ಲೇಖನ: ಜಯ ಸಿ ಪೂಜಾರಿ ಕೆಳಾರ್ಕಳ ಬೆಟ್ಟು.
ಸರಿ ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆ ಮುಂಬಯಿಯ ಕನ್ನಡ ರಾತ್ರಿ ಶಾಲೆಗಳಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಿಗೆ ನನ್ನದೊಂದು ಕಿವಿಮಾತು.
ಮುಂಬಯಿಯಲ್ಲಿ ಐವತ್ತು ಅರವತ್ತು ವರ್ಷಗಳ ಹಿಂದೆ ಕನ್ನಡ ರಾತ್ರಿ ಶಾಲೆಯಲ್ಲಿ ನೀವು ವಿದ್ಯಾಬ್ಬ್ಯಾಸ ಮಾಡಿದ್ದರೆ ನೀವು ಕಲಿತ ಶಾಲೆಯಲ್ಲಿ ನಿಮ್ಮ ಅಂತಿಮ ಶಾಲೆಯಾಗಿ ಶಾಲೆ ಬಿಟ್ಟ ನಂತರ ನಿಮ್ಮ ಶಾಲೆಯ ಪ್ರಮಾಣ ಪತ್ರ ತೆಗೆದಿಟ್ಟು ಭದ್ರತೆ ಯಾಗಿರಲಿ.
ಯಾಕಂದರೆ ಇನ್ನು ಬರುವ ದಿನಗಳಲ್ಲಿ ಮುಂಬಯಿಯಲ್ಲಿ ಕನ್ನಡ ರಾತ್ರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಲ್ಲಿ ಶಾಲೆಗಳು ಇರುತ್ತವೋ ಇಲ್ಲವೋ ಎಂದು ಹೇಳ ತೀರದು. ಮುಂದೊಂದು ದಿನ ನಿಮಗೆ ಶಾಲೆಯ ಪ್ರಮಾಣ ಪತ್ರ ಅಗತ್ಯ ಬಿದ್ದಲ್ಲಿ ಏನು ಮಾಡುತ್ತೀರಿ ಅಲ್ಲಿ ಇಲ್ಲಿ ಅಲೆದಾಡಿ ಸುಸ್ತಾಗುತ್ತೀರಿ.
ಯಾಕಂದರೆ ಕಾನೂನುಗಳು ಬದಲಾಗ್ತಾತಾ ಇರುತ್ತವೆ. ನೀವು ಕಲ್ಪನೆ ಮಾಡಿ ಕೊಳ್ಳಿ ಒಂದು ದಿನ ಏಕಾ ಏಕಿ ನಿಮ್ಮ ಮನೆಯ ಬಾಗಿಲಿಗೆ ಒಬ್ಬ ಸರಕಾರಿ ಅಧಿಕಾರಿ ಬರುತ್ತಾನೆ. ಗಂಭೀರ ಮುಖದಲ್ಲಿ ನಿಂತು ನಿಮ್ಮ ಭಾರತೀಯ ನಾಗರಿಕ ಪುರಾವೆ ತೋರಿಸಿ ಎಂದು ಎಂದು ಕೇಳುತ್ತಾನೆ. ಆ ಕ್ಷಣದಲ್ಲಿ ನಿಮ್ಮ ಮನಸ್ಸು ಗೊಂದಲದಿಂದ ತುಂಬುತ್ತದೆ. ತಕ್ಷಣ ನೀವು ಆಧಾರ್ ಕಾರ್ಡ್, ಓಟರ್ ಐಡಿ, ಪಾನ್ ಕಾರ್ಡ್, ಪಾಸ್ಪೋರ್ಟ್ ಎಲ್ಲಾ ನೀವು ತಂದು ಅವನ ಮುಂದೆ ಇಡುತ್ತೀರಿ. ಆದರೆ ಆ ಅಧಿಕಾರಿ ಶಾಂತ ರೀತಿ ಹೇಳುವ ಒಂದೇ ಮಾತು. ನಿಮ್ಮ ಒಳಗೆ ಭೂಕಂಪವಾಗುವ ಮನಸ್ಸು ಉಂಟು ಮಾಡುತ್ತದೆ.
ಏನಂದರೆ ಇದು ನಿಮ್ಮ ಗುರುತಿನ ಪತ್ರ ಭಾರತೀಯ ನಾಗರೀಕತ್ವದ ಅಂತಿಮ ಪುರಾವೆ ಅಲ್ಲ. ಈ ಮಾತು ಕೇಳುತ್ತಲೇ ನಮ್ಮ ಮನಸ್ಸಿನಲ್ಲೆ ಒಂದು ಪ್ರಶ್ನೆ ಉದ್ಭವಿಸುತ್ತದೆ. ನಾವು ಜೀವನ ಪೂರ್ತಿ ನಂಬಿಕೊಂಡು ಬಂದ ದಾಖಲೆಗಳೇ ಅಂತಿಮ ಅಲ್ಲ ಅಂದರೆ ನಿಜವಾದ ನಾಗರೀಕತ್ವದ ಸತ್ಯ ಏನು?
ಈ ಪ್ರಶ್ನೆಗೆ ಉತ್ತರ ತಿಳಿದು ಕೊಳ್ಳುವುದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಅಗತ್ಯವಾಗಿರುತ್ತದೆ.
ನಾವು ಪ್ರತಿ ನಿತ್ಯ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ದಾಖಲೆಗಳು ಈ ವ್ಯಕ್ತಿ ಯಾರು ಎಂಬುದು ಗುರುತಿಸಲು ಸಹಾಯ ಮಾಡುತ್ತದೆ. ಆದರೆ ನೀವು ಈ ದೇಶದ ನಾಗರೀಕನೇ ಅಲ್ಲವೇ ಎಂಬುದು ಕಾನೂನಾತ್ಮಕ ತೀರ್ಮಾನಿಸುವ ಶಕ್ತಿ ಎಲ್ಲಾ ದಾಖಲೆಗಳಲ್ಲಿ ಇಲ್ಲ.
ಇಲ್ಲಿಯ ಬಹುತೇಕ ಜನರು ಮಾಡುವ ದೊಡ್ಡ ತಪ್ಪು ಪ್ರಾರಂಭವಾಗುತ್ತದೆ. ಗುರುತು ಮತ್ತು ನಾಗರೀಕತ್ವ ಅಲ್ಲಿ ಗುರುತು ಅಂದರೆ ನೀವು ಯಾರು ಎಂಬುದು ಪುರಾವೆ. ನಾಗರೀಕತ್ವ ಅಂದರೆ ನೀವು ಒಂದು ದೇಶದೊಂದಿಗೆ ಹೊಂದುವ ಸಂಬಂಧ.
ಮೊದಲು ಆಧಾರ್ ಕಾರ್ಡ್ ಬಗ್ಗೆ ಮಾತಾಡುವ. ಇಂದಿನ ಆಧಾರ್ ಕಾರ್ಡ್ ನಲ್ಲಿ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಸರ್ಕಾರಿ ಯೋಜನೆಗಳು ಎಲ್ಲವೂ ಆಧಾರಕ್ಕೆ ಜೋಡಿಸುವುದರಿಂದ ಜನರಿಗೆ ಎಲ್ಲವೂ ಇದು ಅಗತ್ಯ ದಾಖಲೆಗಳು ಎಂಬುದು ಭ್ರಮೆ ಮೂಡಿದೆ.
ಕಾನೂನು ದೃಷ್ಟಿಯಿಂದ ಆಧಾರ್ ಎಂದಿಗೂ ನಾಗರೀಕತ್ವದ ಪುರಾವೆ ಆಗುವುದಿಲ್ಲ ಸುಪ್ರೀಂ ಕೋರ್ಟು ಈ ದಾಖಲೆಗಳನ್ನು ಹಲವು ಬಾರಿ ಸ್ಪಷ್ಟವಾಗಿ ಹೇಳಿರ ಬಹುದು.
ಆಧಾರ್ ಕಾಯಿದೆಯಲ್ಲೇ ಇದನ್ನು ನಿವಾಸಿಗಳಿಗಾಗಿ ಗುರುತು ಎಂದು ರಚಿಸಲಾಗಿದೆ. ಅಂದರೆ ಭಾರತೀಯ ನಾಗರಿಕರಿಗೆ ಮಾತ್ರ ಅಲ್ಲ ನಿರ್ದಿಷ್ಟ ಅವಧಿಯಲ್ಲಿ ಭಾರತದಲ್ಲಿ ವಾಸಿಸುವ ವಿದೇಶಿಗನಿಗೂ ಆಧಾರ್ ಸಿಗಬಹುದು ಹೀಗಿರುವಾಗ ಅದು ನಾಗರಿಕತ್ವದ ಅಂತಿಮ ಪುರಾವೆ ಯಾಗುವುದು ಹೇಗೆ ? ಅದೇ ರೀತಿ ಜನರು ಮುಂದಿನ ಆಶ್ರಯವಾಗಿ ಓಟರ್ ಐಡಿಯನ್ನು ಮುಂದಿನ ಪುರಾವೆಯೆಂದು ಮುಂದಿಡುತ್ತಾರೆ.
ನಾನು ಮತ ಹಾಕುತ್ತೇನೆ ಎಂದರೆ ನಾನು ಈ ಭಾರತ ದೇಶದ ನಾಗರೀಕನೇ ಎಂದು ಸತ್ಯ ಇದು ಕೂಡ ಸಹಜ. ಒಟರ್ ಐಡಿ ಒಂದು ಬಲಿಷ್ಠ ಸೂಚಕ ಆದರೆ ಕಾನೂನಿನ ದೃಷ್ಟಿಯಲ್ಲಿ ಅದು ಕೂಡ ಅಂತಿಮ ಪುರಾವೆಯಲ್ಲ. ಮತದಾರರ ಪಟ್ಟಿಗಳಲ್ಲೂ ತಪ್ಪುಗಳು ಇರಲು ಎಂಬ ಸಾಧ್ಯ ಇದೆ. ಎಂದು ಕಾನೂನು ಒಪ್ಪಿಕೊಂಡಿದೆ. ಕೇವಲ ಒಟರ್ ಐಡಿ ತೋರಿಸುವುದರಿಂದ ನಾಗರೀಕತ್ವದ ವಿಚಾರ ಅಂತಿಮವಾಗುವುದಿಲ್ಲ. ಅದೇ ರೀತಿ ಇನ್ನು ಹೆಚ್ಚಿನ ಜನರು ನಂಬುವುದು ಪಾಸ್ಪೋರ್ಟ್ ನ್ನು . ಪೊಲೀಸ್ ಪರಿಶೀಲನೆ ಸರಕಾರಿ ದ್ರಡಿ ಕರಣ ಹಲವು ಸಲಕರಣೆ ಹಲವು ಹಂತದ ತಪಾಸಣೆ ಕೂಡ ಎಲ್ಲಾ ಈ ಸಲಕರಣೆ ಎಂದು ಜನರು ಬಾವಿಸುತ್ತಾರೆ. ಆದರೆ ಇಲ್ಲಿ ಕಾನೂನು ಎಚ್ಚರಿಕೆಯಿಂದ ನಡೆದುಕೊಳ್ಳುತ್ತದೆ. ನ್ಯಾಯಾಲಯಗಳ ಪ್ರಕಾರ ಪಾಸ್ಪೋರ್ಟ್ ನಾಗರೀಕತ್ವದ ಪ್ರಾಥಮಿಕ ಸಾಕ್ಷಿ ಮಾತ್ರ. ಅಂದರೆ ಅದು ಮೊದಲ ದೃಷ್ಟಿಗೆ ಅದು ಸತ್ಯವೆಂದು ಒಪ್ಪಿಕೊಳ್ಳಬಹುದು. ಆದರೆ ತಪ್ಪು ಮಾಹಿತಿ ವಂಚನೆಯ ಆದಾರದಲ್ಲಿ ಪಾಸ್ಪೋರ್ಟ್ ಪಡೆಯಲಾಗಿದೆ ಎಂದು ಸಾಬೀತಾದರೆ ಅದರ ಮಾನ್ಯತೆ ರದ್ದಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ದೊಡ್ಡ ಪ್ರಶ್ನೆ ಉಳಿಯುತ್ತದೆ.
ಆಧಾರ್ ಅಲ್ಲ ಒಟರ್ ಐಡಿ ಅಲ್ಲ ಪಾಸ್ಪೋರ್ಟ್ ಕೂಡ ಅಲ್ಲ ಅಂದರೆ ನಿಜವಾಗಿಯೂ ಯಾವ ದಾಖಲೆಗಳಿಗೆ ಕಾನೂನಿನಲ್ಲಿ ಅತ್ಯುನ್ನತ ಸ್ಥಾನ ಇದೆ.
ಇಲ್ಲಿಂದ ವಿಷಯ ಗಂಭೀರವಾಗುತ್ತದೆ. ಕಾನೂನು ಅಂತಿಮ ವಿಶ್ವಾಸ ಇಡುವುದು ಮೂಲಭೂತ ದಾಖಲೆಗಳಿಗೆ ಮಾತ್ರ.
ಅದರಲ್ಲಿ ಮೊದಲ ಸ್ಥಾನ ಬರುವುದು ಜನ್ಮ ಪ್ರಮಾಣ ಪತ್ರ. ಸರಿಯಾದ ಪ್ರಾಧಿಕಾರದಿಂದ ನೀಡಲ್ಪಟ್ಟ ಜನ್ಮ ಪ್ರಮಾಣ ಪತ್ರ ಇದ್ದರೆ ವಿಶೇಷವಾಗಿ ಜನ್ಮದಿಂದ ನಾಗರಿಕತ್ವ ಪಡೆದವರ ವಿಷಯದಲ್ಲಿ ಅದೇ ನಿರ್ಣಾಯಕ ಪುರಾವೆ . ಕೆಲವು ಸಂಧರ್ಭಗಳಲ್ಲಿ ಶಾಲಾ ದಾಖಲೆಗಳು ಖಾಸಗಿ ಶಾಲೆ ಬಿಡುವ ಪ್ರಮಾಣ ಪತ್ರದಲ್ಲಿ ಜನ್ಮ ದಿನಾಂಕ ಮತ್ತು ಜನ್ಮ ಸ್ಥಳ ಸ್ಪಷ್ಟವಾಗಿದ್ದರೆ ನ್ಯಾಯಾಲಯಗಳು ಅದಕ್ಕೆ ಬಹಳ ಮಹತ್ವ ನೀಡಿವೆ. ಡಿಜಿಟಲ್ ಯುಗದಲ್ಲೂ ಕಾಗದದ ದಾಖಲೆಗಳಿಗೆ ಇಷ್ಟೊಂದು ಮೌಲ್ಯ ವಿರಲು ಕಾರಣವಿದೆ.
ಯಾಕಂದರೆ ನಾಗರೀಕತ್ವ ಎನ್ನುವುದು ಕಾರ್ಡುಗಳಲ್ಲಿ ಸಿಗುವುದು ಸರಳ ವಿಷಯವಲ್ಲ. ಅದು ನಿಮ್ಮ ಜೀವನ ಪೂರ್ತಿ ಇರುವ ಕಾನೂನು ಗುರುತು. ನೀವು ಯಾವ ದೇಶಕ್ಕೆ ಸೇರಿದವರು ಎಂಬುದು ಅದು ಅಂತಿಮ ಮುದ್ರೆ.
ಇಲ್ಲಿಯವರೆಗೆ ನಾವು ಒಂದು ಸತ್ಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಕೈಯಲ್ಲಿರುವ ಆಧಾರ್, ಪಾನ್ ಕಾರ್ಡ್, ಒಟರ್ ಐಡಿ, ಪಾಸ್ ಪೋರ್ಟ್ ಇವೆಲ್ಲವೂ ನಮ್ಮ ಗುರುತಿನ ದಾಖಲೆಗಳೇ ಹೊರತು ನಾಗರೀಕತ್ವದ ಅಂತಿಮ ತೀರ್ಪು ನೀಡುವ ದಾಖಲೆಗಳೇ ಅಲ್ಲ.
ಸಮಯದೊಂದಿಗೆ ಈ ನಿಯಮಗಳು ಬದಲಾಗುತ್ತಾ ಬಂದಿದೆ. 1950 ರಿಂದ 1987 ರವರೆಗೆ ಒಂದು ಕಾನೂನು ಇದ್ದರೆ 1987/ ರ ನಂತರ ಮತ್ತೊಂದು ಕಾನೂನು ಬಂತು. ಆ ಬಳಿಕ 2004 ರ ನಂತರ ನಿಯಮಗಳು ಮತ್ತಷ್ಟು ಕಠಿಣವಾಯಿತು. ಈ ಎಲ್ಲಾ ಮಾರ್ಗಗಳನ್ನು ನೋಡಿದಾಗ ಒಂದು ಸತ್ಯ ಸ್ಪಷ್ಟವಾಗುತ್ತದೆ. ನಾಗರೀಕತ್ವ ಎನ್ನುವುದು ಭಾವನೆಯ ವಿಷಯವಲ್ಲ. ಅದು ಸಂಪೂರ್ಣವಾಗಿ ಕಾನೂನು ಮತ್ತು ದಾಖಲೆಗಳ ಮೇಲೆ ಆಧಾರಿತ ವಿಷಯ. ನಿಮ್ಮ ಬಳಿ ಸರಿಯಾದ ದಾಖಲೆಗಳಿದ್ದರೆ ನಿಮ್ಮ ನಾಗರೀಕತ್ವವನ್ನು ಯಾರೂ ಸುಲಭವಾಗಿ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ದಾಖಲೆಗಳ ಕೊರತೆ ನಿರ್ಲಕ್ಷ್ಯ ಮತ್ತು ಮಾಹಿತಿ ಇಲ್ಲದಿರುವುದು ಮಾತ್ರ ಅತೀ ದೊಡ್ಡ ಅಪಾಯ.
