September 6, 2026
Mumbai News Kannada
ತುಳುನಾಡು

ಮುಲ್ಕಿ : ಹೊಸ ಅಂಗಣ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ಸವೀನ್ ಪಂಬದ ಅವರಿಗೆ ಸನ್ಮಾನ





ಮುಲ್ಕಿಯ ಹೊಸ ಅಂಗಣ ಮಾಸ ಪತ್ರಿಕೆಯ ವತಿಯಿಂದ ಆಯೋಜಿಸಲಾಗಿದ್ದ ‘ತಿಂಗಳ ಬೆಳಕು’ ಸರಣಿ ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಪತ್ರಿಕೆಯನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಮುಲ್ಕಿಯ ಪುನರೂರು ಟ್ಯೂರಿಸ್ಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಈ ವಿಶೇಷ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಸವೀನ್ ಪಂಬದ ಅವರನ್ನು ಗುರುತಿಸಿ, ಅವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲಾಯಿತು. ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಮುಂದಿನ ಪೀಳಿಗೆಗೆ ಮತ್ತು ಸಾಧಕರಿಗೆ ಉತ್ತಮ ಕೆಲಸ ಮಾಡಲು ದೊಡ್ಡ ಪ್ರೇರಣೆಯಾಗುತ್ತದೆ ಎಂದು ಪುನರೂರು ಆಶಯ ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಗುತ್ತಿನಾರ್ ವಿಶು ಕುಮಾರ್ ಕಲ್ಲಟ್ಟೆ, ಕೇಶವಾನಂದ ಸ್ವಾಮೀಜಿ ಚಿತ್ರಾಪು, ಅತಿಕಾರು ಬೆಟ್ಟು ಗ್ರಾ. ಪ. ಮಾಜಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಹಾಗೂ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಮೇಶ್ ಅಮೀನ್ ಕೊಕ್ಕದಕಲ್, ಸರೋಜಿನಿ ಸುವರ್ಣ, ಜನಾರ್ದನ್ ಬಂಗೇರ ಕೆ.ಎಸ್ ರಾವ್ ನಗರ, ಕರುಣಾಕರ ಸುವರ್ಣ, ನಿವೃತ್ತ ಬ್ಯಾಂಕ್ ಪ್ರಬಂಧಕ ಸುರೇಂದ್ರ ಜಿ. ಶೆಣೈ, ವಾಸು ಪೂಜಾರಿ ಚಿತ್ರಾಪು, ಜಯಪಾಲ ಶೆಟ್ಟಿ ಐಕಳ, ಉದ್ಯಮಿ ಜೋನ್ ಕ್ವಾಡ್ರಸ್, ನಂದಾ ಪಾಯಸ್ , ವಕೀಲ ರಮೇಶ್ ಕಾಮತ್ ಮತ್ತು ಜಯರಾಮ್ ಬಿ. ಎಸ್ ಮುಂತಾದ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು, ವಾಸು ಪೂಜಾರಿ ಧನ್ಯವಾದ ಅರ್ಪಿಸಿದರು ಹಾಗೂ ದಿನೇಶ್ ಕೊಲ್ನಾಡು ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.



Related posts

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk

ಗುರುಪುರ ಬಂಟರ ಮಾತೃ ಸಂಘ (ರಿ.)13ನೇ ವಾರ್ಷಿಕ ಸಮಾವೇಶ ಹಾಗೂ ನೃತ್ಯ ಸಂಗಮ-2026

Mumbai News Desk

ಕೊಂಡೆವೂರು ಮಠದಲ್ಲಿ ಪ್ರತಿಷ್ಠಾವರ್ಧಂತಿ, ನವಚಂಡಿಕಾ ಯಾಗ . ಧಾರ್ಮಿಕ ಸಭೆ.

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಹಾ ಸಂಕಲ್ಪದ 19ನೇ ದಿನ – ಕಾಪು ಶ್ರೀ ಹಳೆ ಮಾರಿಗುಡಿಗೆ ಪ್ರದಕ್ಷಿಣೆ.

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಮೂಲ್ಕಿ : ಆಗಸ್ಟ್ 17ರಂದು ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ “ಮೂಲ್ಕಿಯ ಕೀರ್ತಿಶೇಷ ಸಾಧಕರು” ಕೃತಿ ಬಿಡುಗಡೆ ಸಮಾರಂಭ

Mumbai News Desk