September 6, 2026
Mumbai News Kannada
ಮುಂಬಯಿ

ವಸಾಯಿ ಕರ್ನಾಟಕ ಸಂಘ : ಮಹಿಳಾ ವಿಭಾಗದ ವತಿಯಿಂದ ಆಷಾಢದ ನೆನಪುಗಳು ,





 ವಸಾಯಿ ಆ .6. ಪರಿಸರದ ತುಳು ಕನ್ನಡಿಗರು ಹಿರಿಯ ಕನ್ನಡ ಸಂಘಗಟನೆಗಳಲ್ಲಿ ಒಂದಾದ ವಸಾಯಿ ಕರ್ನಾಟಕ ಸಂಘ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ” ಆಷಾಡದ ನೆನಪುಗಳು” ಕಾರ್ಯಕ್ರಮ ಜುಲೈ 30ರಂದು ವಸಾಯಿ ಪಶ್ಚಿಮ ಆನಂದ್ ನಗರದ  ವಸಾಯಿ ತಾಲೂಕ ಮೊಗವೀರ ಸಂಘದ ಸಭಾಗ್ರಹದಲ್ಲಿ ಸಂಘದ ಅಧ್ಯಕ್ಷರಾದ ದೇವೇಂದ್ರ ಬುನ್ನನ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಅರ್ಥಪೂರ್ಣವಾಗಿ ಜರಗಿತು.

 ಮಹಿಳಾ ವಿಭಾಗದ ಸದಸ್ಯೆ ಮೋಹಿನಿ ಮಲ್ಪೆ ಅವರ ಪ್ರಾರ್ಥನೆಯೊಂದಿಗೆ ಸಂಘದ ಪದಾಧಿಕಾರಿಗಳ ದೀಪ ಪ್ರಜ್ವಲನೆಯೊಂದಿಗೆ  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ಉಷಾ ಶ್ರೀಧರ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು.

 ಈ ಸಂದರ್ಭದಲ್ಲಿ ವಸಾಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ, ಉಪಾಧ್ಯಕ್ಷರಾದ ಕರ್ನೂರು ಶಂಕರ್ ಆಳ್ವ, ಸಲಹಾ ಸಮಿತಿಯ ಅಧ್ಯಕ್ಷ ಪಾಂಡು ಶೆಟ್ಟಿ, ಉಪಾಧ್ಯಕ್ಷ ಒ ಪಿ ಪೂಜಾರಿ ಹಾಗೂ ಸಭಾಧ್ಯಕ್ಷರಾದ ದೇವೇಂದ್ರ ಬುನ್ನಾನ್,  ಆಷಾಢದ ನೆನಪುಗಳು ಮತ್ತು ತುಳುನಾಡ ಅಂದಿನ ಕಾಲದ ಅನುಭವವನ್ನು ಸವಿಸ್ತರವಾಗಿ ಹಂಚಿಕೊಳ್ಳುತ್ತಾ, ಇಂದು ಆ ಪರಿಸ್ಥಿತಿ ಇಲ್ಲ ಆದರೂ ನಮ್ಮವರ ಕಷ್ಟದ ದಿನಗಳ ಅನುಭವವನ್ನು ನಾವು ನಮ್ಮ ಯುವ ಪೀಳಿಗೆಗೆ ನಿಜಾರ್ಥವನ್ನು ತಿಳಿಸಬೇಕು ಎಂದು ಹೇಳಿದರು.

 ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಮಹಿಳಾ ಸದಸ್ಯರಿಂದ” ಆಟಿದ ಅಜಕೆ” ಗಾಯನ ಹಾಗೂ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಮಕ್ಕಳು ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದರು. 

ಉದಯ ಶೆಟ್ಟಿ ಪಂಜಿಮಾರು ಅವರ ರಚನೆಯ ತುಳುವರೆ ಆಟಿ  ಕವನವನ್ನು ಸುರೇಖಾ ಶೆಟ್ಟಿ ವಾಚಿಸಿದರು.

 ವಸಾಯಿ ಕರ್ನಾಟಕ ಸಂಘದ ಕಾರ್ಯದರ್ಶಿ ರವೀಂದ್ರ ಕೆ ಶೆಟ್ಟಿ , ಕೋಶಾಧಿಕಾರಿ ವಿಜಯ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಯಶೋಧರ ಕೋಟ್ಯಾನ್, ಜತೆ ಕಾರ್ಯದರ್ಶಿ ಸಿಎ ವಿಜಯ ಕುಂದರ್, ಜತೆ  ಕೋಶಾಧಿಕಾರಿ ಹರಿಪ್ರಸಾದ್ ಶೆಟ್ಟಿ, ನೋಂದಣಿ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಶೆಟ್ಟಿ ಮತ್ತು ಸದಸ್ಯರಾದ ಕರುಣಾಕರ್ ಅಮೀನ್,  ಮೋಹನ್ ಪುತ್ರನ್,  ಗಣೇಶ್ ಸುವರ್ಣ,  ನವೀನ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ,  ಭಾರತಿ ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ ಮತ್ತು  ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

 ಮಹಿಳಾ ವಿಭಾಗದ ಸುರೇಖಾ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ವಿಭಾಗದ ಸದಸ್ಯರು ಮನೆಯಲ್ಲಿ ತಯಾರಿಸಿದ ಬಗೆ- ಬಗೆಯ ಆಷಾಡದ ವಿಶೇಷ ತಿಂಡಿ ತಿನಸುಗಳಿಂದ ಕೂಡಿದ ಪ್ರೀತಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

B. Dinesh Kulal

Mob.: 9821868674

Show quoted text



Related posts

‘ಡೊಂಬಿವಲಿಯ ಓಂಕಾರ ಕೇಂಬ್ರಿಜ್ ಇಂಟರ್ ನ್ಯಾಸನಲ್ ಶಾಲೆಗೆ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಭಾರತದಲ್ಲಿ OCIS ಮೊದಲ ಸ್ಥಾನ’

Mumbai News Desk

ಶಹಾಡ್‌ ಶ್ರೀ ಮೂಕಾಂಬಿಕಾ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನ

Mumbai News Desk

ಮೂರನೇ ದಿನವೇ ಗರೀಬ್ ನಗರದ ಶೇ. 90 ರಷ್ಟು ಅತಿಕ್ರಮಣಗಳನ್ನು ತೆರವುಗೊಳಿಸಿದ ಪಶ್ಚಿಮ ರೈಲ್ವೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನನ್ಯಾ ನವೀನ್ ಬಂಗೇರ ಗೆ ಶೇ 88 ಅಂಕ.

Mumbai News Desk

ಏ.23 – 25: ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬೈ ಬೊರಿವಲಿ- ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನ ಕುಂಕುಮ

Mumbai News Desk