July 23, 2026
Mumbai News Kannada
ಸುದ್ದಿ

ಮುಂಬೈ ಕುಲಾಲ ಸಂಘದ ಕುಲಾಲ ಭವನಕ್ಕೆ ಎಸ್. ಆರ್. ಬಂಜನ್ ಅವರಿಂದ ರೂ. 20 ಲಕ್ಷ ದೇಣಿಗೆ







ಪುಣೆ: ಕುಲಾಲ ಸಂಘ, ಮುಂಬೈ, ಬಹುಕೋಟಿ ವೆಚ್ಚದಲ್ಲಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಸಮೀಪದಲ್ಲಿ ನಿರ್ಮಿಸಿರುವ ಕುಲಾಲ ಭವನಕ್ಕೆ ಪುಣೆಯ ಉದ್ಯಮಿ, ಕುಲಾಲ ಸಮಾಜದ ಹಿರಿಯ ನಾಯಕರಾದ ಮತ್ತು ಎಸ್. ಬಂಜನ್ ಅಂಡ್ ಕಂಪನಿಯ ಆಡಳಿತ ನಿರ್ದೇಶಕರಾದ ಎಸ್. ಆರ್. ಬಂಜನ್ ಅವರು ₹20 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಾರೆ.

​ನವೆಂಬರ್ 23 ರಂದು ಲೋಕಾರ್ಪಣೆಗೊಳ್ಳಲಿರುವ ಕುಲಾಲ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಸ್. ಆರ್. ಬಂಜನ್ ಅವರನ್ನು ಸಂಘದ ಅಧ್ಯಕ್ಷರಾದ ರಘು ಮೂಲ್ಯ, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲಿಯಾನ್, ಉಪಕಾರ್ಯಾಧ್ಯಕ್ಷರಾದ ಸುನಿಲ್ ಸಾಲಿಯಾನ್ ಮತ್ತು ಕಾರ್ಯದರ್ಶಿ ಉಮೇಶ್ ಬಂಗೇರ ಅವರು ಪುಣೆಯಲ್ಲಿ ಭೇಟಿಯಾಗಿ ಆಮಂತ್ರಿಸಿದರು.

​ಕಾರ್ಯಕ್ರಮಕ್ಕೆ ಪರಿವಾರ ಸಮೇತ ಸೇರಿಕೊಳ್ಳುವುದಾಗಿ ತಿಳಿಸಿದ ಎಸ್. ಆರ್. ಬಂಜನ್ ಅವರು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಮತ್ತು ದೇಶ-ವಿದೇಶಗಳಿಂದ ಕುಲಾಲ ಬಾಂಧವರು ಇದರಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.



Related posts

ಬಿಲ್ಲವರ ಎಸೋಸಿಯೇಶನ ನ ಮಾಜಿ ಉಪಾಧ್ಯಕ್ಷ ಸಿ. ಟಿ. ಸಾಲ್ಯಾನ್ ನಿಧನ

Mumbai News Desk

ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ – 58 ನೇ ಆರ್ ಎನ್ ಉಚ್ಚಿಲ್ ಸ್ಮಾರಕ ವಾರ್ಷಿಕ ಅಥ್ಲೆಟಿಕ್ಸ್ ಮೀಟ್

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (07/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮಲಾಡ್ ಕುರಾರ್ ಶನೇಶ್ವರ ಮಂದಿರದ ವತಿಯಿಂದ ಉಳ್ಳಾಳ ಸೋಮೇಶ್ವರದಲ್ಲಿ, ಶ್ರೀ ಶನಿ ಮಹಾಪೂಜೆ.

Mumbai News Desk

ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ಬಿಡುಗಡೆ

Mumbai News Desk

ವಸಾಯಿ : ಹರಿಶ್ಚಂದ್ರ ಜಿ. ಕುಂದರ್ ಅವರ ಅಕಾಲಿಕ ಮರಣ

Mumbai News Desk