September 6, 2026
Mumbai News Kannada
ತುಳುನಾಡು

ಶ್ರೀ ಬಪ್ಪನಾಡು ಸೌಹರ್ದ ಸಹಕಾರಿ ಸಂಘ(ನಿ)ಇದರ ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ





ಸೌಹರ್ದ ಸಹಕಾರಿ ಸಂಘದ ಅಭಿವೃದ್ದಿಗೆ ಸಂಘದ ಸದಸ್ಯರು ಹಾಗೂ ಊರಿನ ನಮ್ಮ ಮಿತ್ರರು ಬಹಳಷ್ಟು ಸಹಾಯ ಸಹಕಾರವನ್ನು ಕೊಟ್ಟು ಸಂಘದ ವ್ಯವಹಾರವು ಒಳ್ಳೆಯ ರೀತಿಯಿಂದ ನಡೆಯುವಂತೆ ೧೫ವರ್ಷಗಳಿಂದ ನಮ್ಮೊಟ್ಟಿಗೆ ಇದ್ದು ೧೫ ವರ್ಷದ ಈ ಮಹಾಸಭೆಯಲ್ಲಿ ನಮ್ಮ ಸಂಘಕ್ಕೆ ಬೇಕಾಗುವ ನಿವೇಶನ ಹಾಗೂ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವಂತಹ ಯೋಜನೆಯೂ ನಮ್ಮಲ್ಲಿದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್‌ರವರು ಹೇಳಿದರು.
ಈ ಮಹಾಸಭೆಯಲ್ಲಿ ಸಂಘದ ಸ್ಥಾಪಕ ಸದಸ್ಯರು ಹಾಗೂ ಇತರ ರಂಗದಲ್ಲಿ ಸಾಧನೆ ಮಾಡಿದ ಮೂವÀರಿಗೆ ಸನ್ಮಾನ ಮಾಡಲಾಯಿತು. ಇದರಲ್ಲಿ ಮೂಲ್ಕಿಯ ಸಾಹಿತಿ ಸಮಾಜ ಸೇವಕ ಜ್ಯೋತಿಷರಾದ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರು ಮಾತನಾಡಿ ೧೫ ವರ್ಷದ ಮೊದಲು ಈ ಸಂಘ ಸ್ಥಾಪನೆಯಾಗುವಾಗ ಬಹಳಷ್ಟು ಜನ ಸದಸ್ಯರಾಗಿ ಸಂಘಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಈ ದಿನ ಇ-ಸ್ಟಾಂಪ್ ಸೌಲಭ್ಯವನ್ನು ಸಂಘದ ವತಿಯಿಂದ ಆರಂಭ ಮಾಡಿರುವುದರಿಂದ ಜನರಿಗೆ ಪ್ರಯೋಜನವಾಗಿದೆ. ಸಂಘವು ನಿರಂತರ ಪ್ರಗತಿಯನ್ನು ಕಂಡು ಸಂಘಕ್ಕೆ ಸ್ವಂತ ಕಟ್ಟಡವನ್ನು ಅದಷ್ಟು ಬೇಗ ಮಾಡಲು ನಾವೆಲ್ಲರೂ ಪ್ರೋತ್ಸಾಹಿಸಬೇಕೆಂದು ಹೇಳಿದರು. ಇವರೊಂದಿಗೆ ನಿವೃತ ಗ್ರಂಥಪಾಲಕ ಮೋಹನ್ ರಾವ್ ಮತ್ತು ಯೋಗಪಟು ಜಯಮುದ್ದು ಶೆಟ್ಟಿ ಇವರಿಗೆ ಸನ್ಮಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ಯಾಮ್ ಪ್ರಸಾದ್ ನಿರ್ದೇಶಕರಾದ ಶ್ರೀಮತಿ ಕಸ್ತೂರಿ ಪಂಜ, ಸಂಪತ್ ಕಾರ್ನಾಡ್, ಜಯಾನಂದ ರಾವ್, ಶೈಲೇಶ್ ಕುಮಾರ್, ರಮಾನಾಥ ಪೈ, ಅರುಣ್ ಭಂಡಾರಿ, ಶ್ರೀಮತಿ ಶಕುಂತಲಾ ಬಂಗೇರ ಉಪಸ್ಥಿತರಿದ್ದರು. ನವೀನ್ ಕುಮಾರ್ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿ ಸ್ವಾಗತಿಸಿ, ಕೆ ಉಮೇಶ್ ಪಂಜ ವಂದಿಸಿದರು.



Related posts

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk

ಮೂಲ್ಕಿ : ಚಿತ್ರಾಪು ಶ್ರೀ ವಿಠೋಬ ಬಾಲಲೀಲಾ ಭಜನಾ ಮಂದಿರದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

Mumbai News Desk

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಸೋತ್ಸವ, ಧಾರ್ಮಿಕ ಸಭೆ;

Mumbai News Desk

ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವ : ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ

Mumbai News Desk

ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ವತಿಯಿಂದ ಕನ್ನಡ ಶಾಲೆಗೆ ಧ್ವನಿವರ್ದಕ ಕೊಡುಗೆ

Mumbai News Desk