September 6, 2026
Mumbai News Kannada
ತುಳುನಾಡು

ಮೂಲತ್ವ ಫೌಂಡೇಶನ್ ಚಾರಿಟೇಟರ್ ಟ್ರಸ್ಟ್ ಮಂಗಳೂರು: ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಆಟಿಡೊಂಜಿ ದಿನ.





ಮೂಲತ್ವ ಫೌಂಡೇಶನ್ ಚಾರಿಟೇಟರ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಆಟಿ ದೊಂಜಿ ದಿನ ಕಾರ್ಯಕ್ರಮವು ನೆರವೇರಿತು. ಸುವರ್ಣ ರೆಸಿಡೆನ್ಸಿ ತಾರೆ ತೋಟ ಮಂಗಳೂರು ಇಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ಇವರು ಉದ್ಘಾಟಿಸಿ ಆಟಿದ ದಿನದ ವೈಶಿಷ್ಟತೆಯನ್ನು ತಿಳಿಸಿದರು, ಹಾಗೂ ಟ್ರಸ್ಟಿನ ಕಾರ್ಯ ವೈಕ್ಯರಿಯನ್ನು ಮೆಚ್ಚಿದರು.


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ,ದೈಜಿವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಕೇಶವ ಮರೋಲಿ, ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಜಯಕುಮಾರ್, ಸುವರ್ಣ ರೆಸಿಡೆನ್ಸಿಯ ಅಧ್ಯಕ್ಷರಾದ ಯಡಿಪಡಿತಾಯ, ಉಪಸ್ಥಿದ್ದರು.
ಉಪಸ್ಥಿತರಿದ್ದ ಎಲ್ಲಾ ಅತಿಥಿಗಳಿಗೆ ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಲಾಯಿತು. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಲಕ್ಷ್ಮೀಶ ಕೋಟಿಯನ್, ಶೈನಿ ಮೂಲತ್ವ, ಅಕ್ಷತ ಕದ್ರಿ , ಟ್ರಸ್ಟಿನ ಎಲ್ಲಾ ಸದಸ್ಯರು, ಪರಿಸರದವರು ಭಾಗವಹಿಸಿದರು.ಕೊನೆಗೆ ಟ್ರಸ್ಟಿನ ಸದಸ್ಯರು ಆಟಿದ ದಿನದ ಸಾಂಪ್ರದಾಯಿಕ ಶೈಲಿಯ ಊಟ ಉಪಚಾರಗಳನ್ನು ಮಾಡಿ ಬಡಿಸಿದರು.
ಶೈನಿ ಮೂಲತ್ವ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು, ಮಮತಾ ಕಾರ್ಯಕ್ರಮ ನಿರೂಪಿಸಿದರೆ, ಜಯಶ್ರೀ ವಂದಿಸಿದರು.



Related posts

ಗುರುಪುರ ಬಂಟರ ಮಾತೃ ಸಂಘ (ರಿ.)13ನೇ ವಾರ್ಷಿಕ ಸಮಾವೇಶ ಹಾಗೂ ನೃತ್ಯ ಸಂಗಮ-2026

Mumbai News Desk

ಬಜ್ಪೆಯಲ್ಲಿ ಮುಂಬೈಯ ಪುರುಷೋತ್ತಮ ಬೆಲ್ಚಡ ದಂಪತಿಗಳಿಂದ ಹರಕೆಯ ಯಕ್ಷಗಾನ ಸೇವೆ: ಕಲಾವಿದರುಗಳಾದ ಅರವಿಂದ ಬೋಳಾರ್ ಹಾಗೂ ಮನ್ವಿತ್ ನಿಡ್ಡೋಡಿ ಅವರಿಗೆ ಸನ್ಮಾನ

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk

ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಚಾಲನೆ. ಕಂಬಳ ತುಳುನಾಡಿನ ಸಂಸ್ಕೃತಿಯ ಪ್ರತೀಕ:ಐಕಳ ಹರೀಶ್ ಶೆಟ್ಟಿ

Mumbai News Desk

ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ) ತೊಕ್ಕೊಟ್ಟು ಅಭಿನಂದನೆ ಬೊಕ್ಕ ಗುರು ಪೂರ್ಣಿಮೆ ಲೇಸ್

Mumbai News Desk

ಶ್ರೀ ಬಪ್ಪನಾಡು ಸೌಹರ್ದ ಸಹಕಾರಿ ಸಂಘ(ನಿ)ಇದರ ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk