September 6, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮೆ ಆಚರಣೆ.






ಗುರುಗಳ ತತ್ವ ಸಂದೇಶದಂತೆ ಸಮಾಜೋದ್ಧಾರ ನಮ್ಮ ಧ್ಯೇಯ ವಾಗಿರಲಿ- ಚಿತ್ರಾಪು ಕೆ.ಎಮ್.ಕೋಟ್ಯಾನ್.

ಚಿತ್ರ, ವರದಿ: ಉಮೇಶ್ ಕೆ.ಅಂಚನ್.
ಅಜ್ಞಾನದ ಅಂಧಕಾರದಿಂದ ಜ್ಞಾನದ ಪ್ರಕಾಶದೆಡೆಗೆ ಕರೆದೊಯ್ಯುವ ಗುರುಗಳನ್ನು ಭಕ್ತಿಯಿಂದ ಸ್ಮರಿಸುವ ದಿನವೇ ಗುರುಪೂರ್ಣಿಮೆ. ಸಮಾಜದಲ್ಲಿ ಅಧರ್ಮ ಹೆಚ್ಚಾದಾಗ ಅದನ್ನು ತಿದ್ದಲು ಭಗವಂತನು ಸಾದುಸಂತರ ರೂಪದಲ್ಲಿ ಜನುಮ ತಾಳಿದವರಲ್ಲಿ ನಾರಾಯಣ ಗುರುಗಳೂ ಒಬ್ಬರು. ಅವರ ಬೋಧಿಸಿದ ತತ್ವ ಹಾಗೂ ಸಿದ್ದಾಂತದ ಪ್ರಕಾರ ಅಹಂಕಾರ ಹಾಗೂ ದುಷ್ಟರ ಸಹವಾಸ ತೊರೆದು ಪ್ರಪಂಚದ ಎಲ್ಲಾ ಜೀವಿಗಳನ್ನು ಸಮಾನತೆಯ ದೃಷ್ಟಿಯಿಂದ ಕಂಡು ಒಗ್ಗಟ್ಟಿನಿಂದ ಬಾಳುವುದು. ವಿಧ್ಯೆ ಕಲಿತು ಅವಿದ್ಯಾವಂತರಂತೆ ವರ್ತಿಸಿ ಗುರುತತ್ವಕ್ಕೆ ವಿರೋಧವಾಗಿ ಸಮಾಜದಲ್ಲಿ ನಟಿಸುವ ಜೀವನ ಅಲ್ಪ ಸಮಯಕ್ಕೆ ಸೀಮಿತ ಎಂಬ ಅರಿವು ಅಗತ್ಯ.ಸಮಾಜದಲ್ಲಿ ಬದಲಾವಣೆ ಆಗುವಾಗ ಭಿನ್ನಾಭಿಪ್ರಾಯ ವಾದ ವಿವಾದ ಹುಟ್ಟುವುದು ಸಹಜ. ಅದನ್ನು ಗುರುತತ್ವಾದೇಶದಂತೆ ಸಂಧಾನದ ಮೂಲಕ ಬಗೆಹರಿಸಬೇಕೇ ವಿನಹ ಅದರಲ್ಲಿ ರಾಜಕೀಯ ತಂದು ಸಮಾಜವನ್ನು ವಿಭಜಿಸುವ ಕಾಯಕ ಸರಿಯಲ್ಲ. ಸಮಾಜದ ಪ್ರಗತಿಗಾಗಿ ನಾವೆಲ್ಲ ಬಿಲ್ಲವರ ಅಸೋಸಿಯೇಶನಿನ ಸಮಾಜಪರ ಕಾರ್ಯಕ್ಕೆ ಸಹಕರಿಸೋಣ.ಇಂದು ಭಾಯಂದರ್ ಸ್ಥಳೀಯ ಸಮಿತಿಯು ಎಲ್ಲಾ ವರ್ಗದ ಗುರು ಭಕ್ತರನ್ನು ಒಗ್ಗೂಡಿಸಿ ಭಕ್ತಿಯ ವಾತಾವರಣದೊಂದಿಗೆ ಗುರುಪೂರ್ಣಿಮೆ ಉತ್ಸವವನ್ನು ಆಚರಿಸಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಾಯಂದರ್ ಸ್ಥಳೀಯ ಕಚೇರಿಯ ಮುಖ್ಯ ಸಲಹೆಗಾರ ಚಿತ್ರಾಪು ಕೆ.ಎಮ್.ಕೋಟ್ಯಾನ್ ಹೇಳಿದರು.


ಅವರು ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆಯ ಉತ್ಸವದಲ್ಲಿ ಭಾಗವಹಿಸಿ ಗುರುಪೂರ್ಣಿಮೆಯ ಮಹತ್ವದ ಕುರಿತು ಮಾತನಾಡಿದರು.
ಆರಂಭದಲ್ಲಿ ಸ್ಥಳೀಯ ಕಚೇರಿಯ ಪದಾಧಿಕಾರಿಗಳು ಅಲಂಕೃತ ಗುರು ದೇವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಸದಸ್ಯರು ಹಾಗೂ ಆಮಂತ್ರಿತ ಸಂಘಸಂಸ್ಥೆಗಳ ಸದಸ್ಯರಿಂದ ಭಜನೆ ನಡೆಯಿತು. ಭುವಾಜಿ ರಾಕೇಶ್ ಅಮೀನ್ ಅವರ ಪೌರೋಹಿತ್ಯದಲ್ಲಿ ಗುರು ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಬಾಲಕೃಷ್ಣ ಸುವರ್ಣ ಸಹಕರಿಸಿದ್ದರು. ಪ್ರಸಾದ ವಿತರಣೆ ತದನಂತರ ಅನ್ನಸಂತರ್ಪಣೆ ನಡೆಯಿತು.
ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶೇಖರ್ ರಾಮ ಪೂಜಾರಿಯವರು ದಾನಿಗಳನ್ನು ಹಾಗೂ ಪರಿಸರದ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಹಾಗೂ ಗುರು ಪೂಜೆ ನೀಡಿ ಸಹಕರಿಸಿದ ಗುರು ಭಕ್ತರನ್ನು ಪ್ರಸಾದ ನೀಡಿ ಗೌರವಿಸಿದರು.


ಕಾರ್ಯದರ್ಶಿ ಜ್ಯೋತಿ ರತ್ನಾಕರ್ ಪೂಜಾರಿಯವರು ಸರ್ವ ಗುರು ಭಕ್ತರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಸುಧಾಕರ್ ಜಿ ಪೂಜಾರಿ, ಸತೀಶ್ ಪೂಜಾರಿ,
ಸಂತೋಷ್ ಕರ್ಕೇರ
ಹರೀಶ್ ಸಾಲಿಯಾನ್
ದೀಪಕ್ ಕರ್ಕೇರ
ಜಯಶ್ರೀ ಸಂತೋಷ್ ಕರ್ಕೇರ
ನಾಗೇಶ್ ಪೂಜಾರಿ, ಅಶೋಕ್ ಟಿ.ಪೂಜಾರಿ, ರವೀಂದ್ರ ಸುವರ್ಣ, ರತ್ನಾಕರ್ ಪೂಜಾರಿ , ಸದಾನಂದ್ ಪೂಜಾರಿ.ಗಣೇಶ್ ಪೂಜಾರಿ,ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಹಾಗೂ ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.



Related posts

ಅಖಿಲ ಕರ್ನಾಟಕ ಜೈನ ಸಂಘದ ವತಿಯಿಂದ ಸಾಮೂಹಿಕ ಕರ್ಮ ದಹನ ಆರಾಧನಾ ಮಹೋತ್ಸವ

Mumbai News Desk

ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ, ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ.

Mumbai News Desk

ಪೇಜಾವರ ಮಠದಲ್ಲಿ ಮನಸೂರೆಗೊಂಡ ಪುತ್ತೂರು ನರಸಿಂಹ ನಾಯಕ್ ಭಕ್ತಿ ಸಂಗೀತ ಕಚೇರಿ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಖುಷಿ ರವಿ ಶೆಟ್ಟಿ ಗೆ ಶೇ 83 ಅಂಕ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರುಪೂರ್ಣಿಮೆ ಆಚರಣೆ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಾಮೂಹಿಕ ಗುರು ಪೂಜೆ :

Mumbai News Desk