32 C
Mumbai
March 7, 2026
Mumbai News Kannada
ಸುದ್ದಿ

ಸಾಗರ ವಿದ್ಯಾ ಮಂದಿರ ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಆಚರಣೆ





ಪಡುಬಿದ್ರಿ ಸಾಗರ ವಿದ್ಯಾ ಮಂದಿರದಲ್ಲಿ ದಿ 1/11 /2025 ರ ಶನಿವಾರ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ಸುಕುಮಾರ ಸಿ ಶ್ರೀಯಾನ್ ಅವರು ಕನ್ನಡ ಪತಾಕೆಗೆ ಹಾಗೂ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸುತ್ತಾ ,ಕನ್ನಡಿಗರಾದ ನಾವು ಕನ್ನಡ ಭಾಷೆಯ ಅಭಿಮಾನದ ಜೊತೆಗೆ ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಎಂದು ತಿಳಿಸಿದರು.


ಎಂಟನೇ ತರಗತಿ ವಿದ್ಯಾರ್ಥಿನಿ ಆಧ್ಯ ಕನ್ನಡದ ಇತಿಹಾಸದ ಬಗ್ಗೆ ಸವಿವರವಾಗಿ ತಿಳಿಸಿದರು. ಶಾಲಾ ವಿದ್ಯಾರ್ಥಿಗಳ ಸಮೂಹ ನೃತ್ಯ ಹಾಗೂ ಸಮೂಹ ಗೀತೆಗಳು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಶಾಲಾ ಮುಖ್ಯೋಪಾಧ್ಯಾಯನಿ ಪದ್ಮಶ್ರೀ ಸುರೇಶ್ ರಾವ್, ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷರಾದ ಶಶಿಕಾಂತ್ ಪಡುಬಿದ್ರಿ ಆಡಳಿತ ಮಂಡಳಿಯ ಸದಸ್ಯರಾದ ಕೆ ಎನ್ ಚಂದ್ರಶೇಖರ್, ಲೋಕೇಶ್ ಕರ್ಕೆರ, ಪೋಷಕರು, ಶಿಕ್ಷಕರು ಶಿಕ್ಷಕೇತರವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿದರು, ಇಂಚರ ಆರ್ ರಾವ್ ಹಾಗೂ ಕನ್ನಡ ಶಿಕ್ಷಕಿ ಅಮಿತಾ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಸ್ತುತಿ ಹೆಚ್ ಕುಂದರ್ ವಂದಿಸಿದರು. ವನದುರ್ಗ ಟ್ರಸ್ಟ್ ಪಡುಬಿದ್ರಿ ಇವರ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.



Related posts

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

Mumbai News Desk

ದ್ವಮ್ದ್ವ’ ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ – ಪತ್ರಕರ್ತರಿಗೆ ವಿಶೇಷ ಪ್ರದರ್ಶನ

Mumbai News Desk

ಪತ್ರಕರ್ತ, ಅಪೂರ್ವ ಸಂಘಟಕ ಬಿ ದಿನೇಶ್ ಕುಲಾಲ್ ಅವರಿಗೆ “ಶ್ರೀ ಕೃಷ್ಣ ಅನುಗ್ರಹ ಪ್ರಸಾದ” ಪ್ರಶಸ್ತಿ

Mumbai News Desk

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬಯಿ ನಗರಕ್ಕೆ – ಭಕ್ತಿ ಪೂರ್ವಕ ಸ್ವಾಗತ

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk