July 23, 2026
Mumbai News Kannada
ತುಳುನಾಡು

ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ : ಕಾಪು ಬಂಟರ ಸಂಘದಿಂದ ಸನ್ಮಾನ







ಕಳೆದ 33 ವರ್ಷಗಳ ಕಾಲ ಕಾಪು ಬಂಟರ ಸಂಘದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ ಕೊಡುಗೈ ದಾನಿ, ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್ ಶೆಟ್ಟಿ ಮತ್ತವರ ಪತ್ನಿ ಅನುರಾಧ ಮನೋಹರ್ ಶೆಟ್ಟಿ ಇವರನ್ನು ಕಾಪು ಬಂಟರ ಸಂಘದ ಮಹಾಸಭೆ ಮತ್ತು “ಆಟಿಯ ನೆನಪು” ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.
ಉದ್ಯಮಿ, ಅನಿವಾಸಿ ಭಾರತೀಯ ಮಲ್ಲಾರು ಶಶಿಧರ ಕೆ. ಶೆಟ್ಟಿ ಅಭಿನಂದಿಸುತ್ತಾ, ಸುಧೀರ್ಘಕಾಲದ ಭಾಗ್ಯ ಅವರಿಗೆ ದೊರೆತಿದೆ, ಇನ್ನೂ ಬಹಳಷ್ಟು ಕಾಲ ಈ ಅತ್ಯಂತ ಪುಣ್ಯದ ಕಾಯಕ ಮಾಡುವ ಅವಕಾಶ ದೇವರು ಒದಗಿಸಲಿ ಎಂದರು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಕೃಷಿ ಸೇವಾ ಕ್ಷೇತ್ರದಲ್ಲಿ ಅವರ ಸೇವೆ ಅನುಪಮ ಎಂಬ ನೆಲೆಯಲ್ಲಿ ಗುರುತಿಸುತ್ತಿದ್ದೇವೆ ಎಂದು ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಅವರು ಪ್ರಸ್ತಾವನೆ ಮಾಡಿದರು.
ಈ ಸಂದರ್ಭದಲ್ಲಿ ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಬಂಟ ಸಮಾಜ ಬಾಂದವರು ಉಪಸ್ಥಿತರಿದ್ದರು.



Related posts

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ – ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ತುರ್ತು ಸಭೆ

Mumbai News Desk

ವಿಜ್ಞಾನದಲ್ಲಿ ಪ್ರಯೋಗಶೀಲತೆ ಅತಿ ಮುಖ್ಯ: ಸುರೇಶ್ ಶೆಟ್ಟಿ ನಾಡಿಯಾಳು ಗುತ್ತು

Mumbai News Desk

ಬಿಲ್ಲವ, ಬಂಟರ ವಿರುದ್ಧ ಅವಹೇಳನಕಾರಿ ಹೇಳಿಕೆ: ಅನಿತಾ ಕಾಸರಗೋಡು ವಿರುದ್ಧ ಕ್ರಮಕ್ಕೆ ದೂರು

Mumbai News Desk

ಶ್ರೀ ಕ್ಷೇತ್ರ ದ್ವಾರಕಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ 108 ಕ್ಷೇತ್ರ ಪ್ರದಕ್ಷಿಣೆಗೆ ಚಾಲನೆ.

Mumbai News Desk

ಉಡುಪಿ ಉಚ್ಚಿಲ ದಸರಾ-2025: ಮೊಗವೀರರ ಶಕ್ತಿ ಕೇಂದ್ರದಲ್ಲಿ ವೈಭವದ ‘ದಸರಾ ಸಮಾಪನ’

Mumbai News Desk

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk