September 6, 2026
Mumbai News Kannada
ಮುಂಬಯಿ

ಮೀರಾ – ಭಾಯಂದರ್ ನಲ್ಲಿ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಉದ್ಘಾಟನೆ. ಕಾರ್ಯಾಧ್ಯಕ್ಷರಾಗಿ ಉದಯ ಡಿ ಸುವರ್ಣ ಆಯ್ಕೆ





ಮೀರಾ – ಭಾಯಂದರ್ ಜೂ 19. ಸಂಘ ಸಂಸ್ಥೆಗಳು, ಭಜನಾ ಮಂಡಳಿಗಳು, ಗಣೇಶೋತ್ಸವ ಮಂಡಳಿಗಳು, ಅಯ್ಯಪ್ಪ ಶಿಬಿರಗಳು, ನಾಟಕ ಸಂಸ್ಥೆ, ನೃತ್ಯ ಸಂಸ್ಥೆಗಳು ಸೃಷ್ಟಿಯಾದ ಮೀರಾ ಭಾಯಂದರ್ ನಲ್ಲಿ ಜೂ 15 ರಂದು ಹೊಸದೊಂದು, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಜನ್ಮತಾಳಿದೆ.
ಸಂಘಟನೆಯ ಮಹತ್ವ ಮತ್ತು ಅವಶ್ಯಕತೆ ಯನ್ನು ಮನದಲ್ಲಿಟ್ಟುಕೊಂಡು ಮೀರಾ ಭಾಯಂದರ್ ಪರಿಸರದ ಸಮಾಜ ಸೇವಕರು, ಬಿಲ್ಲವ ಬಂಧುಗಳು ಒಟ್ಟಾಗಿ ಮನೆ ಮನೆಯಲ್ಲಿ ಭಜನೆ, ಕುಣಿತ ಭಜನೆ ಪ್ರಾರಂಭ ಮಾಡಬೇಕೆನ್ನುವ ಉದ್ದೇಶದಿಂದ ಸಂಸ್ಥೆ ಪ್ರಾರಂಭಗೊಂಡಿದೆ.
ಶ್ರೀ ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಂಡು ಸಮಾನ ಮನಸ್ಸಿನಿಂದ ಸಂಘಟಿತರಾಗಿ ಭಕ್ತಿ,ಭಾವ, ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಈ ಭಜನಾ ಮಂಡಳಿಗೆ ಚಾಲನೆ ನೀಡಲಾಗಿದೆ. ಮಂಡಳಿಯ ಮುಖಾಂತರ ಜನಸೇವೆ, ಸಮಾಜ ಸೇವೆ ಮಾಡುವ ಉದ್ದೇಶದಿಂದ ಹೊಸ ಸಮಿತಿಯನ್ನು ರಚಿಸಲಾಗಿದೆ.

ಹಿರಿಯ ಸಮಾಜ ಸೇವಕರುಗಳಾದ ನಾರಾಯಣ ಸುವರ್ಣ, ಶಿವಾನಂದ ಬಂಗೇರ, ನರೇಶ್ ಕೆ. ಪೂಜಾರಿ ಇವರುಗಳನ್ನು ಗೌರವ ಕಾರ್ಯಾಧ್ಯಕ್ಷರನ್ನಾಗಿ, ಯುವ ನಾಯಕ, ಸಂಘಟನಾ ಮುಂದಾಳು ಉದಯ ಡಿ ಸುವರ್ಣರನ್ನು ಮಂಡಳಿಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಶೇಖರ್ ಪೂಜಾರಿ, ಮಾಧವ ಆರ್ ಸುವರ್ಣ, ಏ ಕೆ ಹರೀಶ್ ಹಾಗೂ ದಯಾನಂದ್ ಸುವರ್ಣರನ್ನು ಉಪ ಕಾರ್ಯಾಧ್ಯಕ್ಷರಾಗಿದ್ದಾರೆ. ಸಂಘಟಕಿ, ಸಮಾಜ ಸೇವಕಿ ಮಾಲತಿ ಆರ್ ಬಂಗೇರ, ನಾರಾಯಣ ಗುರು ಭಜನಾ ಮಂಡಳಿಯ ಗೌ. ಪ್ರ ಕಾರ್ಯದರ್ಶಿಯಾಗಿದ್ದಾರೆ.
ಶಾಂತ ಏ ಪೂಜಾರಿ, ಬೇಬಿ ವಿ ಪೂಜಾರಿ ಇವರು ಜತೆ ಕಾರ್ಯದರ್ಶಿಗಳಾಗಿದ್ದಾರೆ. ಶೋಭಾ ಕೋಟ್ಯಾನ್ ಕೋಶಾಧಿಕಾರಿಯಾಗಿ, ಚಂದ್ರಾವತಿ ಪೂಜಾರಿ ಮತ್ತು ಕಲಾ ಪೂಜಾರಿಯವರನ್ನು ಜತೆ ಕೋಶಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಸುಂದರ್ ಪೂಜಾರಿ, ರವೀಂದ್ರ ಬಂಗೇರ, ಧನಲಕ್ಷ್ಮೀ ಪೂಜಾರಿ, ವಿಶ್ವನಾಥ್ ಪೂಜಾರಿ, ಲೋಕನಾಥ್ ಪೂಜಾರಿ, ಗಂಗಾಧರ್ ಪೂಜಾರಿ, ಗೀತಾ ಪೂಜಾರಿ, ಸೌಮ್ಯ ಪೂಜಾರಿ, ಶ್ವೇತ ಪೂಜಾರಿ, ವನಿತಾ ಅಮೀನ್, ಉಷಾ ಪೂಜಾರಿ, ಸವಿತಾ ಪೂಜಾರಿ, ಶೋಭಾ ಕೋಟ್ಯಾನ್, ಜಯ ಕೋಟ್ಯಾನ್, ಪುಷ್ಪ ಪೂಜಾರಿ, ಜಯಲಕ್ಷ್ಮಿ ಪೂಜಾರಿ, ಗುಣ ಪೂಜಾರಿ, ವಿಜಯಲಕ್ಷ್ಮಿ ಸುವರ್ಣ, ಲೀಲಾ ಪೂಜಾರಿ, ಸ್ನೇಹಲತಾ ಪೂಜಾರಿ, ಕೇಶವ್ ಪೂಜಾರಿ, ಉಮೇಶ್ ಬಾರ್ಕುರು, ಧನಶ್ರೀ ಪೂಜಾರಿ, ಜಯ ಎಸ್ ಪೂಜಾರಿ, ಸುಜಾತ ಪೂಜಾರಿ, ಕುಶಲ ಪೂಜಾರಿ, ತರುಣ್ ಮೂಲ್ಕಿ, ಶ್ರೀನಿವಾಸ್ ಸುವರ್ಣ, ಶೋಭಾ ಆನಂದ್, ಪ್ರೇಮ ಪೂಜಾರಿ ಇವರುಗಳು ಸಮಿತಿಯ ಸದಸ್ಯರಾಗಿದ್ದಾರೆ.

ಪೂಜಾ ಸಮಿತಿಯಲ್ಲಿ ಅರ್ಚಕ ಸದಾನಂದ ಸುವರ್ಣ, ಲೀಲಾ ಗಣೇಶ್, ಗುಣವತಿ ಪೂಜಾರಿ ಬಲರಾಜ್, ಗೀತಾ ಹಾಗೂ ಸರೋಜಿನಿ ಯವರನ್ನು ನೇಮಿಸಲಾಗಿದೆ.
ಮಂಡಳಿಯ ಮಹಿಳಾ ವಿಭಾಗದಲ್ಲಿ ಸುಮಿತ್ರಾ ಕರ್ಕೇರರನ್ನು ಕಾರ್ಯಧ್ಯಕ್ಷೆ ಯಾಗಿ, ನಿರಂಜನಿ ಪೂಜಾರಿ ಮತ್ತು ಶಕುಂತಲಾ ಪೂಜಾರಿಯವರನ್ನು ಉಪ ಕಾರ್ಯಧ್ಯಕ್ಷರನ್ನಾಗಿ ಮತ್ತು ಕಾರ್ಯಧರ್ಶಿಯಾಗಿ ಕಲಾ ಕೋಟ್ಯಾನ್ ಹಾಗೂ ವಿಶಾಲಾಕ್ಷಿ ಮೂಲ್ಕಿ ಯಾವರನ್ನು ನೇಮಕ ಮಾಡಲಾಗಿದೆ.

ಯುವ ಸಂಘಟನೆಗೆ ಒತ್ತು ನೀಡಿ ಯುವ ವಿಭಾಗದಲ್ಲಿ ಗಣೇಶ್ ಬಂಗೇರ, ತೇಜಸ್ ಪೂಜಾರಿ, ಸುರೇಶ್ ಪೂಜಾರಿ, ದಯಾನಂದ್ ಕೋಟ್ಯಾನ್, ಪ್ರದೀಪ್ ಪೂಜಾರಿ, ಶಿವರಾಮ್ ಪೂಜಾರಿ, ನವ್ಯ ಪೂಜಾರಿ, ಸುರೇಶ್ ಪೂಜಾರಿ, ಕೇಶವ್ ಪೂಜಾರಿ, ಸಾನ್ವಿ ಸುವರ್ಣ, ಪ್ರಾಚಿ ಪೂಜಾರಿ, ಸಾತ್ವಿಕ್ ಸುವರ್ಣ, ಖುಷಿ ಪೂಜಾರಿ, ಪ್ರೀತೇಶ್ ಪೂಜಾರಿ, ವಿದ್ಯಾ ಪೂಜಾರಿ, ರಕ್ಷಿತಾ ಬಂಗೇರ, ಸೃಜನ್ ಪೂಜಾರಿ, ಸುರತಾನ್ ಪೂಜಾರಿ, ರಿಚಾಲ್ ಪೂಜಾರಿ ಇವರುಗಳನ್ನು ಆಯ್ಕೆ ಮಾಡಲಾಗಿದೆ.

ಮೀರಾ ಭಾಯಂದರ್ ಪರಿಸರದ ನೂರಕ್ಕೂ ಮಿಕ್ಕಿ ಬಾಂಧವರರು ಪಾಲ್ಗೊಂಡು ಶುಭ ಹಾರೈಸಿ ಮಂಡಳಿಯ ಬೆಳವಣಿಗೆಗೆ ದುಡಿದು ಒಟ್ಟಾಗಿ ಮುಂದಡಿ ಇಡೋಣವೆಂದು ಈ ಸಂದರ್ಭದಲ್ಲಿ ಒಮ್ಮನಸ್ಸಿನಿಂದ ಘೋಷಿಸಲಾಯಿತು.

B. Dinesh Kulal
Mob.: 9821868674



Related posts

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ ಸಾಧಕರಿಗೆ ಸನ್ಮಾನ, ನೃತ್ಯ ವೈಭವ, ನಾಟಕ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬೈ ಜೋಗೇಶ್ವರಿ ಸ್ಥಳೀಯ ಕಚೇರಿ ವತಿಯಿಂದ ಶ್ರೀ ಶನೇಶ್ವರ ಗ್ರಂಥ ಪಾರಾಯಣ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶ್ರೇಯಾ ಯಾದವ್ ದೇವಾಡಿಗ ಗೆ ಶೇ.90 ಅಂಕ.

Mumbai News Desk

ಪೋರ್ಟ್ ಸೆಂಟ್ರಲ್ ಹೋಟೆಲ್ ನ ಆಯೋಜನೆಯಲ್ಲಿ ಗಣೇಶ್ ಉತ್ಸವ ಸಂಭ್ರಮ.

Mumbai News Desk

ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮನೆ-ಮನೆಯಲ್ಲಿ ಭಜನಾ ಕಾರ್ಯಕ್ರಮ

Mumbai News Desk

ಛಾಯಾಕಿರಣ ಮಾಸಪತ್ರಿಕೆಯ ದಶಮಾನೋತ್ಸವ ಸಂಭ್ರಮದ ಸಮಾರೋಪ, ಸಾಹಿತ್ಯ ಪ್ರಶಸ್ತಿ, ಸನ್ಮಾನ

Mumbai News Desk