September 6, 2026
Mumbai News Kannada
ಮುಂಬಯಿ

ಕುಲಾಲ ಸಂಘ ಮುಂಬೈ ಮೀರಾರೋಡ್-ವಿರಾರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣೆ.





ಕಾರ್ಯಕ್ರಮದ ಯಶಸ್ಸಿಗೆ ಒಗ್ಗಟ್ಟಿನಿಂದ ಶ್ರಮಿಸೋಣ: ಶಂಕರ್ ವೈ ಮೂಲ್ಯ, ವಿರಾರ್.

ನಾಲಾಸೂಪರ, ಅ. 19:

​ಕುಲಾಲ ಸಂಘ ಮುಂಬೈ ಮೀರಾರೋಡ್-ವಿರಾರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣಾ ಕಾರ್ಯಕ್ರಮವು ನಾಲಾಸೂಪರ ಪೂರ್ವದ ರಿಜೆನ್ಸಿ ಹಾಲ್‌ನಲ್ಲಿ ಅ. 12ರಂದು ನಡೆಯಿತು. ಸಂಘದ ಅಧ್ಯಕ್ಷರಾದ ರಘು ಎ. ಮೂಲ್ಯಯವರು ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ್ ವೈ ಮೂಲ್ಯ, ವಿರಾರ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಣುಕಾ ಸಾಲ್ಯಾನ್ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ವಿತರಣೆಯನ್ನು ಮಾಡಿದರು.

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42;

​ಬಳಿಕ ರಘು ಮೂಲ್ಯ ಮಾತನಾಡಿ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

​ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲಿಯನ್, ಬಂಟ್ವಾಳ ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ನೀಡಿ ಸಮಾಜ ಬಾಂಧವರು ಸಮಯ ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

​ವೇದಿಕೆಯಲ್ಲಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸುಂದರ ಮೂಲ್ಯ, ಹೋಟೆಲ್ ಉದ್ಯಮಿ ಪದ್ಮನಾಭ ಬಂಗೇರ, ಸಂಘದ ಉಪಾಧ್ಯಕ್ಷರಾದ ಡಿ.ಐ. ಮುಲ್ಯ, ಕೋಶಾಧಿಕಾರಿ ಜಯ ಅಂಚನ್, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರ ಬಂಜನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬಂಗೇರ, ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಮೋಹನ್ ಬಂಜನ್, ಕಾರ್ಯದರ್ಶಿ ನ್ಯಾಯವಾದಿ ಉಮಾನಾಥ ಮೂಲ್ಯ, ಕೋಶಾಧಿಕಾರಿ ಸತೀಶ್ ಬಂಗೇರ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರಸಿಕ ಸಿ. ಮೂಲ್ಯ, ಕಾರ್ಯದರ್ಶಿ ಪ್ರಮೀಳ ಎಂ. ಬಂಜನ್, ಕೋಶಾಧಿಕಾರಿ ಜಯಂತಿ ಯು. ಬಂಗೇರ ಮತ್ತು ಮತ್ತಿತರರು ಉಪಸ್ಥಿತರಿದ್ದರು.

​ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ ಮೂಲ್ಯ ಸ್ವಾಗತಿಸಿ, ಈ ಪರಿಸರದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಶ್ರಮಿಸೋಣ ಎಂದರು.

​ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು ಮತ್ತು ಕಾರ್ಯಕ್ರಮ ನಡೆಸಲು ವಿಶೇಷ ಅವಕಾಶ ಮಾಡಿಕೊಟ್ಟ ರಿಜೆನ್ಸಿ ಹಾಲ್‌ನ ಮಾಲಕ ಶಶಿಧರ್ ಕೆ. ಶೆಟ್ಟಿ, ಇನ್ನೊಂಜೆ ಅವರನ್ನು ಗೌರವಿಸಲಾಯಿತು.

​ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಸುಜಾತ ಆರ್. ಸಾಲಿಯನ್ ನಿರೂಪಿಸಿದರು. ಉಪ ಕಾರ್ಯಾಧ್ಯಕ್ಷ ಮೋಹನ್ ಬಂಜನ್ ಧನ್ಯವಾದ ನೀಡಿದರು.

​ಗುರುವಂದನಾ ಭಜನಾ ಮಂಡಳಿಯ ಭಜನೆ ಬಳಿಕ ಸಮಿತಿಯ ಯುವ ವಿಭಾಗದವರಿಂದ ಮತ್ತು ಮಹಿಳಾ ವಿಭಾಗದ ಸದಸ್ಯರಿಂದ ಕುಣಿತ ಭಜನೆ ಕೂಡ ನಡೆಯಿತು.



Related posts

ಪೇಜಾವರ ಮಠದಲ್ಲಿ ಮನಸೂರೆಗೊಂಡ ಪುತ್ತೂರು ನರಸಿಂಹ ನಾಯಕ್ ಭಕ್ತಿ ಸಂಗೀತ ಕಚೇರಿ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ .

Mumbai News Desk

ಕನಕದಾಸ ಜಯಂತಿ-ಕುವೆಂಪು ಜಯಂತಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡ ಡಿಂಡಿಮ ಸಮಾರೋಪ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಘ ಸಂಸ್ಥೆಗಳಿಗೆ, ಪ್ರಶಸ್ತಿ ಸನ್ಮಾನ

Mumbai News Desk

ಬಿಲ್ಲವರ ಅಸೋಸಿಯೇಷನ್, ಮುಂಬೈ, ಇದರ ದೊಂಬಿವೀಲಿ ಸ್ಥಳೀಯ ಕಚೇರಿಯ 2024-2027 ರ ನೂತನ ಕಾರ್ಯಾಧ್ಕ್ಷರಾಗಿ ಶ್ರೀ ಶ್ರೀಧರ್ ಬಿ. ಅಮೀನ್ ಅಯ್ಕೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯ ಚುನಾವಣೆ – ಜಯಶಾಲಿಯಾದ “ವಿಶನ್-2030” ಪ್ಯಾನೇಲ್

Mumbai News Desk

ಡೊಂಬಿವಿಲಿಯಲ್ಲೊಂದು ಸುಂದರ ಯಕ್ಷ ಸಂಜೆ…

Mumbai News Desk