31 C
Mumbai
September 11, 2026
Mumbai News Kannada
ಪ್ರಕಟಣೆ

ಎ. 25ರಂದು ಮೂಡುಶೆಡ್ಡೆಯಲ್ಲಿ ಕಟೀಲು ಮೇಳದಿಂದ 44ನೇ ವರ್ಷದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಸೇವೆ





ದಿನಾಂಕ 25-04-2026ರ ಶನಿವಾರದಂದು ಮೂಡುಶೆಡ್ಡೆಯ ಆದಿಕ್ಷೇತ್ರ ಜಾರ ಶ್ರೀ ಜಾರಂದಾಯ ದೈವಸ್ಥಾನದ ಬಳಿ ಇರುವ ಭವ್ಯ ರಂಗಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ಸೇವೆಯು ಜರುಗಲಿದೆ. ಶೆಡ್ಡೆ, ಜಾರ ಹಾಗೂ ಊರ ಹತ್ತು ಸಮಸ್ತರು 44ನೇ ವರ್ಷದ ಸೇವೆಯಾಟವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಂದು ಸಂಜೆ 6:15ಕ್ಕೆ ಸರಿಯಾಗಿ ಶ್ರೀ ದೇವರ ಚೌಕಿ ಪೂಜೆ ನಡೆಯಲಿದ್ದು, ಸಂಜೆ 6:30ಕ್ಕೆ ಯಕ್ಷಗಾನ ಪ್ರದರ್ಶನ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ರಾತ್ರಿ 8:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಲಿದ್ದು, ಕಲಾಭಿಮಾನಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ವಿನಂತಿಸಿದ್ದಾರೆ.



Related posts

ಆ. 8: ವರ್ಲಿ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’

Mumbai News Desk

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 18 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ

Mumbai News Desk

ಡಿ.25 ರಂದು “ನೆರವು” ಆಶಾಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ‌ ಸಮಾರಂಭ: 4 ಸಾವಿರ ಕುಟುಂಬಗಳಿಗೆ 9.5 ಕೋ. ರೂ ನೆರವು

Mumbai News Desk

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk