32.3 C
Mumbai
June 7, 2026
Mumbai News Kannada
ತುಳುನಾಡು

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ – ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ತುರ್ತು ಸಭೆ





ಉಪ್ಪುರು ಉಗ್ಗೇಲ್ ಬೆಟ್ಟು ನಿವಾಸಿ ಕುಮಾರಿ ಅಕ್ಷತಾ ಪೂಜಾರಿ ಅವರ ಮನೆಗೆ 10/12/2025 ರಂದು ಮುಂಜಾನೆ ಸುಮಾರು 4:00 ಗಂಟೆಗೆ 4 ಮಂದಿ ಮನೆಗೆ ಬಂದು ತಾವು ಪೊಲೀಸ್ ಎಂದು ಹೇಳಿಕೊಂಡು ದಾಂದಲೆ ನಡೆಸಿ, ಅಕ್ಷತಾ ಅವರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.

ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದಾಗ, ನ್ಯಾಯ ದೊರಕುವ ಬದಲು ಅವರ ಮೇಲೆಯೇ FIR ದಾಖಲಾಗಿರುವುದು ವಿಷಾದಕರ ವಿಷಯವಾಗಿದೆ. ಪ್ರಸ್ತುತ ಅವರು ಅಜ್ಜೆರ್ಕಾಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯನ್ನು ಸಂಪರ್ಕಿಸಿದ್ದಾರೆ.

ಈ ಗಂಭೀರ ವಿಷಯದ ಬಗ್ಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ನಿರ್ಧರಿಸುವ ಸಲುವಾಗಿ ಸರ್ವ ಸಂಘಗಳ ತುರ್ತು ಸಭೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಉಡುಪಿ, ಕೆಳಗಿನಂತೆ ಕರೆಯಲಾಗಿದೆ:

ದಿನಾಂಕ: 15/12/2025
ಸಮಯ: ಸಂಜೆ 4:00 ಗಂಟೆ
ಸ್ಥಳ: ಬಿಲ್ಲವರ ಸೇವಾ ಸಂಘ(ರಿ.) ಬನ್ನಂಜೆ, ಉಡುಪಿ

ದಯವಿಟ್ಟು ಎಲ್ಲ ಸ್ವಜಾತಿ ಭಾಂದವರು ಸರಿಯಾದ ಸಮಯಕ್ಕೆ ಹಾಜರಾಗಿ ಸಹಕರಿಸಬೇಕಾಗಿ ವಿನಂತಿ.

ಧನ್ಯವಾದಗಳು 🙏

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.)



Related posts

ಮುದ್ರಾಡಿ ಪ್ರೌಢಶಾಲೆ: ಉತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವ , ನಿವೃತ್ತ ಮುಖ್ಯ ಶಿಕ್ಷಕಿಗೆ ಸಮ್ಮಾನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಟರ್ ಟ್ರಸ್ಟ್ ಮಂಗಳೂರು: ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಆಟಿಡೊಂಜಿ ದಿನ.

Mumbai News Desk

ಹೆಜಮಾಡಿ ಬಿಲ್ಲವರ ಸಂಘದ ಬ್ರಹ್ಮ ಶ್ರೀ ಗುರು ನಾರಾಯಣ ಜಯಂತಿ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಪಿ ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ; ಶುಭಾರಂಭ

Mumbai News Desk

ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿದ ಲಕ್ಷದೀಪೋತ್ಸವ

Mumbai News Desk

ಸಸಿಹಿತ್ಲು: ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ

Mumbai News Desk