
ಡೊಂಬಿವಲಿ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ದಶಮಾನೋತ್ಸವ ವರ್ಷದ ಸಂಭ್ರಮದ ಸಮಾರೋಪ ಸಮಾರಂಭ ‘ಕುಂದರಂಜನಿ-2026’ ಮಾಚ್ 1ರ ಭಾನುವಾರ ಸಂಜೆ 4 ಗಂಟೆಗೆ ಇಲ್ಲಿನ ನಾಂದಿವಲಿ, ಭೋಪಾರ್ ರಸ್ತೆಯ ಶ್ರೀ ವರದ ಸಿದ್ಧಿವಿನಾಯಕ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸಂಘದ ಬಗ್ವಾಡಿ ಹೋಬಳಿ ಮುಂಬಯಿ ಘಟಕದ ಗೌರವಾನ್ವಿತ ಅಧ್ಯಕ್ಷ ಸುರೇಶ್ ಆರ್. ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಗ್ವಾಡಿ ಹೋಬಳಿ ಮುಂಬಯಿ ಘಟಕದ ಅಧ್ಯಕ್ಷ ಸಂತೋಷ್ ಕೆ. ಪುತ್ರನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ, ಬಗ್ವಾಡಿ ಹೋಬಳಿ ಮುಂಬಯಿ ಘಟಕದ ಉಪಾಧ್ಯಕ್ಷರುಗಳಾದ ಮಹಾಬಲ ಎಂ. ಕುಂದರ್ ಹಾಗೂ ರಮೇಶ್ ಬಂಗೇರ, ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಆನಂದ ಡಿ. ಶೆಟ್ಟಿ ಎಕ್ಕಾರು, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಗೌರವ ಕೋಶಾಧಿಕಾರಿ ರವಿ ಎಸ್. ಸನಿಲ್, ಯಶೋದೇವ್ ಫೌಂಡೇಶನ್ ಸಂಸ್ಥಾಪಕ ಪ್ರಾಜ್ವಲ್ ದೇವದಾಸ್ ಸಾಲ್ಯಾನ್, ಸಂಘದ ಮಾಜಿ ಅಧ್ಯಕ್ಷರುಗಳಾದ ರಾಜು ಮೆಂಡನ್ ವಂಡ್ರೆ ಹಾಗೂ ಗೋಪಾಲ ಎಸ್. ಪುತ್ರನ್ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ವೈಭವ:
ಸಮಾರೋಪದ ಅಂಗವಾಗಿ ಪೂಜಾ ನೃತ್ಯ ಹಾಗೂ ಸಮೂಹ ನೃತ್ಯಗಳು ಜರುಗಲಿವೆ. ವಿಶೇಷ ಆಕರ್ಷಣೆಯಾಗಿ ಕಲಾಚಿಗುರು ಕಲಾತಂಡ ಚೇತನ ನೈಲಾಡಿ ಮತ್ತು ಬಳಗದಿಂದ ‘ಹೆಂಗ್ಸ್ರ ಪಂಚೇತಿ’ ಎಂಬ ಹಾಸ್ಯ ರಸಾಯನ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಸಮಾಜ ಬಾಂಧವರು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ನಾಗರಾಜ ಶ್ರೀಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ನಾಯ್ಕ, ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎನ್. ಕಾಂಚನ್, ಕಾರ್ಯಾಧ್ಯಕ್ಷ ರಾಜು ಎ. ಮೊಗವೀರ, ಕಾರ್ಯದರ್ಶಿ ಸಂತೋಷ್ ಬಿ. ಪುತ್ರನ್, ಕೋಶಾಧಿಕಾರಿ ಶೇಖರ್ ಎಸ್. ನಾಯ್ಕ, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ್ ಟಿ. ನಾಯ್ಕ ಬಗ್ವಾಡಿ ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.




