July 23, 2026
Mumbai News Kannada
ಪ್ರಕಟಣೆ

ಕರ್ನಿರೆ ಶ್ರೀ ದೈವರಾಜ ಕೋರ್ದಬ್ಬು ದೇವಸ್ಥಾನ: ಮಾರ್ಚ್ 25 ರಿಂದ 29 ರವರೆಗೆ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ







ಮುಲ್ಕಿ: ಮುಲ್ಕಿ ತಾಲೂಕಿನ ಕರ್ನಿರೆಯ ಶ್ರೀ ದೈವರಾಜ ಕೋರ್ದಬ್ಬು ದೇವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ನೇಮೋತ್ಸವವು ಮಾರ್ಚ್ 25 ರಿಂದ 29 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

​ಕಾರ್ಯಕ್ರಮದ ವಿವರಗಳು:

  • ಮಾರ್ಚ್ 25: ಬೆಳಿಗ್ಗೆ 8ಕ್ಕೆ ಗಣಹೋಮ, 9ಕ್ಕೆ ಉಗ್ರಾಣ ಮುಹೂರ್ತ. ಸಂಜೆ 4ಕ್ಕೆ ಕರ್ನಿರೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ.
  • ಮಾರ್ಚ್ 26: ಸಂಜೆ 5.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 6ರಿಂದ ‘ಯಕ್ಷ ತೆಲಿಕೆ’, ರಾತ್ರಿ 8ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 9ಕ್ಕೆ ‘ಲೀಲಾಮಾನುಷ ವಿಗ್ರಹ’ ಪೌರಾಣಿಕ ಯಕ್ಷಗಾನ ಪ್ರದರ್ಶನ.
  • ಮಾರ್ಚ್ 27: ಬೆಳಿಗ್ಗೆ 7ಕ್ಕೆ ಅದ್ಯ ಗಣಯಾಗ, ಕಲಶಪ್ರತಿಷ್ಠೆ, ಅಧಿವಾಸ ಹೋಮ. ಬೆಳಿಗ್ಗೆ 9.50ಕ್ಕೆ ದೈವಗಳ ಪ್ರತಿಷ್ಠೆ, ಕುಂಭಾಭಿಷೇಕ, ಪ್ರಸನ್ನ ಪೂಜೆ. ಬೆಳಿಗ್ಗೆ 11ಕ್ಕೆ ದೈವದರ್ಶನ, ಮಧ್ಯಾಹ್ನ 12.30ಕ್ಕೆ ಭಜನಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ. ಸಂಜೆ 7ಕ್ಕೆ ಧಾರ್ಮಿಕ ಸಭೆ, ರಾತ್ರಿ 8ಕ್ಕೆ ಅನ್ನಸಂತರ್ಪಣೆ. ರಾತ್ರಿ 8.30ರಿಂದ ‘ಶಿವದೂತ ಗುಳಿಗೆ’ ತುಳು ನಾಟಕ ಪ್ರದರ್ಶನ.
  • ಮಾರ್ಚ್ 28: ಬೆಳಿಗ್ಗೆ 10ಕ್ಕೆ ಚಪ್ಪರ ಮುಹೂರ್ತ, ಸಂಜೆ 7ಕ್ಕೆ ಭಂಡಾರ ಇಳಿಯುವುದು, ರಾತ್ರಿ 8ಕ್ಕೆ ಅನ್ನಸಂತರ್ಪಣೆ, ರಾತ್ರಿ 9ರಿಂದ ನೇಮೋತ್ಸವ.
  • ಮಾರ್ಚ್ 29: ಬೆಳಿಗ್ಗೆ 9 ಗಂಟೆಗೆ ನೇಮೋತ್ಸವ

​ಮಾರ್ಚ್ 27ರ ರಾತ್ರಿ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ ವಹಿಸಲಿದ್ದಾರೆ. ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ (ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಎನ್.ಟಿ. ಪೂಜಾರಿ (ಕಾರ್ಯಾಧ್ಯಕ್ಷರು, ಬಿಲ್ಲವ ಚೇಂಬರ್ ಆಫ್ ಕಾಮರ್ಸ್), ಶಂಕರ ಶೆಟ್ಟಿ ವಿರಾರ್, ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಮುಂಡ್ಕೂರು ರತ್ನಾಕರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಎರ್ಮಳ ರೋಹಿತ್ ಹೆಗ್ಡೆ, ವಿಜಯಕುಮಾರ್ ಶೆಟ್ಟಿ (ಕಲಾ ಜಗತ್ತು) ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ದಾನಿಗಳನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಗುವುದು.

ಗೌರವಾಧ್ಯಕ್ಷರುಗಳಾದ ಹರೀಶ್ ಕುಮಾರ್ ಹೆಚ್. ಬೋಂಟ (ಕೊಪ್ಪಳ), ರವೀಂದ್ರ ಸಾಧು ಶೆಟ್ಟಿ (ಹೊಸಮನೆ, ಕರ್ನಿರೆ), ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿ (ಕರ್ನಿರೆ ಗುತ್ತು), ಪದಾಧಿಕಾರಿಗಳು, ಸ್ವಾಗತ ಸಮಿತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಭಕ್ತಾದಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.



Related posts

ಡಿ.10 ರಂದು ಬಿಲ್ಲವ ಭವನದಲ್ಲಿ ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ “ಪಿರಾವುಡು ಒರಿ ಉಲ್ಲೆ”ನಾಟಕ ಪ್ರದರ್ಶನ  

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಜುಲೈ 27ರಂದು ಶ್ರೀ ರಜಕ ಸಂಘ ಮುಂಬಯಿಯ 86ನೇ ವಾರ್ಷಿಕ ಮಹಾ ಸಭೆ

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡಬಿದಿರೆ : ಮೇ.3-4 ಶತಮಾನೋತ್ಸವ ಸಂಭ್ರಮ

Mumbai News Desk

ಆ 26. ಕುಲಾಲ ಸಂಘ ಮುಂಬಯಿ: ಥಾಣೆ, ಕಸರ, ಖರ್ಜತ್, ಭಿವಂಡಿ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನ ಉದ್ಘಾಟನಾ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk