July 27, 2026
Mumbai News Kannada
ಸುದ್ದಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ :ಸ್ವಾಗತ ಗೋಪುರ(ಮಹಾದ್ವಾರ)ದ  ಮತ್ತೆ ತಮ್ಮದೇ ಹೆಸರಲ್ಲಿ‌ ನಿರ್ಮಿಸುವಂತೆ ಐಕಳ ಹರೀಶ್ ಶೆಟ್ಟಿಯವರಿಂದ ದೇವಸ್ಥಾನದ ಆಡಳಿತ ಮಂಡಳಿಗೆ  ಮನವಿ.







  ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ‌ ಅಭಿವೃದ್ಧಿ ಕಾರ್ಯಗಳು‌ ನಡೆಯಲಿದ್ದು ಹೆದ್ದಾರಿ ಅಗಲೀಕರಣ ಸಂದರ್ಭ ಐಕಳ‌ ಹರೀಶ್ ಶೆಟ್ಟಿಯವರು ತಮ್ಮ ಹೆತ್ತವರು ಹಾಗೂ ಕುಟುಂಬಿಕರ ನೆನಪಿಗೆ 1999 ರಲ್ಲಿ‌ ನಿರ್ಮಿಸಿದ್ದ ಸ್ವಾಗತ ಗೋಪುರ(ಮಹಾದ್ವಾರ)ದ ಅಸ್ತಿತ್ವ ಅತಂತ್ರದಲ್ಲಿದ್ದು‌ ಅದನ್ನು ಮತ್ತೆ ತಮ್ಮದೇ ಹೆಸರಲ್ಲಿ‌ ನಿರ್ಮಿಸುವಂತೆ ಐಕಳ ಹರೀಶ್ ಶೆಟ್ಟಿಯವರು ದೇವಳದ ಅನುವಂಶಿಕ ಮೊಕ್ತೇಸರರಾದ ಮುಲ್ಕಿ ಸೀಮೆಯ ಅರಸರೂ‌ ಆದ ದುಗ್ಗಣ್ಣ ಸಾವಂತರಿಗೆ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿಯವರಿಗೆ
ಮನವಿ ಸಲ್ಲಿಸಿದರು.

    ಈ ಹಿಂದೆ 1999 ರಲ್ಲಿ ಈ ಸ್ವಾಗತ ಗೋಪುರವನ್ನು ತನ್ನ ಹೆತ್ತವರು,ಸಹೋದರರು ಹಾಗೂ ಮನೆಯವರ ಹೆಸರಲ್ಲಿ ನಿರ್ಮಿಸಲಾಗಿದ್ದು ಇದೀಗ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಹೆದ್ದಾರಿ ಅಗಲೀಕರಣದ ಕಾರಣದಿಂದ ತೆಗೆಯಲಾಗುತ್ತಿದ್ದು ಭಾವನಾತ್ಮಕ ಸ್ಪರ್ಶ ಇರುವ ಈ ಗೋಪುರವನ್ನು ಮತ್ತೆ ಅದೇ ಹೆಸರಲ್ಲಿ‌ ನಿರ್ಮಿಸುವರೇ ದೇವಳ ಸಹಕರಿಸಬೇಕೆಂದು ಐಕಳ‌ ಹರೀಶ್ ಶೆಟ್ಟಿ ಆಡಳಿತ ವರ್ಗವನ್ನು ವಿನಂತಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತ ಪಳ್ಳಿ ಮತ್ತು ದುಗ್ಗಣ್ಣ ಸಾವಂತರು “25 ವರ್ಷದ ಹಿಂದೆ ಸ್ವಾಗತ ಗೋಪುರ ನಿರ್ಮಿಸಿದ್ದು ಅಭಿನಂದನೀಯ, ದೇವಳದ ಸಮಗ್ರ ಅಭಿವೃದ್ದಿಗೆ ರೂಪುರೇಷೆ ನಡೆಯುತ್ತಿದ್ದು, ಸ್ವಾಗತ ಗೋಪುರ ನಿರಗಮಾಣದ ಬಗ್ಗೆ  ಅಭಿವೃದ್ದಿ ಸಮಿತಿ ಜೊತೆ ಚರ್ಚಿಸಿ ತಿಳಿಸಲಾಗುವುದು” ಎಂದರು. 
  ಈ ಸಂದರ್ಭ ಹರೀಶ್ ಶೆಟ್ಟಿಯವರ ಸಹೋದರ ಗುಣಪಾಲ ಶೆಟ್ಟಿ ಐಕಳ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಸಂಚಾಲಕರಾದ ಕೊಲ್ಲಾಡಿ‌ ಬಾಲಕೃಷ್ಣ ರೈ,ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ,
 ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಶರತ್ ಶೆಟ್ಟಿ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಮಾಜಿ ಅಧ್ಯಕ್ಷ ಪುರುಶೋತ್ತಮ‌ ಶೆಟ್ಟಿ,  ಕಾರ್ಯಕಾರಿ‌ ಸಮಿತಿಯ ಸದಸ್ಯ ಸತೀಶ್ಚಂದ್ರ ಹೆಗ್ಡೆ,ನಿಶಾಂತ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ರೋಹಿಣಿ‌ ಶೆಟ್ಟಿ,ಶಮೀನ ಜಿ.ಆಳ್ವ, ಭಾರತಿ‌ ರೈ,ಯುವ ವಿಭಾಗದ ದಾಮೋದರ ಶೆಟ್ಟಿ ,ಪುಷ್ಪರಾಜ ಚೌಟ, ಮತ್ತು ಐಕಳ ಹರೀಶ್ ಶೆಟ್ಟಿಯವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Related posts

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, ಏಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ಚುನಾವಣೆ.

Mumbai News Desk

ಹಾಸ್ಯ ನಟ ರಾಕೇಶ್‌ ಪೂಜಾರಿ ಮನೆಗೆ ಕೊನೆಗೂ ರಿಷಬ್‌ ಶೆಟ್ಟಿ ದಂಪತಿ ಭೇಟಿ

Mumbai News Desk

ಪಡುಬಿದ್ರೆ-ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ತ್ವಗಂಧ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ದೀಪಾ ಭಾಸ್ಕರ್ ಕಾಂಚನ್ ಗೆ  ಶೇ 85.67% ಅಂಕ 

Mumbai News Desk

ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ), ಕೆ.ಎಸ್.ರಾವ್ ನಗರ ಮೂಲ್ಕಿ ಇದರ ಮಾಜಿ ಅಧ್ಯಕ್ಷರ ಧರ್ಮಪತ್ನಿ ಶ್ರೀ ಕುಸುಮ ಆರ್ ಸುವರ್ಣ ನಿಧನ

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ಜೀವಿತ್ ಬಿ ಕುಲಾಲ್  88.50 ಅಂಕ

Mumbai News Desk