ಇಲ್ಲಿಯವರೆಗೆ ನಾವು ಎಲ್ಲಾ ವಿಷಯಗಳನ್ನು ತಿಳಿದುಕೊಂಡ ಮೇಲೆ ಒಮ್ಮೆ ಆಳಾವಾಗಿ ಯೋಚಿಸಿ ನೋಡಿ ನಾಗರೀಕತ್ವ ಎನ್ನುವುದು ಒಂದು ಕಾರ್ದು ಅಲ್ಲ ಅಥವಾ ದಾಖಲೆ ಅಲ್ಲ ಅದು ನಿಮ್ಮ ಆಸ್ತಿತ್ವದ ಕಾನೂನು ಬೇರು.
ನೀವು ಯಾವ ದೇಶಕ್ಕೆ ಸೇರಿದವರು ಯಾವ ದೇಶದ ಒಳಗೆ ನಿಮ್ಮ ರಕ್ಷಣೆ ಯೊಳಗೆ ನಿಮ್ಮ ಜೀವನ ಸಾಗಿಸಬೇಕು ಎಂಬುವುದರ ಅಂತಿಮ ನಿರ್ಧಾರವೇ ನಾಗರೀಕತ್ವ.
ಇತ್ತೀಚಿನ ವರ್ಷಗಳಲ್ಲಿ ನಾಗರೀಕತ್ವ ಪರಿಶೀಲನೆ ಎಂಬ ಪದವನ್ನು ನಾವು ಹೆಚ್ಚು ಕೇಳತೊಡಗಿದ್ದೇವೆ.
ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ನಾಗರೀಕತ್ವಕ್ಕೆ ಸಂಬಂದಿಸಿದ ಪರಿಶೀಲನೆ ಪ್ರಕ್ರಿಯೆಗಳು ಆರಂಭವಾಗಿವೆ. ಈ ಪ್ರಕ್ರಿಯೆಗಳಲ್ಲಿ ಒಂದು ವಿಷಯ ಸ್ಪಷ್ಟವಾಗಿ ಹೊರಬಂದಿದೆ .
ಆಧಾರ್, ಒಟರ್ ಕಾರ್ಡ್, ಪಾನ್ ಕಾರ್ಡು, ಅಥವಾ, ಪಾಸ್ಪೋರ್ಟ್ಗಳಿಗಿಂತಲೂ ಹಾಳೆಯ ಮೂಲ ದಾಖಲೆಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಇದು ಅನೇಕರಿಗೆ ಆಶ್ಚರ್ಯ ತಂದಿದೆ.
ಏಕೆಂದರೆ ನಮ್ಮ ದಿನ ನಿತ್ಯದ ಬದುಕಿನಲ್ಲಿ ಡಿಜಿಟಲ್ ಕಾರ್ಡು ಗಳೇ ಎಲ್ಲವೂ ಎಂದು ನಂಬಿ ಕೊಂಡು ಬಂದಿದ್ದೇವೆ. ಆದರೆ ಕಾನೂನಿನ ಅಂತಿಮ ಹಂತದಲ್ಲಿ ನಿರ್ಣಯ ತೆಗೆದುಕೊಳ್ಳುವುದು ನಿಮ್ಮ ಜೀವನದ ಆರಂಭದ ದಾಖಲೆಗಳ ಮೇಲೆ.
ಜನ್ಮ ಪ್ರಮಾಣ ಪತ್ರ, ಶಾಲಾ ದಾಖಲೆಗಳು, ಅಥವಾ ನಾಗರೀಕತ್ವ ಪ್ರಮಾಣ ಪತ್ರ. ಇವೆಲ್ಲ ತೀರ್ಪು ನೀಡುವ ದಾಖಲೆಗಳು ಇಲ್ಲಿ ಗಂಭೀರ ಪ್ರಶ್ನೆ ನಿಮ್ಮ ಮುಂದೆ ಬರುತ್ತದೆ.
ನಿಮ್ಮ ಬಳಿ ಜನ್ಮ ಪ್ರಮಾಣ ಪತ್ರ ಇದೆಯೇ? ಇದ್ದರೆ ಅದು ಸರಿಯಾದ ಪ್ರಾಧಿಕಾರದ ಮೇಲೆ ನೀಡಲ್ಪಟ್ಟಿವಿಯೇ ? ನಿಮ್ಮ ಶಾಲಾ ದಾಖಲೆಗಳ ಜನ್ಮ ಪ್ರಮಾಣ ಪತ್ರದಲ್ಲಿ ಜನ್ಮ ದಿನಾಂಕ ಮತ್ತು ಹೆಸರು ಸರಿ ಇದೆಯೇ ಒಂದು ಅಕ್ಷರದ ತಪ್ಪು ಒಂದು ದಿನಾಂಕದ ವ್ಯತ್ಯಾಸ ಇದೆಲ್ಲ ನಾಳೆ ದೊಡ್ಡ ಕಾನೂನುಗಳ ಸಮಸ್ಯೆ ನಿಮ್ಮ ಮುಂದೆ ಬರಬಹುದು.
ಇಂತಹ ಉದಾಹರಣೆಗಳನ್ನು ಈಗಾಗಲೇ ಅನೇಕ ಜನರ ಜೀವನದಲ್ಲಿ ನೋಡಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹದ್ದು ದೊಡ್ಡ ಸಮಸ್ಯೆಗಳು ಇದೆ. ಹಿಂದಿನ ಕಾಲದಲ್ಲಿ ಅನೇಕ ಜನರು ಮಕ್ಕಳ ಜನ್ಮವನ್ನು ಸಮಯಕ್ಕೆ ಸರಿಯಾಗಿ ನೋಂದಾಯಿಸಲಿಲ್ಲ ಆ ಕಾರಣದಿಂದ ಇಂದಿಗೂ ಲಕ್ಷಾಂತರ ಜನರ ಬಳಿ ಜನ್ಮ ಪತ್ರವೇ ಇಲ್ಲ.
ಇಂದು ನೀವು ಈ ಮಾಹಿತಿಯನ್ನು ಗಂಭೀರವಾಗಿ ತೆಗೆದುಕೊಂಡು ನಿಮ್ಮ ದಾಖಲೆಗಳನ್ನು ಪರಿಶೀಲಿಸಿದರೆ ನಾಳೆ ಅದೇ ಮಾಹಿತಿ ನಿಮ್ಮ ಕುಟುಂಬವನ್ನು ದೊಡ್ಡ ಸಂಕಟದಿಂದ ರಕ್ಷಿಸಬಹುದು. ನಿಮ್ಮ ಮನೆಯ ಹಿರಿಯರ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿ ಮಕ್ಕಳ ಜನ್ಮ ದಿನ ಪ್ರಮಾಣ ಪತ್ರವನ್ನು ಸುರಕ್ಷಿತವಾಗಿ ಇಟ್ಟು ಕೊಳ್ಳಿ ಎಲ್ಲಾ ದಾಖಲೆಗಳಲ್ಲಿ ಹೆಸರು ,ದಿನಾಂಕ, ಸ್ಥಳ ಒಂದೇ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ನಾಗರೀಕತ್ವ ರಾಜಕೀಯ ವಿಷಯವಲ್ಲ. ಅದು ನಿಮ್ಮ ಆಸ್ತಿತ್ವದ ಕಾನೂನು ಭದ್ರತೆ.
ನಿಮ್ಮ ಭವಿಷ್ಯ ಮತ್ತು ನಿಮ್ಮ ಮುಂದಿನ ತಲೆಮಾರಿನ ಭವಿಷ್ಯ ಇದರ ಮೇಲೆ ನಿಂತಿದೆ.
ಈ ರೀತಿಯ ಕಾನೂನು ಜಾಗ್ರತಿ ಸರ್ಕಾರಿ ಮಾಹಿತಿಯನ್ನು ಸರಳವಾಗಿ ಸ್ಪಷ್ಟವಾಗಿ ಪಿ ಎಮ್ ಸೇವಾ ಕರ್ನಾಟಕ ಚಾನೆಲ್ನವರು ತಿಳಿಸಿದ ಮಾಹಿತಿಯನ್ನು ನಿಮಗೆ ಮುಂಬೈ ಕನ್ನಡಿಗರಿಗೆ ಎಚ್ಚರಿಕೆಯ ಗಂಟೆ ಎಂದು ತಿಳಿಸಲು ಪ್ರಯತ್ನ ಮಾಡಿದೆ.




