September 6, 2026
Mumbai News Kannada
ಪ್ರಕಟಣೆ

ಬಿಲ್ಲವರ ಎಸೋಸಿಯೇಷನ್ ಮುಂಬಯಿ – ಸೆ. 28ಕ್ಕೆ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್ಸೈಟ್ ಲೋಕಾರ್ಪಣೆ





ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಎಸೋಸಿಯೇಷನ್ ನ ವಿದ್ಯಾ ಉಪ ಸಮಿತಿಯ ಆಯೋಜನೆಯಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್ಸೈಟ್ ಲೋಕಾರ್ಪಣ ಕಾರ್ಯಕ್ರಮ ಸೆಪ್ಟೆಂಬರ್ 28ರ ಆದಿತ್ಯವಾರ, ಮಧ್ಯಾಹ್ನ 3 ಗಂಟೆಗೆ ಸಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ಜರಗಲಿದೆ.
ಎಸೋಸೋಯೇಶನ್ ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ವಿಶ್ವಾತ್ ಕೆಮಿಕಲ್ಸ್ ನ ಸಿಎಂ ಡಿ ವಿವೇಕ್ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.
ಗೌರವ ಅತಿಥಿಗಳಾಗಿ ಎಸ್. ಎಂ ಶೆಟ್ಟಿ ಕಾಲೇಜ್ ಪೊವಾಯಿಯ ಕಾರ್ಯಧ್ಯಕ್ಷ, ಹಾಗೂ ಶ್ರೀರಥ್ ಫೈನಾನ್ಸ್ ನ ಸಿಎಂಡಿ ಮುಂಡ್ಕುರು ರತ್ನಾಕರ್ ಶೆಟ್ಟಿ, ಸಿಎ ಗಂಗಾಧರ್ ಎಸ್ ಪೂಜಾರಿ, ಬೀದರ್ ನ ಮಾಜಿ ಜಿಲ್ಲಾ ಅರೋಗ್ಯ ಮೇಲ್ವಿಚಾರಕಿ ಶುಭಾವತಿ ಎಸ್ ಆಗಮಿಸಲಿರುವರು.
ನ್ಯಾಯವಾದಿ ಅನಘ ನಿಮ್ಬಕರ್ ಲೀಗಲ್ ಕ್ಯಾರಿಯರ್ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿರುವರು.
ಇದೇ ಸಂದರ್ಭದಲ್ಲಿ ಅಸೋಸಿಯೇಷನ್ನ ನೂತನ ವೆಬ್ಸೈಟ್ ನ್ನು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಕಾರ್ಯಧ್ಯಕ್ಷ ಎನ್. ಟಿ. ಪೂಜಾರಿ ಉದ್ಘಾತಟಿಸಲಿರುವರು.
ವಿದ್ಯಾರ್ಥಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ
ಅಸೋಸಿಯೇಷನ್ನ ಗೌರವ ಅಧ್ಯಕ್ಷರಾದ ಎಲ್ ವಿ ಅಮೀನ್, ಅಧ್ಯಕ್ಷ ಹರೀಶ್ ಜಿ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲಿಯಾನ್, ಗೌರವ ಕೋಶಾಧಿಕಾರಿ ರವಿ ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್, ವಿದ್ಯಾ ಉಪ ಸಮಿತಿಯ ಕಾರ್ಯಧ್ಯಕ್ಷ ವಿಶ್ವನಾಥ್ ತೋನ್ಸೆ, ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕ್ಕರ್ಣೆ, ಸಾಮಾಜಿಕ ಜಾಲತಾಣ ಉಪ ಸಮಿತಿಯ ಕಾರ್ಯಧ್ಯಕ್ಷ ಸುರೇಶ್ ಅಂಚನ್, ಕಾರ್ಯದರ್ಶಿ ನವೀನ್ ಚಂದ್ರ ಅಮೀನ್ ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಫೆ. 11 ರಂದು ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ 37ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ.

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ವಿಜಯ ಕಾಲೇಜು ಮೂಲ್ಕಿ ಜಾಗತಿಕ ಹಳೆ ವಿದ್ಯಾರ್ಥಿ ಸಂಘ ಮುಂಬಯಿ: ಮಾರ್ಚ್ 7ರಂದು ವಾರ್ಷಿಕ ಸ್ನೇಹ ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಫೆ. 15ರಂದು ಮಹಾಶಿವರಾತ್ರಿ ಮಹೋತ್ಸವ; ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೋತ್ಸವ

Mumbai News Desk