32 C
Mumbai
March 7, 2026
Mumbai News Kannada
ಮುಂಬಯಿ

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.





  ಮುಂಬಯಿ ಜೂ3.   ಅಷ್ಟ ವಿನಾಯಕ ಎಂದರೆ ಎಂಟು ಗಣೇಶ ದೇವಾಲಯಗಳ ಗುಂಪು.ಇವು ಮಹಾರಾಷ್ಟ್ರದಲ್ಲಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಅಷ್ಟವಿನಾಯಕ ದರ್ಶನ ಮಾಡಲು ಒಂದು ವಿಧಿವತ್ತಾಗಿ ಹೋಗ ಬೇಕೆಂದು ಪುರಾಣದಲ್ಲಿ ನಿರೂಪಿಸಲಾ ಗಿದೆ.ಶ್ಲೋಕದಲ್ಲಿ ಹೇಳಿರುವಂತೆ, ಮೊದಲಿಗೆ ಮೋರ್ ಗಾಂವ್, ತೇವೂರ್, ಸಿದ್ಧಟೇಕ್, ರಾಜನ್ಗಾಂವ್, ಲೆನ್ಯಾದ್ರಿ, ಓಜಾರ್, ಪಾಲಿ, ಮತ್ತು ಮಹಾಡ್ ಹೀಗೆ ಎಂಟು ಗಣಪತಿ ದೇವಸ್ಥಾನಗಳ ದರ್ಶನ ವೇ ಅಷ್ಟ ವಿನಾಯಕ ದರ್ಶನ.

ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ  ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವ ಹಾಗೂ ಸಮಿತಿ ಸದಸ್ಯೆಯರ ಸಹಕಾರದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಅಡ್ವಕೇಟ್ ಡಿ.ಕೆ.ಶೆಟ್ಟಿ ಮತ್ತು ಆಡಳಿತ ಸಮಿತಿಯ ಸಂಪೂರ್ಣ ಬೆಂಬಲದಲ್ಲಿ ಜೂನ್ 27 ರಿಂದ 29  ವರೆಗೆ ಮೂರು ದಿನಗಳ ಪ್ರವಾಸದಲ್ಲಿ 2 ಬಸ್ಸುಗಳ ವ್ಯವಸ್ಥೆ ಇದ್ದು; ಇದರಲ್ಲಿ 61 ಮಹಿಳೆಯರು ಭಾಗವಹಿ ಸಿದ್ದರು. ಎಲ್ಲಾ ಮಹಿಳೆಯರು ತುಂಬಾ ಉತ್ಸುಕತೆ, ಉಲ್ಲಾಸದಿಂದ ಪ್ರಯಾಣದ ಬಸ್ಸಿನಲ್ಲಿ ಭಜನೆ,ಕೀರ್ತನೆ ಹಾಡುಗಳನ್ನು ಹಾಡುತ್ತಾ ಆನಂದ  ನೀಡುತ್ತಾ ಪ್ರವಾಸದ ಆಯಾಸ ವನ್ನು ತಣಿಸುತ್ತಾ ಮನೋ ರಂಜನೆ ನೀಡಿದರು.

    ಮೋರ್ ಗಾಂವ್ ನಲ್ಲಿ ನೆಲೆಸಿರುವ ಶ್ರೀ ಮಯೂರೇಶ್ವರ, ತೇವೂರ್ ನ  ಶ್ರಿ ಚಿಂತಾಮಣಿ,ಸಿದ್ಧಟೇಕ್- ಶ್ರೀ ಸಿದ್ಧಿವಿನಾಯಕ,ರಾಜನ್ಗಾಂವ್- ಶ್ರೀ ಮಹಾಗಣಪತಿ,ಲೆನ್ಯಾದ್ರಿ-ಶ್ರೀ ಗಿರಿಜಾತ್ಮಕ, ಓಜಾರ್- ಶ್ರೀ ವಿಘ್ನಹರ,ಪಾಲಿ-ಶ್ರೀ ಬಳ್ಳಾ ಲೇಶ್ವರ, ಮತ್ತು ಮಹಾಡ್ ನ ಶ್ರೀ ವರದ ವಿನಾಯಕ.ಹೀಗೆ ಎಂಟು ಪುಣ್ಯ ಸ್ಥಳ ಗಳೊಂದಿಗೆ ಮಹಾರಾಷ್ಟ್ರದ ಅತ್ಯಂತ ಪ್ರಮುಖ ಹಿಂದೂ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಮಲ್ಹಾರಿ ಮಾರ್ತಾಂಡನೆಂದೇ

ಪ್ರಖ್ಯಾತ ಜೆಜೂರಿಗಡದ ಖಂಡೋಬಾ ದೇವರ ದರ್ಶನವನ್ನು ಕೂಡ ಮಾಡಿದರು.

ಖಂಡೋಬಾ ಸಕಮಭಕ್ತಿಯ ದೇವರು ಅಂದರೆ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ದೇವರು ಎಂದು ನಂಬ ಲಾಗಿದೆ. ಜೆಜುರಿಗಡದ 758 ಮೀಟರ್ ಎತ್ತರದ ಗುಡ್ಡದ ಮೇಲೆ ನೆಲೆಗೊಂಡಿರುವ ಈ ದೇವಾಲಯವು ಸುತ್ತಮುತ್ತಲಿನ ಗ್ರಾಮೀಣ ಭೂದೃಶ್ಯದ ಅತ್ಯುತ್ತಮ ನೋಟವನ್ನು ನೀಡುತ್ತದೆ. ದೇವಾಲಯವು ಮೂರು ಪ್ರವೇಶ ದ್ವಾರಗಳನ್ನು ಹೊಂದಿದ್ದು, ಭಕ್ತರು ಉತ್ತರ ದ್ವಾರದಿಂದ ಸುಮಾರು 385 ಅಸಮ ಮೆಟ್ಟಿಲುಗಳನ್ನು ಮತ್ತು 150 ‘ದೀಪಮಾಲೆಗಳನ್ನು’ಹತ್ತಬೇಕು.

ಇದೊಂದು ಅಭೂತಪೂರ್ವ ಅನುಭವ. ಕೊನೆಗೆ ಪೂಣೆಯ ದಗುಡೂ ಶೇಟ್ ಹಲುವಾಯಿ ಮಹಾಗಣ ಪತಿ ದೇವರ ದರ್ಶನ ಮಾತ್ರವಲ್ಲದೆ ಸಾಮೂಹಿಕ ಭಜನೆಯನ್ನು ಕೂಡಾ ಮಾಡುವುದ ರೊಂದಿಗೆ; ಪ್ರವಾಸವನ್ನು ಮುಗಿಸಿದರು.



Related posts

ಪೋರ್ಟ್ ಸೆಂಟ್ರಲ್ ಹೋಟೆಲ್ ನ ಆಯೋಜನೆಯಲ್ಲಿ ಗಣೇಶ್ ಉತ್ಸವ ಸಂಭ್ರಮ.

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ಸಂಭ್ರಮೊಲ್ಲಸದ ರಜತ ಮಹೋತ್ಸವ ಸಮಾರಂಭ

Mumbai News Desk

ಭಾಂಡೂಪ್ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿಯ ವತಿಯಿಂದ ನಾಗೇಶ್ ಸುವರ್ಣ ಅವರಿಗೆ ಸನ್ಮಾನ

Mumbai News Desk

ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಹಿಳಾ ವಿಭಾಗದಿಂದ” ನಾರಿ ಉತ್ಸವ “

Mumbai News Desk

ಬಂಟರ ಸಂಘ ಡೊಂಬಿವಲಿ ವತಿಯಿಂದ ನವರಾತ್ರಿ ಉತ್ಸವಕ್ಕೆ ಸಡಗರದ ‘ಹೊರೆ ಕಾಣಿಕೆ’ ಸಮರ್ಪಣೆ

Mumbai News Desk