July 22, 2026
Mumbai News Kannada
ಸುದ್ದಿ

ಉದ್ಯಮಿ ಕಾಂತಿ ಶೆಟ್ಟಿಯವರಿಗೆ ‘ಉದ್ಯೋಗ ಯೋಗದಾನ ಪುರಸ್ಕಾರ’







ಬೆಂಗಳೂರು: ಬಂಟರ ಸಂಘ ಬೆಂಗಳೂರಿನ ಉಪಾಧ್ಯಕ್ಷೆ , ಉದ್ಯಮಿ ಹಾಗೂ ಸಮಾಜ ಸೇವಕಿ ಕಾಂತಿ ಶೆಟ್ಟಿ ಅವರಿಗೆ ಮಾರ್ಚ್ 29 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ‘ಉದ್ಯೋಗ ಯೋಗದಾನ ಪುರಸ್ಕಾರ – 2026’ ಪ್ರಶಸ್ತಿಯನ್ನು ಚಿತ್ರನಟಿ ಶಿಲ್ಪಾ ಶೆಟ್ಟಿ ಅವರು ಪ್ರದಾನ ಮಾಡಿ ಸನ್ಮಾನಿಸಿದರು,
ಮೂಲತಃ ತುಳುನಾಡಿನವರಾದ ಕಾಂತಿ ಶೆಟ್ಟಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ‘Aircom Solutions Private Limited’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಮತ್ತು ‘ನಮ್ಮ ಕುಟೀರ’ ಫೌಂಡೇಶನ್‌ನ ಸಂಸ್ಥಾಪಕ ಟ್ರಸ್ಟಿಯಾಗಿ ಉದ್ಯಮ ಹಾಗೂ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


ಇವರು ಕೇವಲ ಉದ್ಯಮ ಕ್ಷೇತ್ರವಷ್ಟೇ ಅಲ್ಲದೆ, ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದು, ಯಶಸ್ವಿ ಕನ್ನಡ ಚಲನಚಿತ್ರ ‘Case No. 18/9’ ಗೆ ಸಹ-ನಿರ್ಮಾಪಕಿಯಾಗಿ ಹಾಗೂ ‘ಚೆಲುವಿ’ ಎಂಬ ಕನ್ನಡ ಧಾರವಾಹಿಯ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬಿಜೆಪಿಯ ವಕ್ತಾರೆಯಾಗಿ ಮತ್ತು ವಿವಿಧ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಇವರ ನಿರಂತರ ಸಮಾಜಮುಖಿ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (08/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಜನವಿಕಾಸ ಸಮಿತಿ ಪುನರೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk

ವಿಜಯಾ ಕಾಲೇಜು ಮೂಲ್ಕಿ ಗ್ಲೋಬಲ್ ಹಳೆ ವಿದ್ಯಾರ್ಥಿಗಳ ಅಸೋಸಿಯೇಶನ್, ಸಾಧಕರಿಗೆ ಸನ್ಮಾನ,

Mumbai News Desk

ಚಿತ್ರರಂಗದ ಮಿನುಗು ತಾರೆ ರೀಟಾ ಆರ್. ಅಂಚನ್ ವಿಧಿವಶ

Mumbai News Desk

ದಿವಿಜ ಚಂದ್ರಶೇಖರ್ ನಿಧನ

Mumbai News Desk