May 27, 2026
Mumbai News Kannada
ಸುದ್ದಿ

ಕಾಸರಗೋಡಿನಲ್ಲಿ ಕನ್ನಡ ಸಾಂಸ್ಕೃತಿಕ ಉತ್ಸವ ಸಂಪನ್ನ: ಮುಂಬಯಿ ಪತ್ರಕರ್ತ ಸುಭಾಷ್ ಶಿರಿಯ ಅವರಿಗೆ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿ ಪ್ರದಾನ





ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಸಾಂಸ್ಕೃತಿಕ ಕಂಪು ಮತ್ತು ಪತ್ರಿಕೋದ್ಯಮದ ಸಾಧನೆಯನ್ನು ಸಂಭ್ರಮಿಸುವ ಅಪೂರ್ವ ಕ್ಷಣಗಳಿಗೆ ಕುಡಾಲ್ ಮೇರ್ಕಳ ಸಾಕ್ಷಿಯಾಯಿತು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರಿನ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ ಮೇ 16ರಂದು ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಳದ ಸುಬ್ಬಯ್ಯ ಕಟ್ಟೆ ಕಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಕನ್ನಡ ಸಾಂಸ್ಕೃತಿಕ ಉತ್ಸವ 2026 ಹಾಗೂ ದತ್ತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ಈ ಸಂದರ್ಭದಲ್ಲಿ ಮುಂಬಯಿಯ ಹಿರಿಯ ಪತ್ರಕರ್ತ ಸುಭಾಷ್ ಶಿರಿಯ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.


ಬೆಳಿಗ್ಗೆ ವೈವಿಧ್ಯಮಯ ಜಾನಪದ ಕಲಾತಂಡಗಳೊಂದಿಗೆ ನಡೆದ ಭವ್ಯ ಶೋಭಾಯಾತ್ರೆಯು ಸಾಂಸ್ಕೃತಿಕ ಉತ್ಸವಕ್ಕೆ ರಂಗು ನೀಡಿತು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಸಣ್ಣ ನೀರಾವರಿ ಸಚಿವರಾದ ಮಾನ್ಯ ಶ್ರೀ ಎನ್ ಎಸ್ ಭೋಸರಾಜು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾಸರಗೋಡಿನ ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಗಡಿಭಾಗದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪತ್ರಕರ್ತರ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಪಾತ್ರ ದೊಡ್ಡದಾಗಿದೆ ಎಂದು ಹರಸಿದರು.
ಕರ್ನಾಟಕ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ಮಾನ್ಯ ಶ್ರೀ ರುದ್ರಪ್ಪ ಲಮಾಣಿ ಅವರು ಮುಂಬಯಿಯ ಪತ್ರಕರ್ತ ಸುಭಾಷ್ ಶಿರಿಯ ಅವರಿಗೆ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಾನ್ಯ ಕೆ ವಿ ಪ್ರಭಾಕರ್ ಹಾಗೂ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶ್ರೀ ಟಿ ಎಂ ಶಾಹಿದ್ ಅವರು ಮಾತನಾಡಿ, ಗಡಿಭಾಗದ ಕನ್ನಡಿಗರ ಹಿತರಕ್ಷಣೆ ಮತ್ತು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸರಕಾರ ಮತ್ತು ಪ್ರಾಧಿಕಾರವು ಸದಾ ಬದ್ಧವಾಗಿದೆ ಎಂದು ಭರವಸೆ ನೀಡಿದರು.


ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಮತ್ತು ಹೆಸರಾಂತ ಪತ್ರಕರ್ತರನ್ನು ಗುರುತಿಸಿ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳಿಂದ ಮೂಡಿಬಂದ ಜಾನಪದ ವೈವಿಧ್ಯಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದ ಸಾರ್ವಜನಿಕರ ಮನ ಸೆಳೆಯುವಲ್ಲಿ ಯಶಸ್ವಿಯಾದವು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಪತ್ರಕರ್ತರು ಹಾಗೂ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ಶಿರಿಯ ಗ್ರಾಮದಿಂದ ಮುಂಬೈ ಪತ್ರಿಕೋದ್ಯಮದವರೆಗೆ: ಹಿರಿಯ ವರದಿಗಾರ ಶಿರಿಯ ಅವರ ಸಾಧನೆಯ ಯಶೋಗಾಥೆ

ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಶಿರಿಯ ಗ್ರಾಮದಲ್ಲಿ ನಾರಾಯಣ ಮತ್ತು ಸೀತಮ್ಮ ದಂಪತಿಯ ಪುತ್ರನಾಗಿ ಜನಿಸಿ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಎಸ್ ಎಸ್ ಎಲ್ ಸಿ ಶಿರಿಯ ಸರಕಾರಿ ಶಾಲೆಯಲ್ಲಿ ಮುಗಿಸಿ ಮುಂದಿನ ಕಾಲೇಜ್ ಶಿಕ್ಷಣವನ್ನು ಮುಂಬೈಯ ಸೋಮಯ್ಯ ಕಾಲೇಜ್ ನಲ್ಲಿಪಡೆದು ನಂತರ ಮೆಕ್ಯಾನಿಕಲ್ ಡಿಪ್ಲೋಮಾ ತಾಂತ್ರಿಕ ವಿದ್ಯಾಭ್ಯಾಸವನ್ನು ಪಡೆದರು, ಬಾಲ್ಯದ ಆಸೆಯಂತೆ ಪತ್ರಿಕೋದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿ ಕೆಲವು ವರ್ಷ ಮಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ಹೊಸದಿಗಂತ ದೈನಿಕದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ. ಯು ಟಿವಿ ಮುಂಬೈ ಯಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದೀರಿ. ನಂತರ 2000 ಇಸವಿಯಲ್ಲಿ ಉದಯವಾಣಿ ಮುಂಬಯಿ ಆವೃತ್ತಿಯ ಪ್ರಾರಂಭವಾದ ಅಂದಿನಿಂದ ಉದಯವಾಣಿಯ ಮುಂಬೈಯ ವರದಿಗಾರರಾಗಿ ಕಳೆದ 26 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬಯಿಯ ತುಳು ಕನ್ನಡಿಗರಲ್ಲಿ ಶಿರಿಯ ಎಂದೇ ಪ್ರಸಿದ್ಧಿಯನ್ನು ಪಡೆದು. ಮುಂಬೈ ಅನೇಕ ವರದಿಗಳನ್ನು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಿ ಮೆಚ್ಚುಗೆಯನ್ನು ಗಳಿಸಿದ್ದಾರೆ, ಮಹಾನಗರನ್ನು ತಲ್ಲಣ ಗೊಳಿಸಿದ 2005 ಜುಲೈ ಭೀಕರ ಮಳೆ ಪ್ರವಾಹ ಹಾಗೂ 2008 ನವಂಬರ್ 26ರ ಮಹಾನಗರದ ಭಯೋತ್ಪಾದಕ ದಾಳಿ ವರದಿಗಳನ್ನು ಹಾಗೂ ನೈಜ ಚಿತ್ರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸಾಹಸಮಯಿ ವರದಿಗಾರರೆಂದು ಎಲ್ಲರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಮಾತ್ರವಲ್ಲದೆ ವಾಣಿಜ್ಯ ನಗರದ ವಿವಿಧ ವರದಿಗಳನ್ನು, ಚಿತ್ರಜಗತ್ತಿನ ವರದಿಗಳನ್ನು, ಮುಂಬೈ ಸಾಂಸ್ಕೃತಿಕ ಬದುಕುಗಳನ್ನು ಪತ್ರಿಕೆಯ ಮೂಲಕ ಜನರಿಗೆ ತಲುಪುವಂತೆ ಮಾಡಿದ್ದಾರೆ. ತುಳು ಕನ್ನಡಿಗರ ವಿವಿಧ ಸಂಘ ಸಂಸ್ಥೆಗಳ ವರದಿಗಳನ್ನು ಪತ್ರಿಕೆಯ ಮೂಲಕ ಪ್ರಕಟಿಸಿ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣಿ ಕರ್ತರಾಗಿದ್ದಾರೆ.
ಯಾವತ್ತೂ ಸ್ವಂತ ಪ್ರಚಾರವನ್ನು ಬಯಸದೆ ನಿಜವಾದ ವರದಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಕರ್ತವ್ಯವೆಂದು ಬಗೆದು ಕಾರ್ಯನಿರ್ವಹಿಸುತ್ತ ಎಲೆಮರೆಕಾಯಿಯಂತೆ ಹತ್ತು ಹಲವಾರು ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದಾಂಪತ್ಯ ಜೀವನದಲ್ಲಿ ಪತ್ನಿ ಜಯಲಕ್ಷ್ಮಿ ಮುಂಬೈಯಲ್ಲಿ ಶಿಕ್ಷಕಿಯಾಗಿದ್ದು. ಒಬ್ಬ ಪುತ್ರ ಹಾಗೂ ಒಬ್ಬಳು ಪುತ್ರಿ ಯೊಂದಿಗೆ ಸುಖ ಜೀವನವನ್ನು ನಡೆಸುತ್ತಿರುವರು.
ಇವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿಯನ್ನು ನೀಡಿರುವರು. ಇವರಿಗೆ ಅಜೆಕಾರು ಕಲಾಭಿಮಾನಿ ಬಳಗದಿಂದ ಯಕ್ಷ ರಕ್ಷಾ ಪ್ರಶಸ್ತಿ, ಉಡುಪಿ ಮಠದಿಂದ ಶ್ರೀ ಕೃಷ್ಣ ಗೀತಾ ಅನುಗ್ರಹ ಪ್ರಶಸ್ತಿ, ಶ್ರೀ ಶಾರದಾ ಸೇವಾ ಸಮಿತಿ ಮುಂಬಯಿ, ಜೈಹಿಂದ್ ಸ್ಪೋರ್ಟ್ಸ್ ಕ್ಲಬ್, ವೈಎಂಬಿಎ, ಸಾಪಲ್ಯ ಸೇವಾ ಸಂಘ, ಮುಂತಾದ ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದ್ದಾರೆ. ಇವರು ಮೊಯ ಮುಖವಾಣಿ ಮೊಯರ್ ಮಾಸಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.



Related posts

ಪಶ್ಚಿಮ ಏಷ್ಯಾ ಸಂಘರ್ಷ: ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆ ಮುಂಬೈ ತಲುಪಿದ ಎಲ್‌ಪಿಜಿ ತುಂಬಿದ ಹಡಗು

Mumbai News Desk

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್, ಕಲ್ಯಾಣ್ ವತಿಯಿಂದ ಗಣೇಶಪುರಿಯಲ್ಲಿ  ಭಂಡಾರ ಸೇವೆ ಸಂಪನ್ನ

Mumbai News Desk

ಕತಾರ್ ಬಂಟರ ಸಂಘದ ಪದಾಧಿಕಾರಿಗಳಿಗೆ ಒಕ್ಕೂಟದಿಂದ ಗೌರವ. 

Mumbai News Desk

ಸಮಾಜ ಸೇವಕಿ ವಿಮಲಾ ಎಲ್ ಸಾಲ್ಯಾನ್ ನಿಧನ

Mumbai News Desk

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು

Mumbai News Desk