32 C
Mumbai
March 7, 2026
Mumbai News Kannada
ಮುಂಬಯಿ

ಬಿಲ್ಲವ ಸೇವಾ ಸಂಘ ಕುಂದಾಪುರ- ಮುಂಬಯಿ: ಸಂಘದ ಗೌ.ಅಧ್ಯಕ್ಷ ಸುರೇಶ್ ಎಸ್ ಪೂಜಾರಿ ಪಡುಕೋಣೆಯವರಿಗೆ ನುಡಿ ನಮನ





 

ಭಗವಂತ ಪುನರ್ಜನ್ಮ ನೀಡಿದರೆ ಸುರೇಶ್ ಪೂಜಾರಿ ಇನ್ನೊಮ್ಮೆ ಕುಂದಾಪುರ ಬಿಲ್ಲವ ಸಮಾಜದಲ್ಲಿ ಹುಟ್ಟಿ ಬರಲಿ — ಸಿ.ಎ.ಪೂಜಾರಿ

ಚಿತ್ರ ವರದಿ ರವಿ. ಬಿ. ಅಂಚನ್ ಪಡುಬಿದ್ರಿ

ಮುಂಬಯಿ ಜೂ 23:  ಸುಮಾರು 70 ವರ್ಷದ ಹಿಂದೆ ಮಹಾನಗರಿ ಮುಂಬಯಿಗೆ ಅಗಮಿಸಿ ತನ್ನ ಬದುಕನ್ನು ಕಟ್ಟುವುದರ ಜೊತೆಗೆ ಇತರರ ಬದುಕನ್ನು ಕಟ್ಟಿ, ಹೋಟೆಲ್ ಉದ್ಯಮದ ಫಾಸ್ಟ್ ಫುಡ್ ಪಿತ ಮಾಹರಾಗಿ ಮೆರೆದು ಜಾತ್ಯತೀತರಾಗಿ ಇನ್ನೊಬ್ಬರನ್ನು ಬೆಳೆಯಿಸಿದ ಮಹಾನ್ ಚೇತನ, ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂಲ ಮಂತ್ರವನ್ನು ಬದುಕಿನಲ್ಲಿ ಅಳವಡಿಸಿ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಸಂಘಕ್ಕೆ ಅದಾರ ಸ್ಥಂಭವಾಗಿ ನಿಂತು ಸಂಘಕ್ಕೆ ಮರು ಜೀವ ಕೊಟ್ಟ ಬಿಲ್ಲವ ಸಮಾಜ ರತ್ನ,  ಅಜಾತ ಶತ್ರು ಶ್ರೀ ಸುರೇಶ್ ಪೂಜಾರಿಯನ್ನು ನಾವು ಕಳೆದು ಕೊಂಡಿದ್ದೇವೆ.ಇಂದು ದಕ್ಷಿಣಾಯನದ ಪ್ರಥಮ ದಿನ ತವರು ಮನೆಯ ನಾವೆಲ್ಲರೂ ಸೇರಿ ಶ್ರದ್ಧಾಂಜಲಿ ನೀಡಿದ್ದೇವೆ, ಭಗವಂತನು ಸುರೇಶ್ ಪೂಜಾರಿಗೆ ಪುನರ್ಜನ್ಮ ನೀಡಿದರೆ ಅವರು ಇನ್ನೊಮ್ಮೆ ಕುಂದಾಪುರದ ಬಿಲ್ಲವ ಸಮಾಜದಲ್ಲಿ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ, ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ- ಮುಂಬಯಿ ಇದರ ಅಧ್ಯಕ್ಷರಾದ ಸಿ.ಎ. ಪೂಜಾರಿ ನುಡಿದರು.
ಅವರು ಜೂನ್. 22 ರ ಭಾನುವಾರ ಅಪರಾಹ್ನ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಬಿಲ್ಕವ ಸೇವಾ ಸಂಘ ಕುಂದಾಪುರ- ಮುಂಬಯಿ ಇದರ ಗೌ.ಅಧ್ಯಕ್ಷ ಸುರೇಶ್ ಪೂಜಾರಿ ಪಡುಕೋಣೆ ಇವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡುತ್ತಿದ್ದರು.


   ಬಿಲ್ಲವ ಛೇಂಬರ್ ಅಫ್ ಕಾಮರ್ಸ್ ಇಂಡಸ್ಟ್ರೀಸ್ ಇದರ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಮಾತನಾಡುತ್ತಾ ನನ್ನ ಮತ್ತು ಸುರೇಶ್ ಪೂಜಾರಿಯವರ ಪರಿಚಯ 1993 ರಿಂದ ಕುಂದಾಪುರ ಬಿಲ್ಲವ ಸಂಘದಲ್ಲಿ ಭಿನ್ನಾಭಿಪ್ರಾಯ ಹೊರಹೊಮ್ಮಿದಾಗ ಅದನ್ನು ಸರಿ ಪಡಿಸಲು ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸುರೇಶ ಪೂಜಾರಿ ಸಮಾಜದ ಅಭಿವೃದ್ಧಿಯ ಬಗ್ಗೆ ಚಿಂತಿತರಾಗಿದ್ದರು, ಕುಂದಾಪುರ ಸಂಘದಲ್ಲಿ 12 ವರ್ಷ ಸೇವೆ ಮಾಡುವ ಅವಕಾಶವನ್ನು ನನಗೆ ಕಲ್ಪಿಸಿ ಸಂಘವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಅವಕಾಶವನ್ನು ಕಲ್ಪಿಸಿದ್ದಾರೆ, ಸಂಘ, ಸಂಸ್ಥೆ, ದೇವಸ್ಥಾನ, ದೈವಸ್ಥಾನ, ಗರಡಿಗಳ ಅಭಿವೃದ್ಧಿಗೆ ಸಿಂಹಪಾಲು ಸಹಾಯ ನೀಡಿದವರು ಸುರೇಶ್ ಪೂಜಾರಿ, ಅಡು ಮುಟ್ಟದ ಸೊಪ್ಪಿಲ್ಲ ಕುಂದಾಪುರದಲ್ಲಿ ಸುರೇಶ್ ಪೂಜಾರಿಯವರಿಂದ ಸಹಾಯ ಹಸ್ತ ಪಡೆಯದ  ಸಂಘ- ಸಂಸ್ಥೆಗಳಿಲ್ಲ ಇವರನ್ನು ದಾನ ಶೂರ ಕರ್ಣ ಎಂದರೂ ತಪ್ಪಾಗಲಾರದು ಭಾರತ್ ಬ್ಯಾಂಕ್ ನಿರ್ದೇಶಕರಾಗಿ, ಜಾಗೃತಿ ಬಳಗದ ಅದ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಮುಂಬಯಿ, ಬೆಂಗಳೂರು, ಚೆನ್ನಯಿ, ದುಬಾಯಿಯಲ್ಲಿ ಫಾಸ್ಟ್ ಫುಡ್ ಪರಿಚಯಿಸಿದ ಪಿತಾಮಹ, ವಿಶ್ವದಲ್ಲಿ ಸಾಗರ ಹೋಟೆಲ್ ಪರಿಚಯಿಸಲು ಪ್ರೇರಾಣಾ ಕರ್ತರು ಸುರೇಶ್ ಪೂಜಾರಿ, ಅವರ ಅದರ್ಶಗಳನ್ನು ನಾವು ಮೈಗೂಡಿಸಿಕೊಳ್ಲೊಣಾ ಎಂದರು.


ನಗರದ ಹಿರಿಯ ಸಾಹಿತಿ ಬಾಬು ಶಿವ ಪೂಜಾರಿ ಮಾತನಾಡುತ್ತಾ ಸುರೇಶ್ ಪೂಜಾರಿಯವರ ಜೀವನ ಗಾಥೆ ಬಹಳ ವಿಶೇಷವಾದುದು, ಅಪರೂಪದ ವ್ಯಕ್ತಿತ್ವ, ಶಿಸ್ತು ಬದ್ಧ ಜೀವನ ನಡೆಸಿದವರು, ನಾನು 55 ವರ್ಷ ಸುರೇಶ್ ಪೂಜಾರಿಯವರ ಮಾರ್ಗದರ್ಶನದಲ್ಲಿ ಬದುಕನ್ನು ಕಳೆದವ ನನ್ನನ್ನು ಈ ಮಟ್ಟಿಗೆ ಬೆಳೆಸಿದವರು ಸುರೇಶ್ ಪೂಜಾರಿ 1970 ರಲ್ಲಿ ಸುರೇಶ್ ಪೂಜಾರಿಯವರ ಹೋಟೆಲ್ ಉದ್ಘಾಟನೆಗೆ ಶಿವಸೇನಾ ಪ್ರಮುಖ್ ಬಾಳ ಸಾಹೇಬ್ ಠಾಕ್ರೆ ಬಂದು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಫೋಟೋ ನೀಡಿದ್ದಾರೆ. ನಾರಾಯಣ ಗುರುಗಳ ತತ್ವದಂತೆ  ಸಂಘಟಣೆಗಳನ್ನು ಬಲಿಷ್ಠ ಗೊಳಿಸಲು ಸಹಾಯ ನೀಡುತ್ತಿದ್ದರು,   ಸುಮಾರು 50 ವರ್ಷದ ಹಿಂದೆ ಅರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಔಷಧ ನೀಡುವ ಸಲುವಾಗಿ ಅಸ್ಪತ್ರೆ ಮಾಡು ಯೋಜನೆ ಅವರಲ್ಲಿತ್ತು ಕಾರಣಾಂತರಗಳಿಂದ   ಅ ಅಸೆ ಈಡೇರಲಿಲ್ಲ, ಇಂತಹ ವ್ಯಕ್ತಿತ್ವದೊಂದಿಗೆ ಬಾಳಿದ ನಾವು ಧನ್ಯರು, ಒರ್ವ ವ್ಯಕ್ತಿಗೆ ನಾಲ್ಕು ಬಾರಿ ಶ್ರದ್ಧಾಂಜಲಿ ಸಭೆ ನಡೆದಿದ್ದರೆ ಅದು ಅಜಾತ ಶತ್ರು ಸುರೇಶ್ ಪೂಜಾರಿಗೆ ಮಾತ್ರ ಎಂದರು.
ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ಪೂಜಾರಿ ಮಾತನಾಡುತ್ತಾ ಸುರೇಶ್ ಪೂಜಾರಿ ನಿಷ್ಕಲ್ಮಶ ಮನಸ್ಸಿನ ಸಮಾಜದ ಅಭಿವೃದ್ಧಿಯ ಚಿಂತಕ, ಇತರ ಸಮಾಜ ಬಾಂಧವರನ್ನು ಸಂಘಟಣೆಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅನೇಕ ಕುಟುಂಬಗಳ ಕಲಹಗಳನ್ನು ನ್ಯಾಯ ಬದ್ಧವಾಗಿ ಪರಿಹರಿಸುವ ಕಲೆ ಅವರಲ್ಲಿತ್ತು ನಮ್ಮ ಸಂಘದ ಅಭಿವೃದ್ಧಿಯ ಹರಿಕಾರ ಸಂಘಟಣೆಯನ್ನು ಬಲಿಷ್ಠ ಗೊಳಿಸುವ ಅವರ ಕನಸ್ಸನ್ನು ನನಸ್ಸನ್ನಾಗಿಸೋಣಾ ಎಂದರು.
ನಾಗೇಶ್ ಬಿಲ್ಲವ ಮಾತನಾಡುತ್ತಾ ಸಮಾಜದ ಅಶಕ್ತರು ಉತ್ತಮ ರೀತಿಯಲ್ಲಿ ಮಂಗಳ ಕಾರ್ಯ ಮಾಡ ಬೇಕೆನ್ನುವ ಉದ್ಧೇಶದಿಂದ ಕಲ್ಯಾಣ ಮಂಟಪ ಕಟ್ಟಿಸಿ, ಮಕ್ಕಳ ವಿದ್ಯಾರ್ಜನೆಗೆ ವಿದ್ಯಾರ್ಥಿ ವೇತನವನ್ನು ನೀಡಿ ಸಹಕರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಸಾವಿರಾರು ಜನರಿಗೆ ಉದ್ಯೋಗ ದಾತರಾಗಿ, ಅನ್ನದಾತರಾಗಿ  ಕೊಡುಗೈ ದಾನಿಯಾಗಿ , ನಿಸ್ವಾರ್ಥ ಸಮಾಜ ಸೇವಕರಾಗಿ ಮೆರೆದವರು ಸುರೇಶ್ ಪೂಜಾರಿ ಅವರ ಅಗಲುವಿಕೆ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಬಿಲ್ಲವ ಮಾತನಾಡುತ್ತಾ ಸುರೇಶ್ ಪೂಜಾರಿ ತನ್ನೊಂದಿಗೆ ಇತರರನ್ನು ಬೆಳೆಸಿ ಬಿಲ್ಲವ ಕುಲ ರತ್ನವಾಗಿ ಮೆರೆದವರು, ಬಿಲ್ಲವ ಸಮುದಾಯಕ್ಕೆ ಸಂಸ್ಕಾರಯುತವಾಗಿ ಬದುಕಲು ಕಲಿಸಿದವರು, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿ ಉದ್ಯಮುಗಳನ್ನು ಬೆಳೆಸಿದ್ದಾರೆ ಅವರ ಅಗಲುವಿಕೆ ಸಂಘಕ್ಕೆ ತುಂಬಲಾರದ ನಷ್ಠವಾಗಿದೆ ಎಂದರು.
ರಂಗ ಪೂಜಾರಿ ಮಾತನಾಡುತ್ತಾ ಸುರೇಶ್ ಪೂಜಾರಿ ಯವರೊಂದಿಗೆ ಕೆಲಸ ಮಾಡುವ ಅವಕಾಶ ನನ್ನ ಪಾಲಿಗೆ ಒದಕ್ಕಿತ್ತು ವಿದ್ಯೆಗೆ ಹೆಚ್ಚು ಒತ್ತು ನೀಡುತ್ತಿದ್ದ ಅವರು ಇತರ ಸಮಾಜ ಬಾಂಧವರೊಂದಿಗೂ ಬಾಂಧವ್ಯವನ್ನು ಬೆಳೆಸಿದವರು ಎಂದರು.
ಬಿಲ್ಲವರ ಅಸೋಸಿಯೇಷನ್ ಪುಷೊತ್ತಮ ಕೋಟ್ಯಾನ್ ಮಾತನಾಡುತ್ತಾ  ಸುರೇಶ್ ಪೂಜಾರಿ ವ್ಯಕ್ತಿಯಲ್ಲ ಅವರೊಂದು ಶಕ್ತಿ, ಸಮಾಜದ ಬಗ್ಗೆ ಬಹಳ ಕಾಳಜಿ ಅವರಲ್ಲಿತ್ತು ಬಿಲ್ಲವರು ಒರ್ವ ನಿಷ್ಠಾವಂತ ನನ್ನು ಕಳ ಕೊಂಡಿದೆ ಎಂದರು,
ಸಾಹಿತಿ ಗೋಪಾಲ ತ್ರಾಸಿ ಮಾತನಾಡುತ್ತಾ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿಪಾಲಿಸುತ್ತಾ ವಿದ್ಯೆಗೆ, ಸಂಘಟಣೆಗೆ ಸಹಕಾರ ನೀಡುವುದರೊಂದಿಗೆ ಸಮಾಜ ಬಾಂಧವರನ್ನು ಹಾಗೂ ಇತರ ಸಮಾಜವನ್ನು ಅದರದಿಂದ ಕಾಣುತಗತಿದ್ದ ಸುರೇಶ್ ಪೂಜಾರಿಯವರು, ಸುರೇಶ್ ಪೂಜಾರಿಯವರ ನಿಧನದಿಂದ ಬಿಲ್ಲವ ಸಮಾಜದ ರತ್ನ ಕಣ್ಮರೆಯಾಗಿದೆ ಎಂದರು.
ವಿದ್ಯಾಧಾಯಿನಿ ಸಭಾದ ಕಾರ್ಯದರ್ಶಿ ಕೆ.ಎಂ. ಕೋಟ್ಯಾನ್ ಮಾತನಾಡುತ್ತಾ ಸುರೇಶ್ ಪೂಜಾರಿ ಬಿಲ್ಲವ ಸಮುದಾಯವನ್ನು ಸಂಘಟಿತರನ್ನಾಗಿಸಲು ಬಹಳಷ್ಟು ಶ್ರಮ ಪಟ್ಟಿದ್ದಾರೆ  ಅದರೂ  ಬಲ್ಲವರು ಸಂಘಟಿತರಾಗಿ ಬೆಳೆಯಲಿಲ್ಲ ಸುರೇಶ್ ಪೂಜಾರಿಯವರ ತತ್ವ, ಅದರ್ಶಗಳನ್ನು ಮೈಗೂಡಿಸಿಕೊಂಡು ನಾವು ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಿದಾಗ ಸುರೇಶ್ ಪೂಜಾರಿಗೆ ನೆಮ್ಮದಿ ಸಿಗ ಬಹುದು ಎಂದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಮಾಜಿ ಅದ್ಯಕ್ಷ ಮಹಾಬಲ ಕುಂದರ್ ಮಾತನಾಡುತ್ತಾ ಸುರೇಶ ಪೂಜಾರಿ ಕೇವಲ ಬಿಲ್ಲವ ಸಮಾಜದ ಹರಿಕಾರರು ಅದರೊಂದಿಗೆ ಕುಂದಾಪುರದ ಎಲ್ಲಾ ಸಮಾಜಕ್ಕೆ ಅದರ್ಶ ಪ್ರಾಯರು ಮೊಗವೀರ ಸಂಘದ ಮಹಾದಾನಿ ಅವರ ಹೆಸರಿನಲ್ಲಿ ನಮ್ಮ ಸಂಘದಲ್ಲಿ ಸಭಾಗೃಹವಿತ್ತು  ಅಂದು ಅವರು ಕೊಟ್ಟ ಎಳು ಲಕ್ಷ ರೂಪಾಯಿ ಇಂದು ಅದರ ಮೊತ್ತ ಕೋಟಿಗಿಂತಲೂ ಹೆಚ್ಚು ಪಡುಕೋಣೆ ಊರಿಗೆ ಸುರೇಶ್ ಪೂಜಾರಿಯವರಿಂದ ಹೆಸರು ಬಂದಿದೆ ಎಂದರೂ ತಪ್ಪಾಗಲಾರದು, ಇಂತಹ ಮಹಾ ದಾನಿ ಇಂದು ಕುಂದಾಪುರ ದಿಂದ ಕಣ್ಮರೆಯಾಗಿದ್ದಾರೆ ಎಂದರು.
  ದೇವಾಡಿಗ ಸಂಘದ ಮಂಜು ದೇವಾಡಿಗ ಮಾತನಾಡುತ್ತಾ ಅರ್ಥಪೂರ್ಣ ಸಾರ್ಥಕ ಬಾಳು ಬಾಳಿದ ಸುರೇಶ್ ಪೂಜಾರಿ ತನ್ನ ಸಮಾಜದೊಂದಿಗೆ ಇತರ ಸಮಾಜವನ್ನು ಬೆಳೆಸಿದವರು, ಇಂತಹ ಮಹಾನ್ ವ್ಯಕ್ತಿನ್ನು ನಾವು ಕಳಕೊಂಡಿದ್ದೇವೆ ಎಂದರು.
  ಮೊಗವೀರ ಮಹಾಜನ  ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷ ಎಂ.ವಿ. ಹೊಳಮಗ್ಗಿ ಮಾತನಾಡುತ್ತಾ ಸುರೇಶ್ ಪೂಜಾರಿ ಹೃದಯ ಶ್ರೀಮಂತರು ಬಿಲ್ಲವ ಸಮಾಜದೊಂದಿಗೆ ಇತರ ಸಮಾಜವನ್ನು ಬೆಳೆಸಿದ ಮಹಾನ್ ಚೇತನ ಬಗ್ವಾಡಿ ಸಂಘಕ್ಕೆ ಅಂದಿನ ದಿನಗಳಲ್ಲಿ ಎಂಟು ಲಕ್ಷ ರೂಪಾಯಿ ನೀಡಿದ ಮಹಾನ್ ವ್ಯಕ್ತಿ ಸುರೇಶ್ ಪೂಜಾರಿ, ಇಂತಹ ವ್ಯಕ್ತಿ ಇಂದು ನಮ್ಮೊಂದಿಗಿಲ್ಲ ಎಂದರು.
ಡಾ.  ಶೇಖರ ಹೆಮ್ಮಾಡಿ, ಗುಲಾಬಿ ಬಾಬು ಪೂಜಾರಿ, ಬೇಬಿ ರಂಗ ಪೂಜಾರಿ, ಸುಶೀಲಾ ಸುರೇಶ್ ಪೂಜಾರಿ ಸಂದರ್ಭೋಚಿತವಾಗಿ ಮಾತನಾಡಿದರು
ಸುರೇಶ್ ಪೂಜಾರಿ ಪುತ್ರರಾದ ಭರತ್ ಎಸ್. ಪೂಜಾರಿ , ಸಿದ್ಧಾರ್ಥ ಎಸ್. ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಇದರ ಅಧ್ಯಕ್ಷ ಹರೀಶ್ ಅಮೀನ್, ಕಾರ್ಯದರ್ಶಿ ಹರೀಶ್ ಸಾಲ್ಯಾನ್, ಹಿರಿಯ ಸದಸ್ಯ ಎ.ಟಿ.ಕೋಡಿ, ಉದ್ಯಮಿ ಎನ್.ಕೆ. ಬಿಲ್ಲವ, ರಘು ಪೂಜಾರಿ,  ಗೋಪಾಲ ಪೂಜಾರಿ, ಸುರೇಶ್ ಪೂಜಾರಿ ಬದ್ಲಾಪುರ, ಎಚ್.ಕೆ. ಸುಧಾಕರ ಪೂಜಾರಿ, ವಿಶ್ವನಾಥ ಪೂಜಾರಿ ಅರುಣಾ ಟೈಲರ್ ಥಾಣೆ, ಹೆರಿ ರೊಬೆಲ್ಲೊ,  ಬಿಲ್ಲವರ ಅಸೋಸಿಯೇಷನ್ ಮುಂಬಯಿ ಸದಸ್ಯರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಸದಸ್ಯರು, ದೇವಾಡಿಗ ಸಂಘ ಕುಂದಾಪುರ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು
ಇದಕ್ಕೂ ಮೊದಲು ಸಂಘದ ಸದಸ್ಯರಿಂದ ಭಜನೆ ನಡೆಯಿತು , ಸುರೇಶ್ ಪೂಜಾರಿಯವರ ಪುತ್ರರು ಮತ್ತು ಸಂಘದ ಸದಸ್ಯರು ಸುರೇಶ್ ಪೂಜಾರಿಯವರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು.
ಗೋಪಾಲ ತ್ರಾಸಿ ಕಾರ್ಯಕ್ರಮ ನಿತೂಪಿಸಿದರು ಸುಧಾಕರ ಪೂಜಾರಿ ವಂದಿಸಿದರು.



Related posts

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಅಭಿನಂದನಾ ಸಭೆ

Mumbai News Desk

ಶಿವಸೇನಾದಕ್ಷಿಣ ಭಾರತ ಘಟಕದಿಂದ ಮಾಹಿತಿ ಶಿಬಿರ.

Mumbai News Desk

ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಿಂದರಿನ ವಾರ್ಷಿಕ ಮಹಾಸಭೆ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಕಚೇರಿ, ಶಾರದಾ ಪೂಜೆ ಆಚರಣೆ.

Chandrahas

ಮುಂಬಯಿಯಲ್ಲಿ ಮೊಹಮ್ಮದ್ ಗೌಸ್‌ ನೇತೃತ್ವದ ಯಕ್ಷಗಾನ ಪ್ರವಾಸಕ್ಕೆ ಚಾಲನೆ

Mumbai News Desk

ಬಿಎಂಸಿ ಚುನಾವಣೆ 2026: ಮುಂಬೈ ಮಹಾಸಮರಕ್ಕೆ ಕ್ಷಣಗಣನೆ; ನಾಳೆ ಮತದಾನ

Mumbai News Desk