September 6, 2026
Mumbai News Kannada
ಕ್ರೀಡೆ

ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ: ವಿಜೃಂಭಣೆಯಿಂದ ಜರುಗಿದ 79ನೇ ವರ್ಷದ ಕಂಬಳೋತ್ಸವ





ಕೊಡೇರಿ (ಬೈಂದೂರು ತಾಲ್ಲೂಕು): ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ ಇವರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವವು ನವೆಂಬರ್ 21ರಂದು ಕೊಡೇರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಇದು ಸಂಘವು ಆಯೋಜಿಸಿದ 79ನೇ ವರ್ಷದ ಕಂಬಳವಾಗಿದೆ.

​ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಈ ಕಂಬಳಕ್ಕೆ ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ಆಕರ್ಷಕ ಬಹುಮಾನಗಳನ್ನು ನೀಡುವ ಮೂಲಕ ಬಿಲ್ಲವ ಸಮಾಜ ಸೇವಾ ಸಂಘವು ಕೋಣಗಳ ಮಾಲಕರನ್ನು ಯಶಸ್ವಿಯಾಗಿ ಆಕರ್ಷಿಸಿತು. ಈ ವರ್ಷದ ಕಂಬಳೋತ್ಸವದಲ್ಲಿ ಒಟ್ಟು 67 ಜೋಡಿ ಕೋಣಗಳು ಭಾಗವಹಿಸಿದ್ದವು.

​ಬಿಲ್ಲವ ಸಂಘದ ಗೌರವಾಧ್ಯಕ್ಷರೂ ಹಾಗೂ ಮುಂಬೈ ಉದ್ಯಮಿಗಳೂ ಆದ ಶ್ರೀ ಮಹಾದೇವ ಪೂಜಾರಿಯವರು, ಸಂಘದ ಪದಾಧಿಕಾರಿಗಳು ಹಾಗೂ ಅತಿಥಿ ಗಣ್ಯರ ಸಮ್ಮುಖದಲ್ಲಿ 79ನೇ ವರ್ಷದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

​ಸ್ಪರ್ಧೆ ಮತ್ತು ಫಲಿತಾಂಶ

​ಕೋಣಗಳ ಓಟದ ಸಮಯವನ್ನು ನಿಖರವಾಗಿ ಗುರುತಿಸಲು ಸೆನ್ಸಾರ್ ಅಳವಡಿಸಲಾಗಿತ್ತು. ಕೋಣಗಳ ವಯೋಮಿತಿಗೆ ಅನುಗುಣವಾಗಿ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕನಿಷ್ಠ ಅವಧಿಯಲ್ಲಿ ನಿಗದಿತ ಗುರಿ ತಲುಪಿದ ಕೋಣಗಳ ಮಾಲಕರಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಯಿತು.

ವಿಭಾಗಸ್ಥಾನವಿಜೇತರು (ಸಮಯ ಸೆಕೆಂಡ್‌ಗಳಲ್ಲಿ)
ಸಬ್ ಜೂನಿಯರ್ಪ್ರಥಮಶ್ರೀ ಸ್ಕಂದ ಆರ್ವಿನ್ ಪ್ರದೀಪ್, ಉಳ್ಳೂರು ಕಂದಾವರ (10.13)
ದ್ವಿತೀಯಸಮೃದ್ಧಿ, ಪ್ರಸಿದ್ಧಿ, ದೇವಾಡಿಗ ದುರ್ಗಾ ಫ್ರೆಂಡ್ಸ್, ಕಂಚಿಕಾನ್ (10.24)
ತೃತೀಯಸಂಜೀವ ಪೂಜಾರಿ, ಕಳಿಹಿತ್ಲು ಕೆರ್ಗಾಲ್ (10.26)
ಹಗ್ಗ ಕಿರಿಯಪ್ರಥಮವಿಶ್ವನಾಥ ದೇವಾಡಿಗ, ನರಿಗುಡಿ ನಾಯ್ಕನಕಟ್ಟೆ (9.50)
ದ್ವಿತೀಯಶ್ರೀ ಮಾಸ್ತಿಯಮ್ಮ, ಮಾಸ್ತಿಕಟ್ಟೆ (10.16)
ತೃತೀಯಶ್ರೀ ಮಹಾದೇವ ಪೂಜಾರಿ, ಕೆಳಾಮೊಳೆಬೈಲು ಕೊಡೇರಿ (10.23)
ಹಗ್ಗ ಹಿರಿಯಪ್ರಥಮವೆಂಕಟ ಪೂಜಾರಿ, ಸಸಿಹಿತ್ಲು ಬೈಂದೂರು (9.63)
ದ್ವಿತೀಯಶ್ರೀ ಪನ್ನಗ ಹೆಬ್ಬಾರ್, ಭಟ್ಕಳ (10.01)
ತೃತೀಯದಿಶಾ ಶ್ರೇಯಸ್, ನಾರಾಯಣ ದೇವಾಡಿಗ, ಮಿಯ್ಯಣಿ (10.17)
ಹಲಗೆ ವಿಭಾಗಪ್ರಥಮಅಧ್ವಿನ್ ರವಿರಾಜ್ ಶೆಟ್ಟಿ, ನೆರಳಕಟ್ಟೆ ಕೊಡ್ಲಾಡಿ (10.18)
ದ್ವಿತೀಯಆನಂದ ದೇವಾಡಿಗ, ತೆಕ್ಕಟ್ಟೆ ಮೆಲ್ ಗುಡ್ಡೆ ಮನೆ (10.53)
ತೃತೀಯಮೊಳೆಬೈಲು ಶುಕ್ರ ಪೂಜಾರಿ, ಕೊಡೇರಿ ಕಿರೀಮಂಜೇಶ್ವರ (10.65)
ಅದೃಷ್ಟ ಕೋಣಕೋಟಿ ಚನ್ನಯ್ಯ, ಯಶ್ವಿನ್ ಮಂಜುನಾಥ್ ಪೂಜಾರಿ, ಕಾಮನಮನೆ

ಕಂಬಳೋತ್ಸವಕ್ಕೆ ಆಗಮಿಸಿದ ಕೋಣಗಳ ಮಾಲಕರನ್ನು ಸಾಂಪ್ರದಾಯಿಕವಾಗಿ ವೀಳ್ಯ ನೀಡಿ ಸ್ವಾಗತಿಸಲಾಯಿತು.

​ಸಮಾರೋಪ ಮತ್ತು ಸನ್ಮಾನ

​ದಿನವಿಡೀ ನಡೆದ ಕಂಬಳೋತ್ಸವವು ಸಂಜೆ ಸಂಪನ್ನಗೊಂಡ ಬಳಿಕ ಸಮಾರೋಪ ಸಮಾರಂಭ ಆಯೋಜಿಸಿ ವಿಜೇತ ಕೋಣಗಳ ಮಾಲಕರಿಗೆ ಬಹುಮಾನ ವಿತರಿಸಲಾಯಿತು.

​ಈ ಸಂದರ್ಭದಲ್ಲಿ ಬೈಂದೂರು ತಾಲ್ಲೂಕು ಕಂಬಳ ಸಮಿತಿಯ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ ಇದರ ಗೌರವಾಧ್ಯಕ್ಷರಾದ ಶ್ರೀ ಮಹಾದೇವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

​ಕಂಬಳೋತ್ಸವದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಅಶೋಕ ಪೂಜಾರಿ ಬೀಜಾಡಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಂಗಾಧರ ಕೋಡಿ, ಪಂಜರ ಕೃಷಿ ಮೀನು ಸಾಕಾಣಿಕೆಯ ಸಾಧಕರಾದ ಶ್ರೀ ರಮೇಶ್ ಖಾರ್ವಿ, ಹಾಗೂ ಹಲವು ಕಂಬಳಗಳಲ್ಲಿ ಬಹುಮಾನಗಳನ್ನು ಪಡೆದಿರುವ ಶ್ರೀ ಸುರೇಶ ಪೂಜಾರಿಯವರನ್ನು ಅತಿಥಿಗಳು ಸತ್ಕರಿಸಿ, ಅವರ ಮುಂದಿನ ಸಾಧನೆಗಳಿಗೆ ಶುಭ ಕೋರಿದರು.

​ಕಾರ್ಯಕ್ರಮದಲ್ಲಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀಮತಿ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಪಾಲ್ಗೊಂಡಿದ್ದರು.

​ಇವರೊಂದಿಗೆ ಬಿಲ್ಲವ ಸಂಘದ ಗೌರವಾಧ್ಯಕ್ಷ ಮಹಾದೇವ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ, ಗೌರವ ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ, ಸುನೀಲ್ ಪೂಜಾರಿ ಕೋಡಿ, ಗಂಗಾಧರ ಪೂಜಾರಿ ಕೋಡಿ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಖಾರ್ವಿ, ಬೈಂದೂರು ತಾಲ್ಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಪ್ಪುಂದ ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬೈ ಇದರ ಮಾಜಿ ಅಧ್ಯಕ್ಷ ಸೂರ್ಯ ಎಸ್. ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಬೆಂಗಳೂರು ಉದ್ಯಮಿಗಳಾದ ಆಳೊಳ್ಳಿ ಗಣೇಶ ಪೂಜಾರಿ ಮತ್ತು ನಾರಾಯಣ ಪೂಜಾರಿ, ರಾಜೇಶ್ ಕೃಷ್ಣ ಪೂಜಾರಿ, ರೈತರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ನರಸಿಂಹ ಪೂಜಾರಿ ಉಪ್ಪುಂದ, ವಾಸುದೇವ ಪೂಜಾರಿ ಉಪ್ಪುಂದ, ಮೀನುಗಾರಿಕಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಸಿ. ಎಸ್. ಖಾರ್ವಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕಿರಿಮಂಜೇಶ್ವರದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಕೊಡೇರಿ ಮೀನುಗಾರರ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಡಿ. ಚಂದ್ರ ಖಾರ್ವಿ, ವೆಂಕಟೇಶ ಪೂಜಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

​ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಪೂಜಾರಿ ಸರ್ವರನ್ನು ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ ಪೂಜಾರಿ ಕೊಡೇರಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ವಂದನಾರ್ಪಣೆಗೈದರು.

​ಕಂಬಳೋತ್ಸವ ಯಶಸ್ವಿಯಾಗಲು ಕೃಷ್ಣ ಪೂಜಾರಿ, ವಿಜಯ್ ಪೂಜಾರಿ, ಚಂದ್ರ ಪೂಜಾರಿ, ಶೇಷು ಪೂಜಾರಿ, ಭಾಸ್ಕರ ಪೂಜಾರಿ, ಶೇಖರ ಪೂಜಾರಿ, ರವಿರಾಜ್ ಪೂಜಾರಿ, ನಾಗರಾಜ್ ಪೂಜಾರಿ, ರಾಜು ಪೂಜಾರಿ, ಕಾರ್ತಿಕ್ ಪೂಜಾರಿ, ಅಶ್ವಿತ್ ಪೂಜಾರಿ, ನಾಗೇಂದ್ರ ಪೂಜಾರಿ, ಅರವಿಂದ ಪೂಜಾರಿ, ರಿತಿಕ್ ಪೂಜಾರಿ, ಗೋವಿಂದ ಪೂಜಾರಿ, ಕಿಶೋರ್ ಪೂಜಾರಿ ಸಸಿಹಿತ್ಲು, ಗಣೇಶ ಕೊಠಾರಿ, ಗೋಪಾಲ ಪೂಜಾರಿ ಹಾಗೂ ಇತರರು ಸಹಕರಿಸಿದರು.

​ಹೊಸ್ಮನೆ, ಮೇಲ್ ಮೊಳೆಬೈಲು, ಕೆಳಾಮೊಳೆಬೈಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮತ್ತು ಸಂಘದ ಸದಸ್ಯರ ಸಹಕಾರದಿಂದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 79ನೇ ವರ್ಷದ ವಾರ್ಷಿಕ ಕಂಬಳೋತ್ಸವವು ಅತ್ಯಂತ ಯಶಸ್ವಿಯಾಗಿ ಮತ್ತು ವಿಜೃಂಭಣೆಯಿಂದ ಜರುಗಿತು.



Related posts

ಕರ್ನಾಟಕ ಸಂಘ ಡೊಂಬಿವಲಿ, ಅದ್ಧೂರಿ ಕ್ರೀಡೋತ್ಸವ ದಂಗಲ್ – 2024 ಉದ್ಘಾಟನೆ

Mumbai News Desk

ಕರ್ನಾಟಕ ಸಂಘ ಪನ್ವೆಲ್ ನ 32ನೇ ವರುಷದ ವಾರ್ಷಿಕ ಕ್ರೀಡಾ ಕೂಟ.

Mumbai News Desk

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿ; ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ತುಳು ಕನ್ನಡಿಗ ಗೇಮ್ಸ್ 2025,

Mumbai News Desk

ಸುರತ್ಕಲ್ ಬಂಟ್ಸ್ ಕ್ರಿಕೆಟ್ ಜೆರ್ಸಿ ಹಾಗೂ ಟ್ರೋಫಿ ಅನಾವರಣ

Mumbai News Desk

ವೈಭವ್ ಸೂರ್ಯವಂಶಿ ಬಿರುಗಾಳಿ ಬ್ಯಾಟಿಂಗ್ ಗೆ ಇಂಗ್ಲೆಂಡ್ ನಿರುತ್ತರ; 6ನೇ ಬಾರಿ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿದ ಭಾರತ

Mumbai News Desk

ಉದಯ್ ಶೆಟ್ಟಿ ಸಾರಥ್ಯದಲ್ಲಿ ನಡೆದ ಜರ್ಮನಿ ಓಪನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 8 ಪದಕಗಳ ಸಾಧನೆ

Mumbai News Desk