July 23, 2026
Mumbai News Kannada
ಮುಂಬಯಿ

ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ – ಮಹಿಳಾ ವಿಭಾಗದವತಿಯಿಂದ ಜರಗಿದ ಶ್ರಾವಣ ಸಂಭ್ರಮ







ಮುಂಬೈಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ರಾಮರಾಜ್ಯ ಕ್ಷತ್ರಿಯ ಸೇವಾ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರಾವಣ ಸಂಭ್ರಮ – 2025 ಕಾರ್ಯಕ್ರಮ ಆಗಸ್ಟ್ 3ರಂದು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ವಿಜೃಂಭಣೆಯಿಂದ ಜರಗಿತು.


ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿಯ ಮಹಿಳಾ ವಿಭಾಗದ ಸದಸ್ಯರು ಹಾಗೂ ಸಂಘದ ಪ್ರಧಾನ ಕಚೇರಿಯ ಸಮಿತಿಯ ಸದಸ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆರತಿ ಎನ್ ರಾವ್ ಮತ್ತು ಆರ್ ಕೆ ಎಸ್ ಎಸ್ ಮುಂಬೈ ಅಧ್ಯಕ್ಷ ರವೀಂದ್ರನಾಥ್ ರಾವ್ ಶ್ರಾವಣ ಮಾಸದ ಪಾವಿತ್ರತೆ ಹಾಗೂ ಸಮುದಾಯದ ಏಕತೆಯ ಮಹತ್ವ ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತಿ ಉಡುಪ ಭಜನೆಗಳ ಮಹತ್ವದ ಕುರಿತು ಮಾತನಾಡಿ ಇಂದಿನ ಪೀಳಿಗೆಗೆ ಇಂಥ ಭಕ್ತಿ ಪೂರ್ವಕ ಚಿಂತನೆಗಳನ್ನು ಪರಿಚಯಿಸುವುದು ಅತ್ಯಗತ್ಯ ಎಂದರು. ಮಹಿಳಾ ಮಾಧುರ್ಯ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯರು ಕರ್ನಾಟಕ ರಾಜ್ಯೋತ್ಸವಕ್ಕೆ ಸಂಬಂಧಿಸಿದ ಹಾಡುಗಳು ಹಾಗೂ ನೃತ್ಯ ಪ್ರದರ್ಶಿಸಿದರು.ಮಕ್ಕಳಿಗಾಗಿ ಮುದ್ದುಕೃಷ್ಣ, ಮುದ್ದು ರಾಧೆ ಸ್ಪರ್ಧೆ ನಡೆಯಿತು. ವೀಣಾ ರಾವ್ ಕೊನೆಯಲ್ಲಿ ವಂದಿಸಿದರು.



Related posts

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

Mumbai News Desk

ಕರ್ನಾಟಕ ಸಂಘ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಯಲ್ಲಿ ಆಷಾಢದಲ್ಲಿ ಒಂದು ದಿನದ ಸಂಭ್ರಮ*

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

ಬಂಟರ ಸಂಘ ವಸಯಿ-ದಾಹಣು ಪ್ರಾದೇಶಿಕ ಸಮಿತಿಯಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk