30.5 C
Mumbai
June 8, 2026
Mumbai News Kannada
ಸುದ್ದಿ

ಸವಿತಾ ಎಸ್. ರೈ ಅವರಿಗೆ ಪಿಎಚ್.ಡಿ ಪದವಿ





ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ ವಿಶ್ವವಿದ್ಯಾಲಯವು, ಸಂಶೋಧಕಿ ಸವಿತಾ ಎಸ್. ರೈ ಅವರಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ.

‘ಸಾಂಸ್ಥಿಕ ಬದ್ಧತೆಯ ನಿರ್ಧಾರಕಗಳು: ನೈತಿಕ ನಾಯಕತ್ವವು ಆಟವನ್ನು ಬದಲಾಯಿಸುವವರೇ?’ ಎಂಬ ಮಹತ್ವದ ವಿಷಯದ ಮೇಲೆ ಅವರು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಈ ಸಂಶೋಧನಾ ಕಾರ್ಯವನ್ನು ಮಾಹೆ, ಮಣಿಪಾಲದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹ ಪ್ರಾಧ್ಯಾಪಕರಾದ ಡಾ. ನವೀನ್ ಕುಮಾರ್ ಕೂಡಮಾರ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಸವಿತಾ ಎಸ್. ರೈ ಅವರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತಸರರಾದ ಮಾಣಿಗುತ್ತು ಸಚಿನ್ ರೈ ಅವರ ಪತ್ನಿಯಾಗಿದ್ದು, ಶಂಕರ ಎನ್. ಶೆಟ್ಟಿ (ತಾಳಿಪಾಡಿ ಮೂಡ್ರಗುತ್ತು) ಮತ್ತು ವಿಜಯ ಎಸ್. ಶೆಟ್ಟಿ (ಬೇಳೂರು ದನ್ಯಾಡಿ ಮನೆ) ದಂಪತಿಯ ಪುತ್ರಿ.

ಅವರು ಬೈಲು ಕೆಳಗಿನಮನೆ ದಿ. ಕೋಚ್ಚಣ್ಣ ರೈ ಹಾಗೂ ಮಾಣಿಗುತ್ತು ಪ್ರಫುಲ್ಲ ಕೆ. ರೈ ಅವರ ಸೊಸೆಯೂ ಆಗಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯವು ಸಮಾಜ ಮತ್ತು ಸಂಸ್ಥೆಗಳ ಬೆಳವಣಿಗೆಗೆ ದಾರಿದೀಪವಾಗುವಂತಹ ಮಹತ್ವದ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿಯನ್ನು ಗಳಿಸಿರುವ ಸವಿತಾ ಎಸ್. ರೈ ಅವರನ್ನು ಅಭಿನಂದಿಸಿದೆ.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ: ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ

Mumbai News Desk

ವಿಶ್ವನಾಥ ಶೆಟ್ಟಿ ಇನ್ನಂಜೆ ವಿಧಿವಶ

Mumbai News Desk

ಮುಂಬೈಯ ನಾಟ್ಯ ಕಲಾವಿದೆ ಜ್ಯೋತಿ ರಂಜಿತ್ ಶರ್ಮ ಅವರಿಂದ ಅಯೋಧ್ಯೆಯಲ್ಲಿ ನ್ರತ್ಯ ಸೇವೆ.

Mumbai News Desk

ಬೈಂದೂರು: ಪ್ರವಾಸಿ ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳು ಸಾವು

Mumbai News Desk

ಬೆಂಗಳೂರು – ಮುಂಬೈ ನಡುವೆ ಸೂಪರ್‌ಫಾಸ್ಟ್‌ ರೈಲು; ಗುಡ್‌ನ್ಯೂಸ್‌ ಕೊಟ್ಟ ಸಂಸದ ತೇಜಸ್ವಿ ಸೂರ್ಯ

Mumbai News Desk

ವಿಶ್ವಕಪ್ ವಿಜೇತ ಕಬ್ಬಡ್ಡಿ ತಂಡದ ಆಟಗಾರ್ತಿ ಕು. ಧನಲಕ್ಷ್ಮಿ ಪೂಜಾರಿಗೆ ಮುಖ್ಯಮಂತ್ರಿಗಳಿಂದ ಅಭಿನಂದನೆ: 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಣೆ

Mumbai News Desk