September 6, 2026
Mumbai News Kannada
ತುಳುನಾಡು

ಮೂಲ್ಕಿ : ವಿಜಯಾ ರೈತರ ಸೇವಾ ಸಂಘದ ಮಹಾಸಭೆ ಸದಸ್ಯರಿಗೆ ಶೇ ೧೨ ಡಿವಿಡೆಂಡ್





ಮೂಲ್ಕಿ ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘ ೪೦.೮೦ ಲಕ್ಷ ರೂ ಲಾಭಾಂಶ ಗಳಿಸಿ, ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡಲಾಗುವುದು. ಸಂಘಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನ ಖರೀದಿಸಲಾಗಿದ್ದು, ಮುಂದಿನ ವರ್ಷ ಸ್ವರ್ಣ ಮಹೋತ್ಸವದ ಹಿನ್ನೆಲೆ ಕಟ್ಟಡ ನಿರ್ಮಾಣದ ಬಗ್ಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.
ಸಂಘದ ವ್ಯಾಪ್ತಿಯ ಪ್ರಗತಿಪರ ಕೃಷಿಕರಾದ ಭುಜಂಗ ಆರ್ ಶೆಟ್ಟಿ, ಸದಾನಂದ ಸನಿಲ್ ನಾಕದೈಲು ಚಿತ್ರಾಪು, ಗಿರಿಧರ್ ಕಾಮತ್ ಅತಿಕಾರಿಬೆಟ್ಟು, ದಿನಕರ ಕಾಂಚನ್ ಮಾನಂಪಾಡಿ, ನೀಲು ಪೂಜರ‍್ತಿ ಅತಿಕಾರಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ೨೫ ಪ್ರತಿಭಾವಂತರಿಗೆ ವಿದ್ಯಾರ್ಥಿವೇತನದೊಂದಿಗೆ ಗೌರವಿಸಲಾಯಿತು.


ಮೂಲ್ಕಿ ಬಿಲ್ಲವ ಸಂಘದಲ್ಲಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ೪೯ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಘ ಕೃಷಿ, ಹೈನುಗಾರಿಕೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಶಾಸಕ ಉಮಾನಾಥ ಕೋಟ್ಯಾನ್ ಸೂಚನೆಯಂತೆ ಮುಂದಿನ ಬಾರಿ ಶಿಕ್ಷಣದ ಜತೆಗೆ ಯಕ್ಷಗಾನ, ಭರತನಾಟ್ಯ ಸಹಿತ ವಿವಿಧ ಕಲಾ ಪ್ರಾಕಾರಗಳು ಮತ್ತು ಕ್ರೀಡಾ ಸಾಧಕರಿಗೂ ಪ್ರೋತ್ಸಾಹ ನೀಡಲಾಗುವುದು ಎಂದರು.


ಸAಘ ಮೂಲ್ಕಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಸದಾಶಿವ ರಾವ್ ನಗರ, ಶಿಮಂತೂರು, ಬಳ್ಕುಂಜೆ, ಅತಿಕಾರಿಬೆಟ್ಟು, ಕುಕ್ಕಟ್ಟೆ, ಕರ್ನಿರೆ ಶಾಖೆ ಹೊಂದಿವೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆ ೧೪೨.೧೩ ರೂ. ಕೋಟಿ ವ್ಯವಹಾರ ನಡೆಸಿದ್ದು ಲೆಕ್ಕಪರಿಶೋಧನಾ ವರ್ಗೀಕರಣ ‘ಎ’ ತರಗತಿ ಗಳಿಸಿದೆ ಎಂದರು. ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ನಿದೇಶಕರಾದ ನರಸಿಂಹ ಪೂಜಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಮಮತಾ ಡಿ.ಪೂಂಜ, ಪದ್ಮಿನಿ ವಿ.ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ರಾಮ ನಾÊಕ್, ನಂಜುAಡ ಆರ್.ಕೆ.ಮುಖ್ಯ ಅತಿಥಿಗಳಾಗಿದ್ದರು.
ಸಂಘದ ನಿರ್ದೇಶಕ ಗಂಗಾಧರ ವಿ. ಶೆಟ್ಟಿ ಸ್ವಾಗತಿಸಿದರು, ಆಡಳಿತ ನಿದೇಶಕ ಸಂತೋಷ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ವ್ಯವಸ್ಥಾಪಕ ಚಂದ್ರಕಾAತ ಶೆಟ್ಟಿ ವರದಿ ಮಂಡಿಸಿದರು. ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಸಂಘದ ನಿರ್ದೇಶಕ ಅಶೋಕ್ ಕುಮಾರ್ ಚಿತ್ರಾಪು ವಂದಿಸಿದರು.



Related posts

ಮುಲ್ಕಿ : ಹೊಸ ಅಂಗಣ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ಸವೀನ್ ಪಂಬದ ಅವರಿಗೆ ಸನ್ಮಾನ

Mumbai News Desk

ಪಡುಬಿದ್ರಿ ನಡಿಪಟ್ಣದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ

Mumbai News Desk

ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ  ಪ್ರಶಾಂತ್ ಶೆಟ್ಟಿ  ಮಂಡೇಡಿ ಆಯ್ಕೆ 

Mumbai News Desk

ಗ್ರಾಮದ ಅಭಿವೃದ್ಧಿ ನಮ್ಮಧ್ಯೇಯವಾಗಲಿ : ಕುಸುಮಾ ಚಂದ್ರಶೇಖರ್

Mumbai News Desk

ಮೂಲತ್ವ ಫೌಂಡೇಶನ್‌ನಿಂದ ‘ಆಟಿದೊಂಜಿ ದಿನ’ ಆಚರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ, ‘ಮೂಲತ್ವ ಲೋಕ ಪೊರ್ಲು’ ಅನಾವರಣ

Mumbai News Desk

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk