32 C
Mumbai
March 7, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ,  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಷ್ಟಾದಶ ಸಂಭ್ರಮ





ಮುಂಬಯಿ : ಬಂಟರ ಸಂಘವು ಒಂದು ದೇವಸ್ಥಾನದಂತೆ. ಸಂಘವು ಅದರ ಎಲ್ಲಾ ಸದಸ್ಯರಿಗೆ ಸೇರಿದ್ದು, ಬಂಟರ ಸಂಘದ ಎಲ್ಲಾ ಮೂರು ಶಿಕ್ಷಣ  ಸಂಸ್ಥೆಯಿಂದಾಗಿ ಮುಂದೆ ಸಂಘಕ್ಕೆ ದೊಡ್ಡ ಮಟ್ಟದ ಆದಾಯವಾಗಲಿದ್ದು,  ಸಂಘವು ಮುಂದೆ ಆರ್ಥಿಕವಾಗಿ ಮತ್ತಷ್ಟು ಗಟ್ಟಿಯಾಗಲಿದೆ. ಸಂಘದ ಬೊರಿವಲಿ ಶಿಕ್ಷಣ ಸಂಸ್ಥೆಗೆ ಜೋಗೇಶ್ವರಿ-ದಹಿಸರ್ ಪರಿಸರದ ಸಮಾಜ ಬಾಂಧವರ ಮಹತ್ವದ ಕೊಡುಗೆಯಿದೆ ಎಂದು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ, ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ಇದರ ಸಿ.ಎಂ.ಡಿ. ಮಹೇಶ್ ಎಸ್. ಶೆಟ್ಟಿ ನುಡಿದರು.

ಜ. 3 ರಂದು ಬೊರಿವಲಿ ಪಶ್ಚಿಮದ  ನ್ಯೂ ಲಿಂಕ್ ರೋಡ್ ಪಕ್ಕದ ಎಕ್ಸರ್ ಕ್ಲಬ್ ಸಮೀಪವಿರುವ ಕೆ. ಡಿವೈನ್ ಲಾನ್ಸ್ ಎಂಡ್ ಕನ್ವೆನ್ಶನ್ ನ ಸಭಾಗೃಹದಲ್ಲಿ ಬೋಳ ನಂದಳಿಕೆ “ಶ್ರೀ ಮಾತಾ” ಸುಬ್ಬಯ್ಯ ವಿ. ಶೆಟ್ಟಿ ಸ್ಮಾರಕ ವೇದಿಕೆಯಲ್ಲಿ,  ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ಜರಗಿದ ಪ್ರಾದೇಶಿಕ ಸಮಿತಿಯ  ಹದಿನೆಂಟನೆಯ ವರ್ಷದ ವಾರ್ಷಿಕೋತ್ಸವ ಅಷ್ಟಾದಶ ಸಂಭ್ರಮ ಸಮಾರಂಭದ ಸಭಾ ಕಾರ್ಯಕ್ರಮದ  ಗೌರವ ಅತಿಥಿ ಹಾಗೂ  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹೇಶ್ ಎಸ್. ಶೆಟ್ಟಿ ಯವರು ಸಂಘದ ನೂರನೇ ವರ್ಷದ ಸಂದರ್ಭದಲ್ಲಿ ಸಂಘದ್ದೇ ಆದ ಆಸ್ಪತ್ರೆ, ವಿಶಾಲವಾದ ಬಂಟರ ಭವನ ಪುನರ್ನಿಮಾಣ ಸೇರಿ ಹಲವಾರು ಯೋಜನೆಗಳಿವೆ. ಜೋಗೇಶ್ವರಿ–ದಹಿಸರ್ ಪ್ರಾದೇಶಿಕ ಸಮಿತಿಯು ನಿಜವಾಗಿಯೂ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರತರಾಗಿರುವ ಅತ್ಯಂತ ಸುಂದರ ಹಾಗೂ ಮಾದರಿ ಸಮಿತಿಯಾಗಿದೆ ಎಂದು ಅವರು ಶ್ಲಾಘಿಸಿದರು. ಅಶೋಕ ಪಕ್ಕಳರಂತಹ ಪ್ರತಿಭಾವಂತರು ನಮ್ಮ ಸಂಘದ  ಆಸ್ತಿಯೆಂದು ಹೇಳಿದ ಅವರು, ನಾವೆಲ್ಲರೂ ಒಟ್ಟಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು.

ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದ ಜೋಗೇಶ್ವರಿ-ದಹಿಸರ್  ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರು ನಮ್ಮ ಸಮಿತಿಯು ಸಮಿತಿಯ ಎಲ್ಲಾ ಸಲಹೆಗಾರರ  ಮಾರ್ಗದರ್ಶನದಿಂದ   ಹಲವಾರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ವೈದ್ಯಕೀಯ ಹಾಗೂ ಕ್ರೀಡಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಸಮಿತಿಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಹಕಾರದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ, ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಪ್ರಾಚೀನ ತುಳುನಾಡಿನ ಸಂಸ್ಕೃತಿಯನ್ನು ಇಂದಿನ ಜನತೆಗೆ ಪರಿಚಯಿಸುವ ಆಟಿ ತಿಂಗಳ ನೆನಪು,  ಉದ್ಯೋಗಾಕಾಂಕ್ಷಿಗಳಿಗಾಗಿ ಸ್ಕಿಲ್ಲ್ ಫಾರ್ ಎಂಪ್ಲಾಯ್ ಮೆಂಟ್, ನವರಾತ್ರಿ ಉತ್ಸವ, ಊರಿನ ತಂಡಗಳ ಯಕ್ಷಗಾನ ತಾಳಮದ್ದಳೆಗಳು ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಪ್ರವಾಸ,ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರಮುಖವಾಗಿವೆ. ಇದಲ್ಲದೆ ನಮ್ಮ ಸಮಿತಿಯ ಮೂಲಕ ಅಸಾಯಕರಿಗೆ ಸಹಾಯ ಮಾಡುವುದರೊಂದಿಗೆ ಬಡವರ ಕಣ್ಣೀರೊರಸುವ ಕಾರ್ಯ ನಡೆಸುತ್ತಿದ್ದು ಇದಕ್ಕೆ ದಾನಿಗಳ ಬೆಂಬಲವನ್ನು ಮರೆಯುವಂತಿಲ್ಲ ಎಂದರು.

ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅವರು ಉಪಸ್ಥಿತರಿದ್ದು ಮಾತನಾಡುತ್ತಾ, ಕಳೆದ 44 ವರ್ಷಗಳ ಬಳಿಕ ಕಾಪು ಕ್ಷೇತ್ರದಲ್ಲಿ ನಮ್ಮ ಸಮಾಜದಿಂದ ನನಗೆ ಶಾಸಕನಾಗುವ ಅವಕಾಶ ದೊರೆತಿರುವುದಕ್ಕೆ ಮುಂಬಯಿಗರಾದ ನಿಮ್ಮೆಲ್ಲರ ಕೊಡುಗೆ ಅಪಾರವಾಗಿದ್ದು, ಅದಕ್ಕಾಗಿ ತಡವಾದರೂ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವೆನು, ನಮ್ಮವರು ಇಲ್ಲಿ ಹಗಲಿರುಳು ಪರಿಶ್ರಮಪಟ್ಟು ದುಡಿದು ಇಂದು ಬಹಳ ಎತ್ತರದ ಮಟ್ಟಕ್ಕೆ ತಲುಪಿರುವುದರೊಂದಿಗೆ IAS  ನಂತಹ ಉನ್ನತ ಹುದ್ದೆಗಳಿಗೂ ಏರಲು ಸಾಧ್ಯವಾಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮುಂದಿನ ಪೀಳಿಗೆಗೆ ಹೆಚ್ಚಿನ ಪ್ರಯೋಜನವಾಗುವಂತೆ ನಮ್ಮ ಸಂಘಟನೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಕರೆ ನೀಡುತ್ತಾ,  ನಾಡಿನ ಧಾರ್ಮಿಕ ಕ್ಷೇತ್ರಗಳಿಗೆ ಮುಂಬಯಿಗರ  ಕೊಡುಗೆ ಅಪಾರ ಇದೆ ಎಂದರು.  ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾದೇಶಿಕ ಸಮಿತಿಯ ಎಲ್ಲಾ ಕಾರ್ಯಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೆರಂಬ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿ.ಎಂ.ಡಿ. ಡಾ. ಸದಾಶಿವ ಕೆ. ಶೆಟ್ಟಿ ಕೂಳೂರು ಕನ್ಯಾನ ಮಾತನಾಡುತ್ತಾ, ನಾನು ಈ ಪ್ರಾದೇಶಿಕ ಸಮಿತಿಗೆ ಒಳಪಟ್ಟವನಾಗಿದ್ದು ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನನಗೆ ತುಂಬಾ ಹತ್ತಿರದ ಸಂಮಂಧಿಕರಾಗಿದ್ದು ಇಂದು ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ನಮ್ಮದೇ ಕಾರ್ಯಕ್ರಮ ಅಂತ  ಇಂದಿಲ್ಲಿಗೆ ಬಂದಿರುವೆನು. ಇಲ್ಲಿ ಅನೇಕರಿಗೆ ಸನ್ಮಾನ ಮಾಡಿದ್ದು ಇಂತಹ ಸಮಾಜ ಪರ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರಲಿ ಎಂದರು.

ವಿಶೇಷ ಅತಿಥಿಯಾಗಿ ಆಗಮಿಸಿದ ರಾಜೇಶ್ ಪ್ರಸಾದ್, IAS ಮುಖ್ಯ ಕಾರ್ಯದರ್ಶಿ ಚಂದೀಗಡ ಅವರು ಮಾತನಾಡುತ್ತಾ ನನ್ನನ್ನು ಅಷ್ಟು ದೂರದಿಂದ ಪ್ರೀತಿ, ಗೌರವದಿಂದ ಕರೆಸಿ, ವಿಶೇಷವಾಗಿ ಸನ್ಮಾನಿಸಿದಕ್ಕೆ ಅಭಾರಿಯಾಗಿದ್ದೇನೆ ಹಾಗೂ ಪ್ರಾದೇಶಿಕ ಸಮಿತಿಯ ಹದಿನೆಂಟನೆಯ ವಾರ್ಷಿಕೋತ್ಸವಕ್ಕೆ ಬಾಗವಹಿಸಲು ಸಂತೋಷವಾಗುತ್ತಿದೆ. ಕೆಲವು ತಿಂಗಳ ಹಿಂದೆ ಚೆಂಬೂರಿನ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದೆ. ಇಂದಿನ ಚಟುವಟಿಕೆಗಳನ್ನು ನೋಡುವಾಗ ನಮ್ಮವರು ಎಲ್ಲಾ ಕ್ಶೇತ್ರದಲ್ಲಿದ್ದು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸ್ಲಾಘನೀಯ. ನಮ್ಮ ಬಂಟರ ಸಂಘದ ಜನ ಸೇವೆಯು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಿಮ್ಮ ಎಲ್ಲಾ ಕಾರ್ಯಚಟುವಟಿಕೆಗಳು ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಮಹಿಳಾ ವಿಬಾಗದ ಚಟುವಟಿಕೆಗಳ ಬಗ್ಗೆ ಕಾರ್ಯಾಧ್ಯಕ್ಷೆ  ಸುನೀತಾ ಎನ್  ಹೆಗ್ಡೆಯವರು ಮಾಹಿತಿಯಿತ್ತರೆ, ಯುವ ವಿಭಾಗದ ಚಟುವಟಿಕೆಗಳ ಬಗ್ಗೆ ಕಾರ್ಯಾಧ್ಯಕ್ಷ ಅಕ್ಷಜ್ ಆರ್ ಶೆಟ್ಟಿ ಮಾಹಿತಿಯಿತ್ತರು.

ವೇದಿಕೆಯಲ್ಲಿ  ರಘುರಾಮ ಶೆಟ್ಟಿ ಅವೆನ್ಯೂ, ರಾಜೇಶ್ ಪ್ರಸಾದ್, ಐ.ಎ.ಎಸ್. ಮುಖ್ಯ ಕಾರ್ಯದರ್ಶಿ ಚಂದೀಗಡ, ಡೆಪ್ಯೂಟಿ ಚೀಫ್ ಫಾಯರ್ ಆಪೀಸರ್ ಹರೀಶ್ಚಂದ್ರ ಶೆಟ್ಟಿ, ಪದ್ಮನಾಭ ಎಸ್. ಪಯ್ಯಡೆ, ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು  ಬಂಟರ ಸಂಘ ಮುಂಬಯಿಯ ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ  ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಯೋಜಕರಾದ ಭಾಸ್ಕರ್ ವೈ. ಶೆಟ್ಟಿ, ಖಾಂದೇಶ್,  ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ,  ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಹೆಚ್ ಶೆಟ್ಟಿ ,  ಹಿರಿಯ ಸಲಹೆಗಾರರಾದ ಮುಂಡಪ್ಪ ಯಸ್ ಪಯ್ಯಡೆ, ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ, ರವೀಂದ್ರ ಆರ್ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ  ಸುನೀತಾ ಎನ್  ಹೆಗ್ಡೆ, ಸಲಹೆಗಾರರಾದ ಶೈಲಜ ಎ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಯಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಯಸ್ ಶೆಟ್ಟಿ ಜೊತೆ ಕೋಶಾಧಿಕಾರಿ ಪ್ರಭಾವತಿ ಹೆಚ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ :

ನನ್ನನ್ನು ಇಂದು ಸನ್ಮಾನಿಸಿದಕ್ಕೆ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿ ಮತ್ತವರ ತಂಡಕ್ಕೆ ಕೃತಜ್ನತೆ ಸಲ್ಲಿಸುತ್ತಿರುವೆನು.  ಕಳೆದ 15 ವರ್ಷಗಳಲ್ಲಿ ಹೊರನಾಡಿನ ಕನ್ನಡಿಗರಲ್ಲಿ ನಮ್ಮ ಸಂಘದ 7 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದರಿಂದ ನಮ್ಮವರು ಎಷ್ಟು ಪ್ರತಿಭಾವಂತರು ಹಾಗೂ ಕ್ರೀಯಾಶೀಲರು ಅಂತ ತಿಳಿಯಬಹುದಾಗಿದೆ. ನಾನು ಈ ಮಟ್ಟಕ್ಕೆ ಬರಲು ನನ್ನ ಹೆತ್ತವರು, ಸಹೋದರರು, ಪಯ್ಯಡೆ ಕುಟುಂಬ ಇವರ ಪ್ರೋತ್ಸಾಹ ಕಾರಣ. ಕ್ರಿಕೆಟ್ ನಲ್ಲಿ ನನಗೆ ಶರತ್ ಪವಾರ್ ಅವರ ಸಹಾಯ ಅಲ್ಲದೆ ಬಂಟರ ಸಂಘದಲ್ಲಿ ಹಿರಿಯರ ಮಾರ್ಗದರ್ಶನ ನನ್ನ ಯಶಸ್ಸಿಗೆ ಕಾರಣ, ನನಗೆ ಇಂದು ಆಶ್ರೀರ್ವದಿಸಿದ ಎಲ್ಲರಿಗೂ ಅಬಾರಿಯಾಗಿದ್ದೇನೆ ಎಂದು 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ,  ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರೂ ಆದ ಡಾ. ಪಿ. ವಿ. ಶೆಟ್ಟಿ ನುಡಿದರು.

