಾಡಲಾಯ್ತು.  

ಕಾಪು ಪಡು ಗ್ರಾಮದಲ್ಲಿ ಸಾವಿರಾರು ಮಂದಿ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿರುವ ಕಾಪು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮದ ಶಾಲೆಗೆ ನೂರು ವರ್ಷ ತುಂಬಲಿದ್ದು ಮುಂದಿನ ವರ್ಷ  ನವಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಶಾಲೆಯ ಶತಮಾನೋತ್ಸವವನ್ನು ಯೋಗ್ಯ ರೀತಿಯಲ್ಲಿ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು.  ಈ ಕುರಿತಾಗಿ ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಧನ ಸಂಗ್ರಹಿಸಲು ನಿರ್ಧರಿಸಲಾಗಿ ಇದರ ಬಗ್ಗೆ ಮುಂದುವರಿಯಲು ಮೇಲ್ವಿಚಾರಕರಾಗಿ ಮೋಹನ ಓ.ಮೆಂಡನ್‌ರನ್ನು  ಆಯ್ಕೆ ಮಾಡಲಾಯ್ತು.

ಆ ಬಳಿಕ 2025-2028 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯ್ತು.

ನೆರೆದ ಸದಸ್ಯರ ಪೈಕಿ ಮಾತನಾಡುತ್ತಾ ಡಿ.ಎಲ್‌.ಅಮೀನ್‌, ನೀಲಾಧರ ಎಂ. ಸಾಲ್ಯಾನ್‌ ರತ್ನಾಕರ ಕರ್ಕೇರ, ಯಶೋಧರ ವಿ.ಕೋಟ್ಯಾನ್‌, ಮೋಹನ ಓ. ಮೆಂಡನ್‌, ಉಮೇಶ್‌ ಕರ್ಕೇರ, ನಿತೇಜ್‌ ಕರ್ಕೇರ, ಆನಂದ ವಿ.ಕೋಟ್ಯಾನ್‌ ಮತ್ತು ಪ್ರಕಾಶ್‌ ಸುವರ್ಣರು ಸಭೆಯ ಪ್ರಗತಿಯ ಬಗ್ಗೆ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.  

ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಸತೀಶ್‌ಕುರ್ಮರ್‌ ಎನ್‌. ಕರ್ಕೇರರು ಸಭಿಕರು ಸಭಾದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸದಸ್ಯರ ಈ ಉತ್ಸಾಹ ಮತ್ತು ಹುರುಪು ಇದೇ ರೀತಿಯಲ್ಲಿ ಮುಂದುವರಿದರೆ ಸಭಾದಿಂದ ಇನ್ನಷ್ಟು ಸಮಾಜಪರ  ಸೇವೆಯನ್ನು ಮಾಡಲು ಸಾಧ್ಯ ಎಂದರು.  ಸಭೆಯ ಕಾರ್ಯಕಲಾಪಗಳಲ್ಲಿ ತೊಡಗಿಕೊಂಡಿರುವಾಗ ಯಾವುದೇ ಭಿನ್ನಾಭಿಪ್ರಾಯಗಳು ಬಂದರೂ ಅವನ್ನು ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಅವರು  ಕರೆ ಇತ್ತರು.

ಕಾರ್ಯದರ್ಶಿ ರೂಪೇಶ್‌ ಡಿ.ಸುವರ್ಣರು ವಂದನಾರ್ಪಣೆಗೈದರು.  ಉಪಸ್ಥಿತರಿದ್ದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

 ವರದಿ: ಸೋಮನಾಥ ಎಸ್‌.ಕರ್ಕೇರ, ಫೋನ್‌: 9819321186



Related posts

ಕಾಂತಾವರ : ಶೋಧನ್ ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ಲೋಕಾರ್ಪಣೆ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದ ವೇಳೆ ಮುರಿದು ಬಿದ್ದ ರಥದ ಮೇಲ್ಬಾಗ

Mumbai News Desk

ಅಯೋಧ್ಯೆಯಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪಿಸಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಮುಂಬೈ ಜನತೆಯ ಭವ್ಯ ಸ್ವಾಗತ,

Mumbai News Desk

ಬಂಟ್ವಾಳ: ‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ,

Mumbai News Desk

ನಿಡ್ಲೆ ಗೋವಿಂದ ಭಟ್ ಮತ್ತು ಪುತ್ತಿಗೆ ಕುಮಾರ ಗೌಡ ರಿಗೆ ಕಾಂತಾವರ ಯಕ್ಷದೇಗುಲ ಪ್ರಶಸ್ತಿ

Mumbai News Desk

ಬಿಲ್ಲವರ ಎಸೋಸಿಯೇಶನ ನ ಮಾಜಿ ಉಪಾಧ್ಯಕ್ಷ ಸಿ. ಟಿ. ಸಾಲ್ಯಾನ್ ನಿಧನ

Mumbai News Desk