27.7 C
Mumbai
July 23, 2026
Mumbai News Kannada
ಮುಂಬಯಿ

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ; 53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ ಸಂಪನ್ನ







ಮುಂಬಯಿ : ಮಹಾನಗರದ ಹಿರಿಯ ಧಾರ್ಮಿಕ ಸಂಸ್ಥೆಗಳಲೊಂದಾದ ಜೋಗೇಶ್ವರಿ ಪಶ್ಚಿಮದ ನಾರಾಯಣಗಿರಿ ಆಶ್ರಮ, ಕೃಷ್ಣ ನಗರ, ಗುಂಪಾ ಟೇಕಡಿಯ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ,  53ನೇ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ ಸಮಾರಂಭವು  ಡಿ. 20 ಮತ್ತು  21 ರಂದು  ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಧ್ಯಕ್ಷರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಇವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ   ಪಾದೂರು ನರಹರಿ ತಂತ್ರಿಯವರ ಪೌರೋಹಿತ್ಯದಲ್ಲಿ  ಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಏಕಹಾ ಭಜನಾ ಮಂಗಳೋತ್ಸವ ವು ಡಿ.  20 ರಂದು ಸೂರ್ಯೋದಯಕ್ಕೆ ಪ್ರಾರಂಭಗೊಂಡು ಡಿ. 21 ರ ಸೂರ್ಯೋದಯ ತನಕ ವಿಜೃಂಭಣೆಯಿಂದ ನಡೆಯಿತು.   ಸಂಜೆ ಭಜನೆ ಆನಂದ ಪೂಜೆ, ತೀರ್ಥ ಪ್ರಸಾದ ನಂತರ ಅನ್ನ ಸಂತರ್ಪಣೆ ನಡೆಯಿತು.

ಭಜನಾ ತಂಡಗಳಾದ ಶ್ರೀ ಜಗದಂಬಾ ಕಾಳಭೈರವ ಪುರುಷರ ಭಜನಾ ತಂಡ,  ಜೋಗೇಶ್ವರಿ, ಶ್ರೀ ಜಗದಂಬಾ ಕಾಳಭೈರವ ಮಹಿಳಾ ಭಜನಾ ತಂಡ, ಜೋಗೇಶ್ವರಿ, ತುಳುನಾಡ ಸೇವಾ ಸಮಾಜ ಮೀರಾ ರೋಡ್, ಶ್ರೀ ಗೋಕುಲ್ ಭಜನಾ ಮಂಡಳಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಸಾಯನ್, ಶ್ರೀ ಗುರು ನಾರಾಯಣ ಭಜನಾ ಮಂಡಳಿ, ಕುಂದಾಪುರ, ಮುಂಬಯಿ, ಶ್ರೀ ವಿಠಲ್ ಭಜನಾ ಮಂಡಳಿ, ಬ್ರಾಹ್ಮಣ ಸಂಘ, ಮೀರಾ ರೋಡ್, ಶ್ರೀ ಜಗದಂಬಾ ಕಾಳಭೈರವ  ಭಜನಾ ತಂಡ,  ಜೋಗೇಶ್ವರಿ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಕಿನಾಕ, ಅಂಧೇರಿ, ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಕೊಂಡಿವಿಟ್ಟಾ, ಶ್ರೀ ಮಾರಿಯಮ್ಮ ದೇವಸ್ಥಾನ ಭಜನಾ ಮಂಡಳಿ, ಮೇಘ್ಹವಾಡಿ, ಜೋಗೇಶ್ವರಿ, ಶ್ರೀ ದತ್ತಾತ್ರೇಯ ಭಜನಾ ಮಂಡಳಿ, ಬ್ಯಾಪಿಷ್ಟವಾಡಿ ಅಂಧೇರಿ, ಶ್ರೀ ನಿತ್ಯಾನಂದ ಭಜನಾ ಮಂಡಳಿ, ಸಾಕಿನಾಕ, ಅಂಧೇರಿ, ಶ್ರೀ ಶಿವಭೈರವಿ ಭಜನಾ ಮಂಡಳಿ. ಮಲಾಡ್ ಪೂರ್ವ, ಶ್ರೀ ಕೃಷ್ಣ ಪ್ರಸಾದಿಕ ನಿತ್ಯಾನಂದ ಭಜನಾ ಮಂಡಳಿ, ಭಾಂಡೂಪ್, ಶ್ರೀ ವಿಷ್ಣು ಭಜನಾ ಮಂಡೂಲಿ, ವಿರಾರ್, ಶ್ರೀ ಮಹಾಕಾಳಿ ಭಜನಾ ಮಂಡಳಿ, ಪ್ರೇಮ್ ನಗರ, ಜೋಗೇಶ್ವರಿ, ಶ್ರೀ ಸೀತಾರಾಮ ಭಜನಾ ಮಂಡಳಿ, ಕಮಾನಿ ಕುರ್ಲಾ, ಶ್ರೀ ಮಹಾಕಾಳಿ ಭಜನಾ ಮಂಡಳಿ, ಸಾಂತಾಕ್ರೂಜ್, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಆದರ್ ಹೋಟೆಲ್, ವಿಲೆ ಪಾರ್ಲೆ, ಓಂ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಜೋಗೇಶ್ವರಿ,  ಶ್ರೀ ಗೀತಾಂಬಿಕಾ ಭಜನಾ  ಮಂಡಳಿ, ಅಸಲ್ಪ, ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ (ಆರ್), ಅಸಲ್ಪ, ಶ್ರೀ ಜಗದಂಬಾ ಕಾಳಭೈರವ  ಮಹಿಳಾ ಭಜನಾ ಮಂಡಳಿ,  ಜೋಗೇಶ್ವರಿ, ಮತ್ತು ಶ್ರೀ ಜಗದಂಬಾ ಕಾಳಭೈರವ  ಭಜನಾ ಮಂಡಳಿ,  ಜೋಗೇಶ್ವರಿ, ತಂಡಗಳು ಏಕಹಾ ಭಜನೆಯಲ್ಲಿ ಬಾಗವಹಿಸಿದ್ದು, ರಕ್ಷಿತ್ ಶಾನ್ ಭಾಗ್ ಹಾರ್ಮೋನಿಯಂ ಹಾಗೂ ತಬಲಾದಲ್ಲಿ ಸನ್ನಿ ಪೂಜಾರಿ ಸಹಕರಿಸಿದರು.

ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಭಾರತ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯಾನಂದ ಎಸ್ ಕರ್ಕೇರ, ನ್ಯಾ. ಅಕ್ಷತಾ ಪ್ರಭು ಮತ್ತು ಏಕ್ ನಾಥ್ ಪ್ರಭು ಮುಂಡ್ಕೂರು, ನ್ಯಾ. ಡಿ.ಕೆ. ಶೆಟ್ಟಿ, ಹೋಟೇಲು ಉದ್ಯಮಿ ಸುರೇಶ್ ಸುವರ್ಣ ಅಂಧೇರಿ, ಸಮಾಜ ಸೇವಕ ಚಿತ್ರಾಪು ಕೆ. ಎಂ. ಕೋಟ್ಯಾನ್, ತುಳಸಿದಾಸ್ ಅಮೀನ್, ಎಸ್. ಕೆ. ಸುಂದರ್ ಮತ್ತು ಇತರ ಗಣ್ಯರು ಆಗಮಿಸಿ ಶ್ರೀ ಜಗನ್ಮಾತೆ ಹಾಗೂ ಶ್ರೀ ವಿಠೋಭ ರುಕುಮಾಯಿಯವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು. 

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಗೌರವ ಕಾರ್ಯದರ್ಶಿ ಹಾಗೂ ಟ್ರಷ್ಟಿ ದೇವದಾಸ ಸುವರ್ಣ, ಭುವಾಜಿ ಲವಕುಶ್ ಗುಪ್ತಾ, ಉಪಾಧ್ಯಕ್ಷ ಹಾಗೂ ಟ್ರಷ್ಟಿ ಎಚ್. ಬಾಬು ಪೂಜಾರಿ,  ಗೌರವ ಕೋಶಾಧಿಕಾರಿ  ಹಾಗೂ ಟ್ರಷ್ಟಿ ಡಿ. ಟಿ. ಕುಂದರ್, ಪಾರುಪತ್ಯಗಾರರುಗಳಾದ ಸಂಜೀವ ಪಿ. ಪೂಜಾರಿ, ಜಿ. ಟಿ. ಆಚಾರ್ಯ ಶೇಖರ ಕರ್ಕೇರ, ಎಂ. ಸಿ. ಸುವರ್ಣ, ಸುಂದರ್ ಸಿ. ಪೂಜಾರಿ, ಲಕ್ಷ್ಮಣ ಪೂಜಾರಿ ಮತ್ತು ಸಂತೋಷ್ ಜಿ. ಶೆಟ್ಟಿ,  ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಪಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ವನಿತಾ ಜಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ, ಸರಸ್ವತಿ ಪೂಜಾರಿ ಮತ್ತು ಸಂಚಾಲಕಿ ಕಲಾವತಿ ಡಿ. ಪೂಜಾರಿ,     ಟ್ರಷ್ಟಿಗಳು, ಮಹಿಳಾ ವಿಭಾಗ, ಸೇವಾ ಸಮಿತಿ ಹಾಗೂ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು. 



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿ ಮುಂಬಯಿ ಶಾಖೆಯು ನಡೆಸುತ್ತಿರುವ ಚಟುವಟಿಕೆಗಳು ಶಾಘನೀಯವಾಗಿದೆ : ಪ್ರೀತಿ ಎಚ್‌. ಶ್ರೀಯಾನ್‌.

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk

ಮೀರಾ-ಭಾಯಂದರ್ ನಲ್ಲಿ ಸಾವಿರಾರು ಸಂಖ್ಯೆಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡ ಶೈಲಿಯಲ್ಲಿ ಸನ್ಮಾನ.

Mumbai News Desk

ಕನಕದಾಸ ಜಯಂತಿ-ಕುವೆಂಪು ಜಯಂತಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡ ಡಿಂಡಿಮ ಸಮಾರೋಪ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಘ ಸಂಸ್ಥೆಗಳಿಗೆ, ಪ್ರಶಸ್ತಿ ಸನ್ಮಾನ

Mumbai News Desk

ಶ್ರೀ ರಾಮಚಂದ್ರಾಪುರ ಮಠದ ಮುಂಬೈ ವಲಯದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣೆ

Mumbai News Desk

ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಭಕ್ತಿ-ಸಂಭ್ರಮದ ಪರಾಕಾಷ್ಠೆ

Mumbai News Desk