ಜೋಗೇಶ್ವರಿ–ದಹಿಸರ್ ಪ್ರದೇಶದ ಸಮಿತಿಯ ಸಾಧಕರದ, ಹಿರಿಯ ಹೋಟೇಲು ಉಧ್ಯಮಿ ಗೋರೆಗಾಂವ್ ಫಿಲ್ಮಿಸ್ತಾನ್ ಸ್ಟುಡಿಯೋ ಕ್ಯಾಂಟೀನ್‌ನ ವಿಠಲ್ ಎಸ್. ಶೆಟ್ಟಿ,  ವ್ಯವಹಾರ ಕ್ಷೇತ್ರದಲ್ಲಿ ದಹಿಸರ್‌ನ ರಾಘವೇಂದ್ರ ಸ್ಟೋರ್ಸ್‌ನ ಶಿವರಾಮ್ ಎನ್. ಶೆಟ್ಟಿ ಹಾಗೂ ಹನುಮಾನ್ ಜನರಲ್ ಸ್ಟೋರ್‌ನ ವಸಂತ್ ಎಲ್. ಶೆಟ್ಟಿ, ಬೊರಿವಲಿಯ ಮಹಾನ್ಯ ಕ್ಲಿನಿಕ್‌ನ ಡಾ. ಗುರುಪ್ರಸಾದ್ ಶೆಟ್ಟಿ, ಯಕ್ಷಗಾನ ಕಲಾವಿದ ಹಾಗೂ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಕ್ರೀಡಾ ಕ್ಷೇತ್ರದ ದಹಿಸರ್‌ನ ಹೋಟೆಲ್ ದಯಾನಂದ್ ಮತ್ತು ಎನ್.ಎಲ್. ಸ್ಪೋರ್ಟ್ಸ್ ಕ್ಲಬ್‌ನ ದಯಾನಂದ ಕೆ. ಶೆಟ್ಟಿ,  ಸಾಹಿತ್ಯ ಕ್ಷೇತ್ರದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಉಷಾ ಶೆಟ್ಟಿ ,  ಮಾಜಿ ನಗರ ಸೇವಕ  ಹಾಗೂ ಸಮಾಜ ಸೇವಕ ಶಿವಾನಂದ ಶೆಟ್ಟಿ ಮತ್ತು ಖ್ಯಾತ ಗೋಲ್ ಕೀಪರ್ ಶಿವಿಕಾ ಶೆಟ್ಟಿ, ಆಹಾರ್ ನ ನೂತನ ಅಧ್ಯಕ್ಷ ವಿಜಯ್ ಶೆಟ್ಟಿ, ಪ್ರದೇಶದ ಸಮಿತಿಯ ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ  ಇವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಬೊರಿವಲಿಯ ಮಹಾನ್ಯ ಕ್ಲಿನಿಕ್‌ನ ಇ.ಎನ್. ಟಿ. ತಜ್ಞರಾದ ಡಾ. ಗುರುಪ್ರಸಾದ್ ಶೆಟ್ಟಿ ಇಂದಿನ ಸಭೆಯನ್ನು ಹಾಗೂ ವೇದಿಕೆಯನ್ನು ನೋಡುವಾಗ ತುಳು ನಾಡಿನ ಭವಿಷ್ಯ ಸುರಕ್ಷಿತವಾಗಿದೆ ಎಂದೆನಿಸುತ್ತಿದೆ. ಇಂದು ತುಳು ನಾಡಿನ ಗಣ್ಯಾತಿಗಣ್ಯರು ವೇದಿಕೆಯಲ್ಲಿದ್ದು ಇವರಿಂದ ಸನ್ಮಾನ ಸ್ವೀಕರಿಸುವುದೇ ದೊಡ್ಡ ಸಾಧನೆ ಎಂದರು.  ಖ್ಯಾತ ಗೋಲ್ ಕೀಪರ್ ಶಿವಿಕಾ ಶೆಟ್ಟಿ ಯವರು ಮಾತನಾಡಿ ಸನ್ಮಾನಕ್ಕೆ ಅಬಾರ ಮನ್ನಿಸಿದರು.

ಬಂಟರ ಸಂಘ, ಮುಂಬಯಿ ಜೋಗೇಶ್ವರಿ–ದಹಿಸರ್ ಪ್ರಾದೇಶಿಕ ಸಮಿತಿ, ಮಾಜಿ ಕಾರ್ಯಾಧ್ಯಕ್ಷ ಹಾಗೂ ಬಂಟರ ಸಂಘ, ಮುಂಬಯಿಯ ಮಾಜಿ ಅಧ್ಯಕ್ಷ  ಪದ್ಮನಾಭ ಎಸ್. ಪಯ್ಯಡೆ, ಎನ್. ನಿತ್ಯಾನಂದ ಹೆಗ್ಡೆ,  ಮುಂಡಪ್ಪ ಎಸ್. ಪಯ್ಯಡೆ,  ವಿಜಯ್ ಆರ್. ಭಂಡಾರಿ, ರವೀಂದ್ರ ಎಸ್. ಶೆಟ್ಟಿ,  ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ , ಶ್ರೀಮತಿ ಚಂದ್ರಿಕಾ ಶೆಟ್ಟಿ, ಶ್ರೀಮತಿ ಪದ್ಮಾವತಿ ಬಿ. ಶೆಟ್ಟಿ, ಶ್ರೀಮತಿ ವಿನೋದಾ ಡಿ. ಶೆಟ್ಟಿ, ಶ್ರೀಮತಿ ವಿನೋದಾ ಎ. ಶೆಟ್ಟಿ ಹಾಗೂ ಶ್ರೀಮತಿ ಶೈಲಜಾ ಎ. ಶೆಟ್ಟಿ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ  ರವೀಂದ್ರ ಎಸ್. ಶೆಟ್ಟಿ, ಪ್ರದೀಪ್ ಎಸ್. ಶೆಟ್ಟಿ, ವಿಕಾಸ್ ಎಸ್. ಶೆಟ್ಟಿ, ಪ್ರವೀಣ್ ಆರ್. ಶೆಟ್ಟಿ, ಸಂಕೇಶ್ ಎಸ್. ಶೆಟ್ಟಿ ಮತ್ತು ಧೀರಜ್ ಡಿ. ರೈ  ಇವರನ್ನು ಗೌರವಿಸಲಾಯಿತು.

ಪ್ರಾದೇಶಿಕ ಸಮಿತಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ ಕೊಂಡಾಡಿ ಪರಿವಾರ ಮತ್ತು ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ  ಸುನೀತಾ ಎನ್  ಹೆಗ್ಡೆ ದಂಪತಿಯನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ವೈವಾಹಿಕ ಜೀವನದ ಐವತ್ತು ಸಂವತ್ಸವರನ್ನು ಪೂರೈಸಿದ ಖ್ಯಾತ ಹೋಟೇಲು ಉಧ್ಯಮಿ ಕೃಷ್ಣ ವೈ ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿಯನ್ನು, ಅವೆನ್ಯೂ ಹೋಟೇಲಿನ, ರಘುರಾಮ ಶೆಟ್ಟಿ, ಡೆಪ್ಯೂಟಿ ಚೀಫ್ ಫಾಯರ್ ಆಪೀಸರ್ ಹರೀಶ್ಚಂದ್ರ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. 

ಸಮಿತಿಯ ವಿವಿಧ ಉಪ ಸಮಿತಿಗಳ ಕಾರ್ಯಧ್ಯಕ್ಷರುಗಳಾದ ಹರೀಶ್ ಜಿ ಶೆಟ್ಟಿ (ಶಿಕ್ಷಣ ಹಾಗೂ ಸಮಾಜ ಕಲ್ಯಾಣ), ಪ್ರವೀಣ್ ಜೆ ಶೆಟ್ಟಿ (ಸದಸ್ಯತ್ವ ಅಭಿಯಾನ),ಧೀರಜ್ ಡಿ ರೈ (ಕ್ರೀಡೆ),ಶ್ರೀಮತಿ ಗೀತ ಎಸ್  ಶೆಟ್ಟಿ (ಸಾಂಸ್ಕೃತಿಕ),ರಾಜಶೇಖರ್ ಶೆಟ್ಟಿ (ವೈದ್ಯಕೀಯ),ಪ್ರಜ್ವಲ್ ಬಿ ಶೆಟ್ಟಿ (ಮಾಹಿತಿ ಮತ್ತು ತಂತ್ರಜ್ಞಾನ),ಶ್ರೀಮತಿ ವಿದ್ಯಾ ಆರ್ ಶೆಟ್ಟಿ (ವಿವಾಹ ಮಾಹಿತಿ),ಸುನಿಲ್ ಜಿ ಶೆಟ್ಟಿ(ಇ -ಉದ್ಯೋಗ),  “ಇಂಚರ” ಭಜನಾ ತಂಡದ ಸಂಚಾಲಕಿ  ರಜನಿ ಆರ್ ಶೆಟ್ಟಿ ಮತ್ತು ಶೋಭಾ ಎಸ್ ಶೆಟ್ಟಿ, ಶಿಕ್ಷಕಿ ಸಹನಾ ಡಿ ಶೆಟ್ಟಿ ಮತ್ತು  ಮೋಹಿನಿ ಪಿ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಶ್ರೀಮತಿ ಚಂದ್ರಿಕಾ ಶೆಟ್ಟಿ, ಪದ್ಮಾವತಿ ಶೆಟ್ಟಿ, ವಿನೋದ ಡಿ ಶೆಟ್ಟಿ , ವಿನೋದ ಎ ಶೆಟ್ಟಿ, ಸುಲತಾ ಶೆಟ್ಟಿ, ಉಷಾ ಶೆಟ್ಟಿ, ಶಶಿಕಲಾ ಎ ಮಾಡ, ಪ್ರಾದೇಶಿಕ ಸಮಿತಿಯ ಯವ ವಿಭಾಗದ , ಕಾರ್ಯದರ್ಶಿ  ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ವಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಹಾಗೂ ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ, ಮೊದಲಾದವರು ಸಹಕರಿಸಿದರು.

ಬಂಟರ ಸಂಘ ಮುಂಬಯಿಯ ಎಲ್ಲಾ ಉಪಸಮಿತಿಗಳ ಹಾಗೂ ಪ್ರಾದೇಶಿಕ ಸಮಿತಿಗಳ ಹಾಗೂ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳು ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಶೈಲಜ ಎ ಶೆಟ್ಟಿ ಯವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

 ಪ್ರಾದೇಶಿಕ ಸಮಿತಿಯ ಹಾಗೂ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಟಾಂಡ್ ಆಫ್ ಕಾಮಿಡಿ ಖ್ಯಾತಿಯ ನಿತೇಶ್ ಶೆಟ್ಟಿಯವರಿಂದ ಹಾಸ್ಯ ಚಟಾಕಿ ನಡೆಯಿತು.

ಅದಿತ್ ಶೆಟ್ಟಿ, ದೀಪಶ್ರೀ ರೈ ಕಾರ್ತಿಕ್ ಕೃಷ್ಣ ಶೆಟ್ಟಿ  ಮತ್ತು  ಅಂಜನಾ ಮಹೇಶ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕೊರಿಯೋಗ್ರಾಫರ್ ಶುಭಾ ಶೆಟ್ಟಿ, ಉಮೇಶ್ ದೇಸಾಯಿ, ಗೌರಿಪ್ರಸಾದ್ ಶೆಟ್ಟಿ, ರಾಖಿ ಸಾಲ್ಯಾನ್ ಮತ್ತು ಮಹೇಶ್ ಸಹಕರಿಸಿದರು.

ಕಾರ್ಯಕ್ರಮ ಸಮಿತಿಯ ಪ್ರಮುಖರಾದ ಅಶೋಕ್ ವಿ. ಶೆಟ್ಟಿ , ರಘುನಾಥ್ ಎನ್. ಶೆಟ್ಟಿ, ಅಶೋಕ ಪಕ್ಕಳ  ಮತ್ತು ಮೊಹನ್ ರೈ ಕರ್ನೂರು ಸಭಾಕಾರ್ಯಕ್ರಮವನ್ನು ನಿರ್ವಹಿಸಿದರು.

ಗಣ್ಯರ ನುಡಿ :

ತಾಯಿಗೆ ಸಮಾನವಾದ ಬಂಟರ ಸಂಘಕ್ಕಾಗಿ ನಾವು ಹಿಂದಿನಂತೆ ಮುಂದೆಯೂ ಕ್ರೀಯಾಶೀಲರಾಗಿದ್ದೇವೆ. ನಮ್ಮ ಶಿಕ್ಷಣ ಸಂಸ್ಥೆಗೆ  ನಮ್ಮಿಂದಾಗುವ ಕಾರ್ಯ ಮಾಡುತ್ತಾ ಬಂದಿರುತ್ತೇವೆ. ನಮ್ಮವರಿಗೆ ದೇವರು ಎಲ್ಲವನ್ನೂ ನೀಡಿದ್ದು ಅದನ್ನು ಉತ್ತಮ ಕಾರ್ಯಕ್ಕಾಗಿ ಉಪಯೋಸಿಸೋಣ. ಆದರ್ಶ ವ್ಯಕ್ತಿತ್ವ ಶ್ರೀಮಂತ ವ್ಯಕ್ತಿತ್ವವಾಗಿದೆ.

– ಮುಂಡಪ್ಪ ಎಸ್. ಪಯ್ಯಡೆ,  ಪ್ರಾದೇಶಿಕ ಸಮಿತಿಯ ಹಿರಿಯ ಸಲಹೆಗಾರರು

@@@@@

ಬಂಟರ ಸಂಘ, ಮುಂಬಯಿ ಜೋಗೇಶ್ವರಿ–ದಹಿಸರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಕರ್ತರೆಲ್ಲರೂ ಹಿಂದಿನಂತೆ ಈಗಲೂ ಸಮಿತಿಯ ಈಗಿನ ಸದಸ್ಯರೊಂದಿಗೆ ಅದೇ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ. ನಮ್ಮ ಹಿರಿಯರು ಬಹಳ ಪರಿಶ್ರಮ ಪಟ್ಟು ಸ್ಥಾಪಿಸಿದ ನಮ್ಮ ಸಂಘ. ಅನುಕೂಲ ಇದ್ದವರಿಂದ ತೆಗೆದು ಕಷ್ಟದಲ್ಲಿರುವವರಿಗೆ ನೀಡಿ ಸಹಕರಿಸುವ ಕಾರ್ಯ ನಮ್ಮ ಹಿರಿಯರ ಸಮಯದಿಂದಲೇ ನಡೆಯುತ್ತಾ ಬಂದಿದೆ. ನಮ್ಮ ಪರಿಸರದಲ್ಲಿ ಶಿಕ್ಷಣ ಸಂಸ್ಥೆಯಾಗಬೇಕೆಂಬ ನಮ್ಮ ಕನಸು ಇಂದು ನೆನಸಾಗಿದೆ.

-ಪದ್ಮನಾಭ ಎಸ್. ಪಯ್ಯಡೆ, ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು 

@@@@@@

ಬೊರಿವಲಿ ಶಿಕ್ಷಣ ಸಂಸ್ಥೆಯಲ್ಲಿ ಉಪಕಾರ್ಯಾಧ್ಯಕ್ಷನಾಗಿದ್ದು ಹಿಂದೆಯೂ ಯಾವುದೇ ಅಧಿಕಾರದಲ್ಲಿರದೆ ಸಂಘದ ಏಳಿಗೆಗಾಗಿ ನನ್ನಿಂದಾಗುವ ಕೆಲಸ ಮಾಡಿರುವೆನು. ಮುಂದೆಯೂ ಸಂಘಕ್ಕೆ ಯಾವುದೇ ಮಾರಕವಾಗದಂತೆ ಎಲ್ಲರೂ ಸೇರಿ ಸಂಘವನ್ನು ಮುನ್ನಡೆಸೋಣ. ಸಂಘವು  ಸೂಕ್ತ ಬದಲಾವಣೆಯೊಂದಿಗೆ ಉತ್ತಮವಾಗಿ ನಡೆಯುತ್ತಿದೆ. ನೂರು ವರ್ಷಗಳಿಂದ ಅನೇಕರು ಅಧ್ಯಕ್ಷರಾಗಿದ್ದಾರೆ, ಇನ್ನು ಮುಂದೆಯೂ ಅದೇ ರೀತಿ ಬದಲಾವಣೆಯೊಂದಿಗೆ ಸಂಘದ ಅಭಿವೃದ್ದಿಗೆ ಪೂರಕವಾಗಿ ನಡೆಯುತ್ತದೆ.

ಎರ್ಮಾಳ್ ಹರೀಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಲಹೆಗಾರರು

@@@@@

ಬಂಟರ ಸಂಘ, ಮುಂಬಯಿಯ ಎಲ್ಲಾ 9 ಪ್ರಾದೇಶಿಕ ಸಮಿತಿಗಳು ನವರತ್ನವಾದರೆ ಅದರಲ್ಲಿ ಅಮೂಲ್ಯ ವಾದ ರತ್ನ ಜೋಗೇಶ್ವರಿ–ದಹಿಸರ್ ಪ್ರಾದೇಶಿಕ ಸಮಿತಿ. ಈ  ಪ್ರಾದೇಶಿಕ ಸಮಿತಿಯು ಸದೃಡ ಸಮಿತಿಯಾಗಿದೆ. ಇದರ ಈಗಿನ ಕಾರ್ಯಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ನನ್ನ ಆತ್ಮೀಯರಾಗಿದ್ದು ಅವರ ತಂಡದೊಂದಿಗೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಕಾರ್ಯ ಸ್ಲಾಘಾನೀಯ.

ಭಾಸ್ಕರ್ ವೈ. ಶೆಟ್ಟಿ, ಖಾಂದೇಶ್, ಪಶ್ಚಿಮ ಉಪನಗರದ ಪ್ರಾದೇಶಿಕ ಸಮಿತಿಗಳ  ಸಂಯೋಜಕರು.

ವರದಿ : ಈಶ್ವರ ಎಂ ಐಲ್



Related posts

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಕಾಪು ಮೊಗವೀರ ಮಹಾ ಸಭಾ ಹಾಗೂ ಮಹಿಳಾ ಮಂಡಳಿ ಇದರ ಮುಂಬಯಿ ಶಾಖೆವತಿಯಿಂದ “ ಆಟಿದ ಒಂಜಿ ಕೂಟ” , “ಅಭಿನಂದನಾ ಕಾರ್ಯಕ್ರಮ”

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧೀಶ ಧನಂಜಯ ಪೂಜಾರಿಗೆ ಶೇ 89.20 ಅಂಕ.

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಪನ್ನ

Mumbai News Desk